ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 16 ಡಿಸೆಂಬರ್ 2019
ಮೈಕ್ರೋ ಫೈನಾನ್ಸ್’ಗಳು ನೀಡಿದ ಕಾನೂನುಬಾಹಿರ ಸಾಲ ಮನ್ನಾ ಮಾಡಬೇಕು ಹಾಗೂ ಮೈಕ್ರೋ ಫೈನಾನ್ಸ್’ಗಳ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಸಂತ್ರಸ್ಥ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲೆಯ ಹಲವು ಗ್ರಾಮಗಳಲ್ಲಿ ರಾಷ್ಟ್ರೀಯ ಬ್ಯಾಂಕುಗಳ ಶಾಖೆಗಳಿದ್ದರೂ ಸಹ ಆರ್ಥಿಕ ಕಾರ್ಯವ್ಯಾಪ್ತಿಯಲ್ಲಿ ಸಾಲದ ಅಗತ್ಯ ಇರುವ ಬಡ ಜನತೆಗೆ ಸಾಲ ನೀಡುತ್ತಿಲ್ಲ. ಅದರ ಪರಿಣಾಮ ಜನರು ಸುಲಭವಾಗಿ ಮೈಕ್ರೋ ಫೈನಾನ್ಸ್’ಗಳ ಬಲೆಗೆ ಬೀಳುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಡವರ ಅಭಿವೃದ್ದಿಗಾಗಿ ಸೇವೆ ಮಾಡುವುದಾಗಿ ಅನುಮತಿ ಪಡೆದಿವೆ. ಆದರೆ ಈ ಸಂಸ್ಥೆಗಳು ಸೇವೆಯ ಬದಲಿಗೆ ವ್ಯಾಪಾರೀಕರಣ ಮಾಡಿ ಶೇ.26ರಿಂದ 30ರವರೆಗೆ ಬಡ್ಡಿ ವಿಧಿಸಿ ಬಡವರಿಗೆ ಸಂಕಷ್ಟ ನೀಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ಮುಖಂಡರಾದ ಕಲಗೋಡು ರತ್ನಾಕರ್, ತೀ.ನಾ.ಶ್ರೀನಿವಾಸ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 400ಕ್ಕೂ ಹೆಚ್ಚು ಸಂತ್ರಸ್ಥ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Women Protested against Micro Finance Institutions in the district. Around 400 women protested in front of Deputy Commissioner’s office.