NEWS 1 ಸಿಂಹಧಾಮದಲ್ಲಿ ಮಕ್ಕಳಿಗೆ ಶಿಬಿರ, ಏನೆಲ್ಲ ಇರುತ್ತೆ ಗೊತ್ತಾ? NEWS 2 ಚೆನ್ನೈನಲ್ಲಿ ಶಿವಮೊಗ್ಗದ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019

NEWS 1 | ಸಿಂಹಧಾಮದಲ್ಲಿ ಚಳಿಗಾಲದ ಶಿಬಿರ

ಶಿವಮೊಗ್ಗ : ತಾಲೂಕಿನ ತ್ಯಾವರೆಕೊಪ್ಪದ ಹುಲಿ – ಸಿಂಹಧಾಮದಲ್ಲಿ ಡಿಸೆಂಬರ್‌ನ ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೆ ಮೃಗಾಲಯ ನಿರ್ವಾಹಣೆ ಮತ್ತು ಜೀವಿಗಳ ವಿಷಯ ಕುರಿತು ಚಳಿಗಾಲದ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ 12 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳು ಪಾಲ್ಗೊಳಲು ಅವಕಾಶ ಇದ್ದು, ಮೃಗಾಲಯ ನಿರ್ವಾಹಣೆ, ವನ್ಯಜೀವಿ ಆರೋಗ್ಯ ಮತ್ತು ಪರಿಪಾಲನೆ, ಪರಿಸರ ಸಂರಕ್ಷಣೆ, ಪಕ್ಷಿ ವೀಕ್ಷಣೆ, ಸರಿಸೃಪಗಳು, ಸಸ್ತನಿಗಳ ಮಾಹಿತಿ ಮುಂತಾದ ವನ್ಯಜೀವಿಗಳ ಕುರಿತ ಮಾಹಿತಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ 600 ರೂ.ಗಳ ಶುಲ್ಕ ನಿಗದಿಮಾಡಲಾಗಿದೆ. ವಿದ್ಯಾರ್ಥಿಗಳು ಪೋಷಕರೊಂದಿಗೆ ಹುಲಿ-ಸಿಂಹಧಾಮಕ್ಕೆ ಭೇಟಿ ನೀಡಿ ಶಿಬಿರಕ್ಕೆ ನೋಂದಾಯಿಸಬಹುದು. ಮೊದಲ 30 ಅರ್ಜಿಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು. ಮಾಹಿತಿಗೆ ಮೊ. 80733 22471 ಸಂಪರ್ಕಿಸಬಹುದು.

NEWS 2 | ಚೆನ್ನೈನಲ್ಲಿ ಶಿವಮೊಗ್ಗದ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ

ಚೆನ್ನೈನಲ್ಲಿ ನಡೆದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಶಿವಮೊಗ್ಗದ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮಹತಿ ಭಟ್ ಪಿ.ಎಸ್. ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನಗಳಿಸಿದ್ದಾಳೆ. ಪದ್ಮಭೂಷಣ ವಿದುಷಿ ಸುಧಾ ರಘುನಾಥನ್ ಅವರ ಸುಧಾರ್ಣವ ಸಂಸ್ಥೆಯು ಶ್ರಾವ್ಯ ಸೀಸನ್-1 ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ವಿವಿಧ ರಾಜ್ಯಗಳ ಸುಮಾರು 500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕಳೆದ ಮಂಗಳವಾರ ಅಂತಿಮ ಸುತ್ತಿನ ಸ್ಪರ್ಧೆ ನಡೆದಿದ್ದು, ಶ್ರೀ ತ್ಯಾಗರಾಜರ ಕೃತಿಗಳು ಮತ್ತು ಪುರಂದರ ದಾಸರ ಕೃತಿಗಳ ಸಬ್ ಜೂನಿಯರ್ ವಿಭಾಗದಲ್ಲಿ ಮಹತಿ ಭಟ್ ಪ್ರಥಮ ಸ್ಥಾನಿಯಾಗಿದ್ದಾಳೆ. ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ. ಈಕೆ ಶಿವಮೊಗ್ಗ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ ಅವರ ಶಿಷ್ಯ.

77239347 984414791919941 8441127057663983616 n.jpg? nc cat=105& nc ohc=izchl0OrsG4AQlY2WZpA9187YR8miHCTHDxmeIy0JK8HPwMZZB2gqsFpQ& nc ht=scontent maa2 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Special camp for childrens have been organized in Tyavarekoppa Lion and Tiger Safar in Shimoga. Mahathi Bhat has won first prize in Chennai.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment