21 ಪ್ರಕರಣ, ಒಂದಕ್ಕಿಂತಲು ಒಂದು ವಿಭಿನ್ನ, ಶಿವಮೊಗ್ಗದಲ್ಲಿ ಮೆಮೊರೆಬಲ್‌ ಟ್ರಯಲ್ಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ನಿವೃತ್ತ ನ್ಯಾಯಮೂರ್ತಿ ಹೆಚ್‌.ಎನ್.ನಾಗಮೋಹನದಾಸ್‌ ಅವರ ಮೆಮೊರೆಬಲ್‌ ಟ್ರಯಲ್ಸ್‌ ಪುಸ್ತಕವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಮಾಡಲಾಯಿತು. ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

Memorable-Trails-book-released-in-Shimoga

ಮಧು ಬಂಗಾರಪ್ಪ ಏನೆಲ್ಲ ಹೇಳಿದರು?

ಪುಸ್ತಕ ಲೋಕಾರ್ಪಣೆ ಬಳಿಕ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಲವು ಪ್ರಮುಖ ಸಂಗತಿ ಪ್ರಸ್ತಾಪಿಸಿದರು. ಇಲ್ಲಿದೆ ಅವುಗಳ ಪಾಯಿಂಟ್ಸ್‌.

POINT-1

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಭಾವನೆಗಳೇ ನ್ಯಾ.ನಾಗಮೋಹನದಾಸ್ ಅವರ ಕೃತಿಯಲ್ಲಿದೆ. ವಕೀಲರಾಗಿದ್ದ ಬಂಗಾರಪ್ಪ ಇದೇ ಮಾದರಿ ದೃಷ್ಟಿಕೋನ ಹೊಂದಿದ್ದರು. ಸಾಮಾನ್ಯ ಜನರಿಗಿರುವ ಪ್ರಶ್ನೆಗಳಿಗೆ ನ್ಯಾ. ನಾಗಮೋಹನದಾಸ್ ಅವರು ಕೃತಿಗಳ ಮೂಲಕ ಉತ್ತರ ನೀಡುತ್ತಿದ್ದಾರೆ.

POINT-2

ನ್ಯಾ. ನಾಗಮೋಹನದಾಸ್‌ ಅವರ ಕೃತಿಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಂದವರನ್ನೆ ಬದಲು ಮಾಡುವಂತಹ ವಿಚಾರಗಳು ಕೃತಿಗಳಲ್ಲಿವೆ.

POINT-3

ಓದು ಸಂವಿಧಾನ ಆಂದೋಲನ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ನಾನು ಶಿಕ್ಷಣ ಸಚಿವನಾದ ಅವಧಿಯಲ್ಲಿ ಎಲ್ಲ ಶಾಲೆಗಳಲ್ಲಿಯು ಹತ್ತನೆ ತರಗತಿವರೆಗೆ ನಿತ್ಯ ಸಂವಿಧಾನ ಪೀಠಿಕೆ ಓದಿಸುತ್ತಿದ್ದೇವೆ. ಸಂವಿಧಾನ ಮೌಲ್ಯಗಳು ಮಕ್ಕಳಲ್ಲಿ ಹಾಸುಹೊಕ್ಕಾಗಬೇಕು ಎಂಬುದು ಇದರ ಉದ್ದೇಶ. ಕೆಲವು ಖಾಸಗಿ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದಿಸುತ್ತಿಲ್ಲ. ಈ ಕುರಿತು ಖಾಸಗಿ ಶಾಲೆಗಳ ಜೊತೆಗೆ ಚರ್ಚಿಸುತ್ತೇನೆ.

POINT-4

ಬಂಗಾರಪ್ಪ ಅವರ ಅವಧಿಯಲ್ಲಿ ಜಾರಿಗೆ ಬಂದ ಗ್ರಾಮೀಣ ಕೃಪಾಂಕ ಹಲವರ ಬದುಕು ಬದಲಿಸಿತು. ಶಿಕ್ಷಣ ಇಲಾಖೆಯಲ್ಲೆ ಅನೇಕರು ಇದರ ಲಾಭ ಪಡೆದು ನಗರಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. 

ಯಾರೆಲ್ಲ ಏನೆಲ್ಲ ಹೇಳಿದರು?

ಹರ್ಷ ಕುಗ್ವೆ, ಪತ್ರಕರ್ತ:ಪುಸ್ತಕಗಳು ಮಾಹಿತಿ ಜೊತೆಗೆ ಬುದ್ದಿಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತವೆ. ನ್ಯಾ. ನಾಗಮೋಹನದಾಸ್ ಅವರ ಮೆಮರಬಲ್ ಟ್ರಯಲ್ಸ್ ಅಂತಹ ಕೃತಿಗಳಲ್ಲಿ ಒಂದು. ಪುಸ್ತಕದಲ್ಲಿ 21 ಪ್ರಕರಣಗಳ ಕುರಿತ ಬರಹಗಳಿವೆ.

