ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಆಗಸ್ಟ್ 16ರ ಸಂಜೆ 5 ಗಂಟೆಗೆ ಶ್ರೀ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ ಹಾಗೂ ಡಾ. ಶರತ್ ಮರಿಯಪ್ಪ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಎಸ್. ಜಾನಕಿ, ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರ ಮಧುರ ಗೀತೆಗಳನ್ನೊಳಗೊಂಡ ಸಾಗರ ಕಿನಾರೆ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀ ವಿಶ್ವಕರ್ಮ ಯಕ್ಷ ಅಭಿಮಾನಿ ವೇದಿಕೆ ಅಧ್ಯಕ್ಷ ಶಶಿ ಎಸ್.ಮಂಗಳಗಾರ್ ತಿಳಿಸಿದರು.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಯಶಸ್ಸು ಕಂಡಿದೆ. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಾಮಚಂದ್ರ ಹಡಪದ ಹಾಗೂ ಗಾಯಕಿ ಎಂ.ಡಿ. ಪಲ್ಲವಿ ಅವರು ಹಾಡಲಿದ್ದಾರೆ. ರಾಘವೇಂದ್ರ ಕಾಂಚನ್ ನಿರೂಪಣೆ ಮಾಡಲಿದ್ದಾರೆ. ವಾದ್ಯ ಸಂಗೀತದಲ್ಲಿ ಶಿವಮೊಗ್ಗದವರೇ ಆದ ದೀಪಕ್ ಜಯಶೀಲನ್ ತಂಡ ಸಾಥ್ ನೀಡಲಿದೆ ಎಂದರು.

ಹಾಪ್‌ಕಾಮ್ಸ್ ನಿರ್ದೇಶಕ ಡಾ.ಶರತ್ ಮರಿಯಪ್ಪ ಮಾತನಾಡಿ, ಹಳೆಯ ಹಿಂದಿ ಹಾಗೂ ಕನ್ನಡ ಹಾಡುಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಸ್ಟೇಡಿಯಂ ಬಳಗದವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದೆ. ಸಂಗೀತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ನೌಷದ್ ಹರ್ಲಾಪುರ, ಹರ್ಷಭೋವಿ, ಭಾನು ಪ್ರಕಾಶ್ ಸೇರಿ ಹಲವರು ಇದ್ದರು.