ತಿಲಕನಗರದಲ್ಲಿ ವಾಕಿಂಗ್‌ ಮಾಡುತ್ತಿದ್ದ ಯುವಕರ ಮೇಲೆ ದಾಳಿ, ಜೀವ ಬೆದರಿಕೆ

ಶಿವಮೊಗ್ಗ: ರಾತ್ರಿಊಟ ಮುಗಿಸಿ ವಾಕಿಂಗ್‌ ಮಾಡುತ್ತಿದ್ದ ಯುವಕರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ತಿಲಕ್ ನಗರದ ಎರಡನೇ ಕ್ರಾಸ್‌ನಲ್ಲಿ ಘಟನೆ ವರದಿಯಾಗಿದೆ.

ಅಂಜನ್, ವಿನಯ್ ಮತ್ತು ರವಿ ಎಂಬುವವರು ರಾತ್ರಿ ವೇಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಆಗ ರಸ್ತೆಯಲ್ಲಿ ಕೆಲವರು ಜಗಳವಾಡುತ್ತಿದ್ದರು. ಇದೆ ಗುಂಪು ಯುವಕರನ್ನು ಅಡ್ಡಗಟ್ಟಿ ಜಗಳವಾಡಿ, ಎಳೆದಾಡಿದ್ದಾರೆ. ಅಂಜನ್‌ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.  

140823-Jayanagara-Police-Station

ಗಲಾಟೆ ಬಿಡಿಸಲು ಬಂದ ಸ್ನೇಹಿತರ ಮೇಲೂ ದಾಳಿ ಮಾಡಿದ್ದಾರೆ. ಅಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