ಶಿವಮೊಗ್ಗ ಸಿಟಿ, ತಾಲ್ಲೂಕಿನ 60ಕ್ಕಿಂತಲು ಹೆಚ್ಚು ಕಡೆ ಅ.3ರಂದು ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

ಶಿವಮೊಗ್ಗ: ನಗರ ಮತ್ತು ತಾಲ್ಲೂಕಿನ ವಿವಿಧೆಡೆ ಅಕ್ಟೋಬರ್‌ 3ರಮದು ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ನಗರದ ಹಲವು ಕಡೆ ಮತ್ತು ತಾಲ್ಲೂಕಿನ ವಿವಿಧೆಡೆ ವಿದ್ಯುತ್‌ ಪೂರೈಕೆ ವ್ಯತ್ಯ ಆಗಲಿದೆ ಎಂದು ತಿಳಿಸಲಾಗಿದೆ.

ಎಲ್ಲೆಲ್ಲಿ ಎಷ್ಟು ಹೊತ್ತು ಕರೆಂಟ್‌ ಇರಲ್ಲ?

ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವು ಕಾಮಗಾರಿ ಇರುವುದರಿಂದ ಅ.03 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಜಯನಗರ, ಬಸವನಗುಡಿ, ಮಲ್ನಾಡ್ ಇಎನ್‌ಟಿ ಆಸ್ಪತ್ರೆ, ಸರ್ವೋದಯ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. – ಇನ್ನಷ್ಟು ಪ್ರದೇಶಗಳ ವಿವರ ಕೆಳಗಿದೆ.

Power Cut

66/11ಕೆ.ವಿ. ವಿ.ವಿ.ಕೇಂದ್ರ, ತ್ಯಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ವಿವಿಧೆಡೆ ಬೆಳಿಗ್ಗೆ 9:30ರಿಂದ ಸಂಜೆ 5:30ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕುವೆಂಪು ನಗರ, ಎನ್.ಇ.ಎಸ್ ಬಡಾವಣೆ, ಶಿವಬಸವ ನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾಂಧಿ ಬಡಾವಣೆ, ಜ್ಯೋತಿನಗರ, ಸೂಡಾ ಬಡಾವಣೆ, ಜೆ.ಎನ್.ಎನ್.ಸಿ ಕಾಲೇಜು, ಪರ್ಫೆಕ್ಟ್ ಆಲಾಯಿ ಫ್ಯಾಕ್ಟರಿ, ರೆಡ್ಡಿ ಬಡಾವಣೆ, ಬೊಮ್ಮನಕಟ್ಟೆ, ಎ ನಿಂದ ಹೆಚ್ ಬ್ಲಾಕ್ ವರಗೆ, ಹಳೆ ಬೊಮ್ಮನಕಟ್ಟೆ, ವಿನಾಯಕ ಬಡಾವಣೆ, ದೇವಂಗಿ 1ನೇ ಹಂತದ ಬಡಾವಣೆ, ಹೊನ್ನಾಳಿ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಾಟಿಲ್ ಬಡಾವಣೆ, ಶಾಂತಿನಗರ,  ಪೆಬೆಲ್ಸ್ ಅಪಾರ್ಟಮೆಂಟ್, ರಾಗಿಗುಡ್ಡ, ವಡ್ಡರಹಟ್ಟಿ, ದೇವಂಗಿ ತೊಟ.

ವಿಜಯಲಕ್ಷ್ಮಿ ರೈಸ್ ಮಿಲ್, ತಾವರೆಚೆಟ್ನಹಳ್ಳಿ ಯುಜಿಡಿ ಪ್ಲಾಂಟ್, ಗುಂಡಪ್ಪ ಶೆಡ್, ಸವಳಂಗ ರಸ್ತೆ, ತ್ಯಾವರೆಚಹಳ್ಳಿ, ಯು.ಜಿ.ಡಿ., ಶೇಶಾದ್ರಿಪುರಂ, ಲಕ್ಷ್ಮೀ ವೆಂಕಟೇಶ್ವರ ಸಾ ಮಿಲ್, ತ್ರಿಮೂರ್ತಿ ನಗರ, ನವುಲೆ, ಆಶ್ವತ್ ನಗರ, ಎಲ್.ಬಿ.ಎಸ್. ನಗರ, ಕೀರ್ತಿ ನಗರ, ಬಸವೇಶ್ವರ ನಗರ, ಕೃಷಿ ನಗರ, ತರಳುಬಾಳು ಬಡಾವಣೆ, ಸೇವಾ ಲಾಲ್ ನಗರ, ಡಾಲರ್ಸ್ ಕಾಲೋನಿ.

ಪವನಶ್ರೀ ಬಡಾವಣೆ, ಮಲ್ಲೇಶ್ವರನಗರ, ಗುಂಡಪ್ಪ ಶೆಡ್, ಶಂಕರ ಮಠ ರಸ್ತೆ (ಶೋರೂಮ್ ರಸ್ತೆ), ಜಯದೇವ ರೈಸ್ ಮಿಲ್, ಶಂಕರ ಕಾಲೋನಿ, ಮಲ್ಲಿಕಾರ್ಜುನ ನಗರ, ಶೇಷಾದ್ರಿಪರಂ, ಶಂಕರಮಠದ ಹಿಂಭಾಗದ ರಸ್ತೆ, ಮಲ್ಲೇಶ್ವರ ನಗರ,ರಾಮಾರಾವ್ ಲೇಔಟ್ ನ್ಯಾಷನಲ್ ಪಬ್ಲಿಕ್ ಶಾಲೆ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ. –ಇನ್ನಷ್ಟು ಪ್ರದೇಶಗಳ ವಿವರ ಕೆಳಗಿದೆ.

ಎಂ ಆರ್.ಎಸ್.220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ನಿರ್ವಹಣೆ ಕಾಮಗಾರಿ ಹಿನ್ನೆಲೆ ಅಕ್ಟೋಬರ್‌ 3 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ. ಹೊಳೆಹೊನ್ನೂರು ವಿ ವಿ ಕೇಂದ್ರ, ಹೊಳಲೂರು ವಿ ವಿ ಕೇಂದ್ರ ಮತ್ತು ತಾವರೆಚಟ್ನಹಳ್ಳಿ ವಿ ವಿ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಾದ ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ.

ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.