ಶಿವಮೊಗ್ಗ: ಬಾರ್ ಒಂದರ ಮೇಲ್ಛಾವಣಿ ಹಾಗೂ ಪಿವಿಸಿ ಶೀಟ್ ಮುರಿದು ₹90,000 ನಗದು ಕಳ್ಳತನ ಮಾಡಲಾಗಿದೆ. ವಿನೋಬನಗರದ ರಾಜಕುಮಾರ್ ಸರ್ಕಲ್ ಹತ್ತಿರವಿರುವ ಶಕ್ತಿ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಘಟನೆ ಸಂಭವಿಸಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಅಕ್ಟೋಬರ್ 13ರ ರಾತ್ರಿ ಕ್ಯಾಷಿಯರ್ ಚಂದನ್ ಅವರು ವ್ಯಾಪಾರದ ಹಣವನ್ನು ಬಾರ್ನ ಕ್ಯಾಶ್ ಡ್ರಾಯರ್ನಲ್ಲಿಟ್ಟು, ಮಳಿಗೆಗೆ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಿಗ್ಗೆ ಮಳಿಗೆಗೆ ಬಂದು ಶಟರ್ ಬೀಗ ತೆರೆದಾಗ ಪಿವಿಸಿ ಶೀಟ್ ಮುರಿದಿರುವುದು ಗಮನಕ್ಕೆ ಬಂದಿತ್ತು. ಅನುಮಾನಗೊಂಡು ಕ್ಯಾಶ್ ಡ್ರಾಯರ್ ಪರಿಶೀಲಿಸಿದಾಗ, ಅದರಲ್ಲಿದ್ದ ₹80,000 ನಗದು ಹಾಗೂ ₹10,000 ಚಿಲ್ಲರೆ ಹಣ ಸೇರಿದಂತೆ ಒಟ್ಟು ₹90,000 ಕಳವಾಗಿರುವುದು ಗಮನಕ್ಕೆ ಬಂದಿದೆ.

ಕಳ್ಳರು ಬಾರ್ನ ಮೇಲ್ಭಾಗದಲ್ಲಿ ಕಬ್ಬಿಣದ ಸೂರುಗಳನ್ನು ತೆಗೆದು ಒಳನುಗ್ಗಿ, ಪಿವಿಸಿ ಶೀಟ್ ಹಾಗೂ ಕ್ಯಾಶ್ ಡ್ರಾಯರ್ ಮುರಿದು ನಗದು ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.