ವಿದ್ಯುತ್‌ ಶಾಕ್‌: ಬಾವಿ ನೀರು ಖಾಲಿ ಮಾಡುವಾಗ ಅವಘಡ, ವ್ಯಕ್ತಿ ಸಾವು

ರಿಪ್ಪನ್‌ಪೇಟೆ: ನಿರ್ಮಾಣ ಹಂತದ ಬಾವಿ ನೀರು ಖಾಲಿ ಮಾಡಲು, ಮೋಟಾರ್ ಚಾಲನೆ ಮಾಡುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಣಂದೂರು ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ (59) ಮೃತ ದುರ್ದೈವಿ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಮನೆ ಹಿಂಭಾಗದಲ್ಲಿ ನಿರ್ಮಾಣ ಮಾಡುತ್ತಿದ್ದ ತೆರೆದ ಬಾವಿಯಲ್ಲಿ ನೀರು ನಿಂತಿದ್ದು, ಇನ್ನಷ್ಟು ಆಳ ತೊಡಲು ಅಡಚಣೆಯಾದ ಕಾರಣ ಮೋಟಾರ್‌ನಿಂದ ನೀರು ಮೇಲೆ ತರಲು ವಯರ್ ಅಳವಡಿಸುತ್ತಿದ್ದಾಗ ವಿದ್ಯುತ್ ಅವಘಡ ಸಂಭವಿಸಿದೆ. ಮೃತರಿಗೆ ಪತ್ನಿ ಪುತ್ರ, ಪುತ್ರಿ ಇದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RIPPONPETE-NEWS-GRAPHICS-BY-SHIVAMOGGA-LIVE

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion