ಜೆರಾಕ್ಸ್‌ ಮಾಡಿಸಲು ತೆರಳಿದ್ದ ವ್ಯಕ್ತಿ ಹತ್ಯೆ ಕೇಸ್‌, ಸ್ಥಳಕ್ಕೆ ಎಸ್‌ಪಿ ಭೇಟಿ, ಏನಿದು ಪ್ರಕರಣ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸಾಗರ: ಮಡಸೂರು ಗ್ರಾಮದ ವಡ್ಡಿನಕೆರೆ ಕೋಡಿ ಬಳಿ ನಡೆದ ವ್ಯಕ್ತಿಯೊಬ್ಬರು ಕೊಲೆಯಾದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆಯ ಕುರಿತು ಪೊಲೀಸರ ಜೊತೆಗೆ ಚರ್ಚಿಸಿ, ಸೂಚನೆಗಳನ್ನು ನೀಡಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

Shivamogga-SP-Nikhil-B-Visits-Sagara-Rural-incident-spot

‘ವೋಟರ್‌ ಐಡಿ ಜೆರಾಕ್ಸ್‌ ಹೋಗಿದ್ದರುʼ

ಮಡಸೂರು ಗ್ರಾಮದ ಆನಂದ (37) ಆಗಸ್ಟ್ 25ರ ರಾತ್ರಿ ವೋಟರ್ ಐಡಿ ಕಾರ್ಡ್‌ ಜೆರಾಕ್ಸ್ ಮಾಡಿಸಿಕೊಂಡು ಬರಲು ಲಿಂಗದಹಳ್ಳಿಗೆ ಬೈಕ್‌ನಲ್ಲಿ ತೆರಳಿದ್ದರು. ರಾತ್ರಿ 9 ಗಂಟೆಯಾದರು ಮನೆಗೆ ಹಿಂತಿರುಗಿರಲಿಲ್ಲ ಬಂದಿರಲಿಲ್ಲ. ಅವರ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿತ್ತು. ಆತಂಕಗೊಂಡ ಅವರ ಪತ್ನಿ ಗಿರಿಜಾ, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.  

ಕೋಡಿಯಲ್ಲಿ ದೇಹ, ಕುತ್ತಿಗೆ ಮೇಲೆ ಹರಿತ ಗಾಯ

ಆನಂದ್‌ಗಾಗಿ ಹುಡುಕಾಟ ನಡೆಸುವಾಗ ಅವರ ಬೈಕ್‌ ವಡ್ಡಿನಕೆರೆ ಕಡೆಗೆ ತೆರೆಳಿದ್ದನ್ನು ಗಮನಿಸಿದ್ದಾಗಿ ಸ್ಥಳೀಯರು ತಿಳಿಸಿದ್ದರು. ಇದರ ಆಧಾರದಲ್ಲಿ ಕೆರೆ ಏರಿ ಹಾಗೂ ಕೋಡಿಯ ಇಳಿಜಾರಿನಲ್ಲಿ ಹುಡುಕಾಟ ನಡೆಸಲಾಯಿತು. ಆಗ ವಡ್ಡಿನಕೆರೆ ಕೋಡಿಯ ಇಳಿಜಾರಿನ ಕಲ್ಲುಗಳ ಮಧ್ಯೆ ಆನಂದ್ ಅವರ ಮೃತದೇಹ ಪತ್ತೆಯಾಗಿದೆ. ಅವರ ಕುತ್ತಿಗೆಯ ಹಿಂಭಾಗ ಹರಿತ ಆಯುಧದಿಂದ ಕಡಿದ ಗಾಯಗಳಿತ್ತು. ಸುತ್ತಲೂ ರಕ್ತ ಹರಿದಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.