ಕುಂಸಿಯಲ್ಲಿ ದೇವಸ್ಥಾನದ ಬೀಗ ಮುರಿದು ಕಳ್ಳತನ, ಏನೇನೆಲ್ಲ ಕಳುವಾಗಿದೆ?

ಶಿವಮೊಗ್ಗ: ತಾಲ್ಲೂಕಿನ ಕುಂಸಿಯ ಗ್ರಾಮದ ನಿಂಬುಜಾದೇವಿ ದೇವಾಲಯದ ಬೀಗ ಮುರಿದು ಬಂಗಾರದ ಆಭರಣ ಹಾಗೂ ನಗದು ಕಳವು ಮಾಡಲಾಗಿದೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ದೇವಾಲಯದಲ್ಲಿದ್ದ 10 ಗ್ರಾಂ ತೂಕದ 4 ಬಂಗಾರದ ತಾಳಿ ಬೊಟ್ಟುಗಳು, ಎರಡು ಬೆಳ್ಳಿಯ ಕಣ್ಣುಗಳು, 3.5 ಅಡಿ ಎತ್ತರದ ಹಿತ್ತಾಳೆ ಕಾಲು ದೀಪಗಳು ಹಾಗೂ ಕಾಣಿಕೆ ಹಣ ಸೇರಿ ಒಟ್ಟು ₹1,55,000 ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಶನಿವಾರ ರಾತ್ರಿ ಕಾರ್ತಿಕ ದೀಪೋತ್ಸವ ಹಾಗೂ ಪೂಜೆ ಮುಗಿಸಿ, ದೇವಾಲಯದ ಬಾಗಿಲಿಗೆ ಬೀಗ ಹಾಕಿ ತೆರಳಲಾಗಿತ್ತು.

Crime-News-General-Image

ಮರುದಿನ ಬೆಳಿಗ್ಗೆ ಪೂಜೆಗಾಗಿ ಬಾಗಿಲು ತೆಗೆಯಲು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಕಳ್ಳರು ದೇವಾಲಯದ ಮುಂಭಾಗದ ಪಾಟ್‌ಲಾಕ್ ಹಾಗೂ ಗರ್ಭಗುಡಿಯ ಬೀಗ ಮುರಿದು ಒಳನುಗ್ಗಿದ್ದಾರೆ. ದೇವಿಯ ಮೂರ್ತಿಗೆ ಅರ್ಪಿಸಿದ್ದ ಆಭರಣ ಹಾಗೂ ಕಾಣಿಕೆ ತಟ್ಟೆಯಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.