ಶಿವಮೊಗ್ಗ ಲೈವ್.ಕಾಂ | SHIMOGA | 14 ಡಿಸೆಂಬರ್ 2019
ಮಕ್ಕಳು ಶಾಲೆಯಿಂದ ದೂರ ಉಳಿದರೆ ಕುಟುಂಬದ ಪಡಿತರ ಚೀಟಿ ರದ್ದು..! ಪಬ್’ಜಿ ಸೇರಿದಂತೆ ಮಕ್ಕಳ ಪ್ರಾಣ ತೆಗೆಯುತ್ತಿರುವ ಮೊಬೈಲ್ ಗೇಮ್ಸ್ ಬ್ಯಾನ್..!
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿರೋಧ ಪಕ್ಷದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ನಿರ್ಧಾರ ಪ್ರಕಟಿಸಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಸಚಿವರ ಜವಾಬ್ದಾರಿ ನಿಭಾಯಿಸಿದ ವಿದ್ಯಾರ್ಥಿಗಳು, ಖಡಕ್ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಪಡಿತರ ಚೀಟಿ ರದ್ದು
‘ಮಕ್ಕಳು ಶಾಲೆಗಳಿಂದ ದೂರ ಉಳಿಯುತ್ತಿದ್ದಾರೆ. ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡು ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಏನು ಮಾಡುತ್ತಿದೆ?’ ಎಂದು ಪ್ರತಿಪಕ್ಷದ ಶಾಸಕರೊಬ್ಬರು ಪ್ರಶ್ನಿಸಿದರು.
ಮಕ್ಕಳು ಶಾಲೆಯಿಂದ ದೂರ ಉಳಿಯಬಾರದೆಂಬ ಕಾರಣಕ್ಕೆ ಕಡ್ಡಾಯ ಶಿಕ್ಷಣ ಕಾಯಿದೆ ಸೇರಿದಂತೆ ವಿವಿಧ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಅಂತಹ ಮಕ್ಕಳನ್ನು ಹುಡುಕಿ ಮರು ಶಾಲೆಗೆ ಸೇರಿಸುವ ಕೆಲಸ ಮಾಡಲಾಗುತ್ತಿದೆ. ಇಷ್ಟಾದರೂ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವುದು ಪೋಷಕರ ತಪ್ಪು. ಅದಕ್ಕಾಗಿಯೇ, ಪಡಿತರ ಚೀಟಿ ರದ್ದು ಪಡಿಸುವ ನಿರ್ಧಾರಕ್ಕೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಕೂಡ ನೀಡಲಾಗಿದೆ ಕಾರ್ಮಿಕ ಸಚಿವ ದೀಕ್ಷಿತ್ ತಿಳಿಸಿದರು.
ಮಾದಕ ವಸ್ತುವಿನ ವಿರುದ್ಧ ಆಕ್ರೋಶ
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿಯೇ ಮಾದಕ ವಸ್ತುಗಳ ಮಾರಾಟ ಹೇರಳವಾಗಿ ನಡೆಯುತ್ತಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ಬಂದಿಲ್ಲವೇ? ಸರಕಾರ ನಿದ್ದೆ ಮಾಡುತ್ತಿದೆಯೇ ಎಂದು ಶಾಸಕರೊಬ್ಬರು ಖಾರವಾಗಿ ಪ್ರಶ್ನಿಸಿದರು.
ಕೆಂಡಾಮಂಡಲಗೊಂಡ ಶಿಕ್ಷಣ ಸಚಿವ ಎನ್. ಚಿನ್ಮಯ (ಸಾಗರದ ನಿರ್ಮಲ ಬಾಲಕಿಯರ ಪ್ರೌ.ಶಾಲೆ) ಪ್ರತಿಪಕ್ಷದ ಮುಖಂಡರು ಬಾಲಿಷವಾಗಿ ಮಾತನಾಡುತ್ತಿದ್ದಾರೆ. ಆಡಳಿತ ಪಕ್ಷಕ್ಕೆ ಈ ಬಗ್ಗೆ ಗಮನಕ್ಕೆ ಬಂದಿದೆ. ಕೋಟ್ಪಾ ಕಾಯಿದೆ ಅಡಿ ಹಲವು ಪ್ರಕರಣಗಳನ್ನು ದಾಖಲಿಸಿ, ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ಇದನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.
ಜನಪ್ರತಿನಿಧಿಗಳ ಗಮನ ಸೆಳೆದ ಮಕ್ಕಳು
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್ ಅವರು ಯುವ ಸಂಸತ್ ಕಲಾಪವನ್ನು ಗಮನಿಸಿದರು. ಮಕ್ಕಳ ಮಾತು ಕೇಳು ಭೇಷ್ ಎಂದರು. ಮತ್ತೊಂದೆಡೆ ಸ್ಪೀಕರ್ ಸ್ಥಾನದಲ್ಲಿದ್ದ ಚರಣ್, ಸಭೆಯನ್ನು ನಿಯಂತ್ರಿಸಿ, ಆಡಳಿತ ಮತ್ತು ಪ್ರತಿಪಕ್ಷದವರಿಗೆ ಆಗಾಗ ಮಾತಿನ ಮೂಲಕ ಚಾಟಿ ಬೀಸುತ್ತಿದ್ದರು.
ಶಿಕಾರಿಪುರದಿಂದ ೧೦, ಸಾಗರ ೮, ಶಿವಮೊಗ್ಗ ೧೨, ಭದ್ರಾವತಿ ೧೨, ಸೊರಬ ೮, ಹೊಸನಗರ ೭ ಹಾಗೂ ತೀರ್ಥಹಳ್ಳಿಯಿಂದ ೯ ಸೇರಿ ಏಳು ತಾಲೂಕುಗಳಿಂದ ೬೬ ಮಕ್ಕಳು ಯುವ ಸಂಸತ್ನಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮಾದರಿಯನ್ನು ವಿಷಯ ಪರಿವೀಕ್ಷಕ ಶಿವನಗೌಡ ಅವರು ರೂಪಿಸಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Yuva Samsath held in Zilla Panchayath Shimoga by the department of Education.