ಶಿಕಾರಿಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) 101ನೇ ಸಂಸ್ಥಾಪನಾ ಸಂಭ್ರಮದ ಪ್ರಯುಕ್ತ ಪಟ್ಟಣದಲ್ಲಿ ಸ್ವಯಂಸೇವಕರಿಂದ ಪಥ ಸಂಚಲನ ನಡೆಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ಸಾಗಿತು. ಬಳಿಕ ಹೊಸ ಸಂತೆ ಮೈದಾನದಲ್ಲಿ ಸಭಾ ಕಾರ್ಯಕ್ರಮ ಜರುಗಿತು. (ಈ ಸುದ್ದಿಯನ್ನು ಇನ್ನು 45 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿಕ್ಕಮಗಳೂರು ವಿಭಾಗದ ಆರ್ಎಸ್ಎಸ್ ಪ್ರಚಾರಕ ಲೋಹಿತಾಶ್ವ ಅವರು ಭಾಷಣದ ಮಾಡಿದರು. ಅವರ ಭಾಷಣದ ಎರಡು ಪ್ರಮುಖ ಪಾಯಿಂಟ್ಸ್ ಇಲ್ಲಿದೆ.


ಸಹಸ್ರಾರು ವರ್ಷಗಳಿಂದ ಋಷಿ, ಮುನಿಗಳು ಹಾಗೂ ಸಾಧು-ಸಂತರ ತ್ಯಾಗದಿಂದ ಈ ಭಾರತ ಭೂಮಿ ಪುಣ್ಯಭೂಮಿಯಾಗಿದೆ. ಪ್ರತಿಯೊಬ್ಬರಲ್ಲೂ ರಾಷ್ಟ್ರೀಯ ಚಿಂತನೆಗಳು ಬದುಕಾಗಬೇಕು ಹಾಗೂ ರಾಷ್ಟ್ರ ಹಿತವೇ ಪ್ರತಿಯೊಬ್ಬರ ಉಸಿರಾಗಬೇಕು.

ಆರಂಭದಲ್ಲಿ ಬಿಂದುವಿನಂತಿದ್ದ ಆರ್ಎಸ್ಎಸ್ ಸಂಸ್ಥೆಯು ಇಂದು ತ್ರಿವಿಕ್ರಮನಂತೆ ಆಕಾಶದೆತ್ತರಕ್ಕೆ ಬೆಳೆದು ನಿಂತಿದೆ. ರಾಷ್ಟ್ರೀಯ ಚಿಂತನೆಗಳಿಂದಲೇ ಸಂಘವು ಜಗತ್ತಿನಾದ್ಯಂತ ಬಲಿಷ್ಠ ಸಂಘಟನೆಯಾಗಿ ಬೆಳೆದಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಸಂಘದ ಸ್ವಯಂಸೇವಕರಿದ್ದಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಸಾಗರ ಜಿಲ್ಲಾ ಕಾರ್ಯವಾಹ ಶ್ರೀಧರ್ ನಿಸರಾಣಿ ಉಪಸ್ಥಿತರಿದ್ದರು. ಶಾಸಕ ಬಿ.ವೈ. ವಿಜಯೇಂದ್ರ, ಪ್ರಮುಖರಾದ ಕೆ.ಎಸ್. ಗುರುಮೂರ್ತಿ, ಬಿ.ಪಿ. ನಾರಾಯಣರಾವ್, ಎಸ್.ಬಿ. ಮಠದ್, ಅಂಗಡಿ ರಾಮಣ್ಣ ಸೇರಿದಂತೆ ಸಂಘದ ಪ್ರಮುಖರು ಹಾಗೂ ಸ್ವಯಂಸೇವಕರು ಹಾಜರಿದ್ದರು.