ಸವಳಂಗ ರಸ್ತೆಯಲ್ಲಿ ಕಾರು ನಿಲ್ಲಿಸಿದ ತಕ್ಷಣ ಪ್ರತ್ಯಕ್ಷವಾದ ದುಷ್ಕರ್ಮಿಗಳು, ಚಾಕು ತೋರಿಸಿ ಬೆದರಿಕೆ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್‌.ಕಾಂ | ಶಿವಮೊಗ್ಗ

ಸವಳಂಗ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದ ವ್ಯಕ್ತಿಗೆ ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ, ನಗದು ಹಾಗೂ ಬಂಗಾರದ ಬ್ರೇಸ್‌ಲೆಟ್ ದೋಚಿ ಪರಾರಿಯಾಗಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಇಲ್ಲಿನ ಜ್ಞಾನ ಸಾಗರ ಶಾಲೆ ಬಳಿ ಆ.14ರ ರಾತ್ರಿ ಘಟನೆ ನಡೆದಿದೆ. ಸುಭಾಷ್‌ ಎಂಬುವವರು ಕೆಲಸದ ನಿಮಿತ್ತ ಸವಳಂಗಕ್ಕೆ ತೆರಳಿದ್ದ ಸುಭಾಷ್‌, ಕಾರಿನಲ್ಲಿ ಶಿವಮೊಗ್ಗಕ್ಕೆ ವಾಪಸ್ ಬರುತ್ತಿದ್ದರು. ಮೂತ್ರ ವಿಸರ್ಜನೆಗಾಗಿ ರಸ್ತೆ ಬದಿ ಕಾರನ್ನು ನಿಲ್ಲಿಸಿದ್ದರು. ಆ ಸಂದರ್ಭ ಸ್ಥಳಕ್ಕೆ ಬಂದ ಇಬ್ಬರು ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Crime-News-General-Image

ಸುಭಾಷ್‌ ಅವರಿಗೆ ಚಾಕು ತೋರಿಸಿ, ಚುಚ್ಚುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದಾರೆ. ಬಳಿಕ ₹2000 ನಗದು ಹಾಗೂ ₹90,000 ಮೌಲ್ಯದ 6 ಗ್ರಾಂ ತೂಕದ ಬಂಗಾರದ ಬ್ರೇಸ್‌ಲೆಟ್ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.