ಶಿವಮೊಗ್ಗ ಲೈವ್
ರಿಪ್ಪನ್ಪೇಟೆ: ರಿಪ್ಪನ್ಪೇಟೆಯ ವಿದ್ಯಾರ್ಥಿ ಆಯುಷ್, ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. (ಈ ಸುದ್ದಿಯನ್ನು ಇನ್ನು 31 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ತಮಿಳುನಾಡಿನ ಚೆನ್ನೈನಲ್ಲಿ ಈಚೆಗೆ ನಡೆದ 41ನೇ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 20 ವರ್ಷದೊಳಗಿನವರ ವಿಭಾಗದ 4×100 ಮೀಟರ್ ರಿಲೇ ಓಟದಲ್ಲಿ ತಂಡದ ಸದಸ್ಯರೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ಆಯುಷ್, ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದ್ದಾರೆ. ವೈಯಕ್ತಿಕ ವಿಭಾಗದ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ.

ತರಬೇತುದಾರ ಅಶೋಕ್ ಬಿ. ಮಂಟೂರ್ ಮಾರ್ಗದರ್ಶನದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಡಿವೈಇಎಸ್ ಕ್ರೀಡಾ ವಸತಿ ನಿಲಯದಲ್ಲಿ ಆಯುಷ್ ತರಬೇತಿ ಪಡೆಯುತ್ತಿದ್ದಾನೆ. ಈತ ರಾಘವೇಂದ್ರ ಎಸ್.ಎಂ. ಮತ್ತು ಮಂಜುಳಾ ದಂಪತಿಯ ಪುತ್ರ.