ಶಿವಮೊಗ್ಗ: ನಗರದ ಕರ್ನಾಟಕ ಸಂಘದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಕಳ್ಳರು, ಅಕ್ಷರದಾಸೋಹ ಅಡುಗೆ ಕೋಣೆಯ ಬೀಗ ಮುರಿದು ₹40,000 ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಕವಿತಾ ಆರ್. ಅವರು ಈ ಸಂಬಂಧ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜೂನ್ 27ರಂದು ಮಧ್ಯಾಹ್ನ ಶಾಲೆಯ ಕೆಲಸ ಮುಗಿದ ನಂತರ ಮುಖ್ಯ ಶಿಕ್ಷಕರು ಅಡುಗೆ ಕೋಣೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಜೂನ್ 29ರ ಬೆಳಿಗ್ಗೆ ಅಡುಗೆ ಸಿಬ್ಬಂದಿ ಉಮಾ ಅವರು ಶಾಲೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಅಡುಗೆ ಕೋಣೆಯ ಬಾಗಿಲಿನ ಚಿಲಕವನ್ನು ಆಯುಧದಿಂದ ಮುರಿದು ಒಳನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ.
ಏನೇನೆಲ್ಲ ಕಳ್ಳತನ ಆಗಿದೆ?
ಕೋಣೆಯಲ್ಲಿದ್ದ ₹12,000 ಮೌಲ್ಯದ 3 ಗ್ಯಾಸ್ ಸಿಲಿಂಡರ್ಗಳು, ₹6,000 ಮೌಲ್ಯದ ಒಂದು ಗ್ಯಾಸ್ ಸ್ಟವ್, ₹6,000 ಮೌಲ್ಯದ 3 ದೊಡ್ಡ ಪಾತ್ರೆಗಳು, ₹8,000 ಮೌಲ್ಯದ 2 ಕುಕ್ಕರ್ ಹಾಗೂ ₹8,000 ಮೌಲ್ಯದ ಒಂದು ಮಿಕ್ಸಿ ಸೇರಿದಂತೆ ಒಟ್ಟು ₹40,000 ಬೆಲೆಯ ವಸ್ತುಗಳನ್ನು ಕಳ್ಳತನವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಕವಿತಾ.ಆರ್ ಅವರು ಈ ಸಂಬಂಧ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
