ಶಿವಮೊಗ್ಗ ಲೈವ್
ಶಿವಮೊಗ್ಗ: ಕೌಟುಂಬಿಕ ಸಮಸ್ಯೆಗೆ ಮನನೊಂದು ಚಾಲಕ ನೇಣಿಗೆ ಶರಣಾಗಿದ್ದಾರೆ. ಹೊಸಮನೆ 5ನೇ ಅಡ್ಡರಸ್ತೆಯ ನಿವಾಸಿ ಮಂಜುನಾಥ್ (45) ಮೃತರು.
ಕೆಲವು ತಿಂಗಳ ಹಿಂದೆ ಮಂಜುನಾಥ್ ಅವರ ಪತ್ನಿ ತೀರಿಕೊಂಡಿದ್ದರು. ಇದರ ಬೆನ್ನಿಗೆ ಕೌಟುಂಬಿಕ ಸಮಸ್ಯೆಯಿಂದ ಅವರು ನೊಂದಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಂಜುನಾಥ್ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
