ಜಲಾಶಯದ ವರದಿ: ಶಿವಮೊಗ್ಗ ಜಿಲ್ಲೆಯ ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟ.
ಲಿಂಗನಮಕ್ಕಿ ಜಲಾಶಯ
1819 ಅಡಿ ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 1749.25 ಅಡಿ ಇದೆ. ಕೇವಲ 17.60 ಟಿಎಂಸಿ ಸಂಗ್ರಹವಿದೆ. ಸದ್ಯ ಜಲಾಶಯಕ್ಕೆ 891 ಕ್ಯೂಸೆಕ್ ಒಳಹರಿವಿದೆ. ವಿದ್ಯುತ್ ಉತ್ಪಾದನೆ ಸೇರಿದಂತೆ ಒಟ್ಟು ಹೊರಹರಿವು 3204 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 1762.75 ಅಡಿ ನೀರಿತ್ತು. 30.71 ಟಿಎಂಸಿ ಸಂಗ್ರಹವಿತ್ತು.

ಭದ್ರಾ ಜಲಾಶಯ
186 ಅಡಿ ಗರಿಷ್ಠ ಮಟ್ಟದ ಭದ್ರಾ ಜಲಾಶಯದಲ್ಲಿ ಇಂದಿನ ಮಟ್ಟ 136 ಅಡಿ 9 ಇಂಚು ದಾಖಲಾಗಿದೆ. ಸದ್ಯ 24.727 ಟಿಎಂಸಿ ನೀರು ಸಂಗ್ರಹವಿದೆ. ಪ್ರಸ್ತುತ ಜಲಾಶಯಕ್ಕೆ 128 ಕ್ಯೂಸೆಕ್ ಒಳಹರಿವಿದೆ. ವಿವಿಧ ನಾಲೆಗಳು ಹಾಗೂ ನದಿಗೆ ಒಟ್ಟು 441 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ 143 ಅಡಿ 6 ಇಂಚು ನೀರಿತ್ತು. 29.351 ಟಿಎಂಸಿ ಸಂಗ್ರಹವಿತ್ತು.

ತುಂಗಾ ಜಲಾಶಯ
ಗರಿಷ್ಠ 588.24 ಮೀಟರ್ ಮಟ್ಟದ ತುಂಗಾ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 587.02 ಮೀಟರ್ ಇದೆ. 2.567 ಟಿಎಂಸಿ ಜಲಸಂಗ್ರಹವಿದೆ. ಸದ್ಯ ಜಲಾಶಯಕ್ಕೆ 906 ಕ್ಯೂಸೆಕ್ ಒಳಹರಿವಿದೆ. ನದಿ ಮತ್ತು ಕುಡಿಯುವ ನೀರು ಸೇರಿ ಒಟ್ಟು 142 ಕ್ಯೂಸೆಕ್ ಹೊರಹರಿವು ಇದೆ. ಕಳೆದ ವರ್ಷ 587.75 ಮೀಟರ್ ನೀರಿತ್ತು. ಒಟ್ಟು ಸಂಗ್ರಹ 2.963 ಟಿಎಂಸಿ ಇತ್ತು.