ಲಿಂಗನಮಕ್ಕಿ ನೀರಿನ ಮಟ್ಟ 1.75 ಅಡಿ ಏರಿಕೆ, ತುಂಗಾ ಡ್ಯಾಮ್‌ ಹೊರ ಹರಿವು ಹಚ್ಚಳ, ಭದ್ರಾ ಪರಿಸ್ಥಿತಿ ಹೇಗಿದೆ?

ಜಲಾಶಯದ ವರದಿ: ಮಲೆನಾಡು ಭಾಗದಲ್ಲಿ ಮಳೆ ಬಿರುಸು ಪಡೆದುಕೊಂಡಿದ್ದು ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಚೇತರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಡ್ಯಾಮ್‌ ನೀರಿನ ಮಟ್ಟ 1.75 ಅಡಿ ಏರಿಕೆಯಾಗಿದೆ. ಇನ್ನು, ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು ಪ್ರಮಾಣದಲ್ಲಿ ಏರಿಕೆಯಾಗಿದೆ. ➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 139 ಅಡಿ 6 ಇಂಚು (ಕಳೆದ ವರ್ಷ ಇದೇ ದಿನ: 170 ಅಡಿ 9 ಇಂಚು)
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 26.548 ಟಿಎಂಸಿ (ಕಳೆದ ವರ್ಷ ಇದೇ ದಿನ: 53.693 ಟಿಎಂಸಿ)
  • ಒಳಹರಿವು: 4,135 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 20,626 ಕ್ಯೂಸೆಕ್)
  • ಹೊರಹರಿವು: 212 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 5,198 ಕ್ಯೂಸೆಕ್)

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಜಲಮಟ್ಟ: 1751.60 ಅಡಿ. ನಿನ್ನೆಗೆ ಹೋಲಿಸಿದರೆ +1.75 ಅಡಿ ಏರಿಕೆ (ಕಳೆದ ವರ್ಷ ಇದೇ ದಿನ: 1792.50 ಅಡಿ)
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 19.61 ಟಿಎಂಸಿ (ಕಳೆದ ವರ್ಷ ಇದೇ ದಿನ: 78.52 ಟಿಎಂಸಿ – ಶೇ 51.78)
  • ಒಳಹರಿವು: 18,486 ಕ್ಯೂಸೆಕ್
  • ಹೊರಹರಿವು: 507 ಕ್ಯೂಸೆಕ್
  • ಮಳೆ ಪ್ರಮಾಣ: 64.2 ಮಿ.ಮೀ

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 587.86 ಮೀಟರ್ (ಕಳೆದ ವರ್ಷ ಇದೇ ದಿನ: 587.40 ಮೀಟರ್)
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 3.030 ಟಿಎಂಸಿ
  • ಒಳಹರಿವು: 21,747 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 39,188 ಕ್ಯೂಸೆಕ್)
  • ಹೊರಹರಿವು: 23,784 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 38,204 ಕ್ಯೂಸೆಕ್)
Tunga-Dam-10-crust-gates-opened.
ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!