ಶಿವಮೊಗ್ಗ ಲೈವ್
ಶಿಕಾರಿಪುರ: ತೋಟದ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿಕಾರಿಪುರ ತಾಲ್ಲೂಕು ಸಾಲೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಹೆಚ್.ವಿ. ಶಿವಯೋಗಿ ಎಂಬುವವರಿಗೆ ಸೇರಿದ ಜಮೀನಿನ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಶಿವಯೋಗಿ ಅವರು ತಮ್ಮ ತೋಟದ ಮನೆಯ ಬಾಗಿಲಿಗೆ ಇಂಟರ್‌ಲಾಕ್ ಬೀಗ ಹಾಕಿ ತೆರಳಿದ್ದರು. ರಾತ್ರಿ ಕಳ್ಳರು ಮನೆಯ ಬೀಗವನ್ನು ಮೀಟಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಗ್ರಾಮದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ಗ್ರಾಮಸ್ಥರು ಹಿಡಿದು ವಿಚಾರಣೆ ಮಾಡಿದ್ದಾರೆ. ಆಗ ಕಳ್ಳತನಕ್ಕೆ ಯತ್ನಿಸಿದ ವಿಷಯ ಬಾಯಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯುವರಾಜ ಹಾಗೂ ಪ್ರವೀಣ ಎಂಬುವವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೋಟದ ಮನೆಯ ಇಂಟರ್‌ಲಾಕ್ ಮುರಿದು ಕಳ್ಳತನಕ್ಕೆ ಯತ್ನಿಸಿದ ಹಿನ್ನೆಲೆ ಇಬ್ಬರ ವಿರುದ್ಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.