ಶಿವಮೊಗ್ಗ: ಚಿನ್ನದ ಸರ ಸಿಕ್ಕ ವಿಚಾರಕ್ಕೆ ಉಂಟಾದ ವಿವಾದದ ಹಿನ್ನೆಲೆ, ನಾಲ್ವರು ಯುವಕರ ಗುಂಪು ಮನೆಗೆ ನುಗ್ಗಿ ಗರ್ಭಿಣಿ ಸೇರಿ ಒಂದೇ ಕುಟುಂಬದ ನಾಲ್ವರ ಮೇಲೆ ಚಾಕು ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಡೆದಿದೆ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಬಡಾವಣೆಯ ನಿವಾಸಿಗಳಾದ ಹಸೀನಾ (27), ಗರ್ಭಿಣಿ ಉಜ್ಮಾ (21), ಸಲ್ಮಾ (35) ಮತ್ತು ಸೈಯದ್ ಶೇರು (25) ಹಲ್ಲೆಗೊಳಗಾದವರು. ಅಬ್ಬು ಮತ್ತು ಯಾಸಿನ್ ನೇತೃತ್ವದ ಗುಂಪು ಈ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ.

ರಾಜೀವ್ ಗಾಂಧಿ ಬಡಾವಣೆಯಲ್ಲಿ ಬುಧವಾರ ಚಿನ್ನದ ಚೈನ್ ಸಿಕ್ಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಗುರುವಾರ ಮತ್ತೆ ಮನೆ ಬಳಿ ಬಂದ ಯುವಕರ ಗುಂಪು ಜಗಳ ತೆಗೆದು, ಮನೆಯಲ್ಲಿದ್ದವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದೆ. ವಿಷಯ ತಿಳಿಯುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಗಾಯಾಳುಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.