ಕೆ.ಬಸಪ್ಪಗೌಡ, ಹಿರಿಯ ವಕೀಲ:ಚರಿತ್ರೆಯ ಅವಲೋಕನ ಮತ್ತು ಪರಾಮರ್ಶೆ ಮಾಡಿ ವಿರಳ ಪ್ರಕರಣಗಳ ಕುರಿತು ಮಾಹಿತಿ ನೀಡಿದ್ದಾರೆ. ಆದ್ದರಿಂದ ಇದು ವಿಶಿಷ್ಟ ಕೃತಿ. ಯುವ ಪೀಳಿಗೆಗೆ ಪ್ರಸ್ತುತವಾದ ಮಾಹಿತಿಯ ಪುಸ್ತಕ. ನನ್ನ ವ್ಯಾಪ್ತಿಯ ಶಾಲೆಗಳಲ್ಲಿ ಎಂಟು ಸೆಟ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಓದಲು ಒದಗಿಸುತ್ತೇನೆ.ʼ

ಸಿ.ಎಸ್.ಷಡಾಕ್ಷರಿ, ರಾಜ್ಯ ಅಧ್ಯಕ್ಷ, ಸರ್ಕಾರಿ ನೌಕರರ ಸಂಘ:ಉತ್ತಮ ವಿಚಾರಗಳಿರುವ ಪುಸ್ತಕ. ಈಸೂರಿನ ಪ್ರಕರಣದ ಕುರಿತು ಕೂಲಂಕಷವಾಗಿ ವಿವರಿಸಲಾಗಿದೆ. ಇನ್ಯಾವ ಪುಸ್ತಕದಲ್ಲಿಯು ಇಷ್ಟು ವಿವರಣೆ ಓದಲು ಸಿಗುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಉದಮ್ ಸಿಂಗ್ ಜಲಿಯನ್‌ವಾಲಬಾಗ್ ಹತ್ಯಾಕಾಂಡದ ರೂವಾರಿ ಜನರಲ್ ಡೈರ್‌ನ ಹತ್ಯೆ ಮಾಡಿದ್ದರು. ಇಡೀ ಘಟನೆಯನ್ನು ಸವಿಸ್ತಾರವಾಗಿ ವಿವರಿಸಲಾಗಿದೆ.

ನ್ಯಾ. ನಾಗಮೋಹನ ದಾಸ್ ಏನಂದ್ರು?

point-1

ನೆಹರು, ಗಾಂಧಿ ಏನು ಮಾಡಿದ್ದರು ಎಂದು ಪ್ರಶ್ನಿಸುವವರಿಗೆ ಈ ಪುಸ್ತಕ ಉತ್ತರವಾಗಿದೆ‌. ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕಲು ಅನೇಕರು ತ್ಯಾಗ ಮಾಡಿದ್ದಾರೆ. ಅವರ ಸ್ಮರಣೆ ಮಾಡಬೇಕು‌. ಹೊಸ ಪೀಳಿಗೆಗೆ ತ್ಯಾಗದ ತಿಳಿವಳಿಕೆ ಮೂಡಿಸಲು ಈ ಪುಸ್ತಕದ ಮೂಲಕ ಪ್ರಯತ್ನ ಮಾಡಲಾಗಿದೆ.

point-2

ದಿನೇ ದಿನೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಅದನ್ನು ಹಾಗಿಯ ಬಿಟ್ಟರೆ ಸಮಾಜದ ಭವಿಷ್ಯವೇನು. ಜಗತ್ತಿನ ವಿವಿಧೆಡೆ ಸತ್ಯ ಹೇಳುವವರು, ಸರ್ಕಾರದ ವಿಮರ್ಶೆ ಮಾಡಿದವರನ್ನು ಗಲ್ಲಿಗೇರಿಸಲಾಗಿದೆ. ವಿಷ ಕುಡಿಸಲಾಗಿದೆ. ಇದನ್ನೇ ಈ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.

ಹಿರಿಯ ವಕೀಲ ಜಿ.ಎಸ್. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಪೀಪಲ್ಸ್ ಲಾಯರ್ಸ್ ಗಿಲ್ಡ್ ಸದಸ್ಯ ಕೆ.ಪಿ. ಶ್ರೀಪಾಲ್, ಸಿಬಿಆರ್‌ ರಾಷ್ಟ್ರೀಯ ಕಾನೂನು ಕಾಲೇಜು ಪ್ರಾಂಶುಪಾಲೆ ಅನಲಾ ಉಪಸ್ಥಿತರಿದ್ದರು.