BREAKING NEWS |ಮಚ್ಚು ಬೀಸಿದ ಶ್ರೀಗಂಧ ಕಳ್ಳರು, ಅರಣ್ಯಾಧಿಕಾರಿಗೆ ಗಂಭೀರ ಗಾಯ, ಹೇಗಾಯ್ತು ಗೊತ್ತಾ ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | HOSANAGARA | 19 ಡಿಸೆಂಬರ್ 2019

ಶ್ರೀಗಂಧ ಕಳ್ಳರು DRFO ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಹತ್ಯೆಗೆ ಪ್ರಯತ್ನ ನಡೆಸಿರುವ ಭಯಾನಕ ಘಟನೆ ರಾತ್ರಿ ನಡೆದಿದೆ. ಮಾರಣಾಂತಿಕ ಹಲ್ಲೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಸನಗರದ ಸೋನಲೆ ಅರಣ್ಯ ವಲಯದ ಉಪ ಅರಣ್ಯ ಅಧಿಕಾರಿ ಗೋವಿಂದರಾಜು ಅವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಡಿಆರ್’ಎಫ್ಓ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೇಗಾಯ್ತು ಘಟನೆ?

ಸೋನಲೆಯ ಹೆಗ್ಗರಿಸಿ ಗ್ರಾಮದ ಬಳಿ ಶ್ರೀಗಂಧ ಕಳ್ಳತನದ ಕುರಿತು DRFO ಗೋವಿಂದರಾಜು ಅವರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಗಂಧ ಕಳ್ಳರ ಮೇಲೆ ದಾಳಿಗೆ ಸಿಬ್ಬಂದಿಗಳ ಜೊತೆಗೆ ತೆರಳಿದ್ದರು. ಕಾರಣಗಿರಿ ಬಿಳ್ಕೋಡಿ ರಸ್ತೆ ಪಕ್ಕದಲ್ಲಿ ಜೀಪ್ ನಿಲ್ಲಿಸಿ ಶ್ರೀಗಂಧ ಕಳ್ಳರ ಪತ್ತೆಗಾಗಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಬೈಕ್’ನಲ್ಲಿ ಬಂದ ಇಬ್ಬರು ತಪಾಸಣೆ ವೇಳೆ, ಏಕಾಏಕಿ ಅರಣ್ಯಾಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.

81027240 1004309363263817 3070087952265641984 n.png? nc cat=104& nc eui2=AeEMKPvjymijxkm0ThOBNt3wDnowALDG K QDxXQawakKipOZJX2WW ly5iWOY8DWw57bHMZIHNzLgsjg5rcieJdbbIvIm2IlRm2AwHj52DJOQ& nc ohc=11917tYoKpMAQlYpZ27JAuluLHXJqlhr3IZjf2pQAGthhrnBZWrmykCqg& nc ht=scontent.fblr11 1

ದಾಳಿಗೇನು ಕಾರಣ?

ಬೈಕ್’ನ ಪೆಟ್ರೋಲ್ ಟ್ಯಾಂಕ್ ಮೇಲೆ ಚೀಲದಲ್ಲಿ ಸುತ್ತಿದ್ದ ವಸ್ತುವಿತ್ತು. ಅನುಮಾನಗೊಂಡ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಲು ಮುಂದಾದರು. ಈ ವೇಳೆ ಬೈಕ್’ನಲ್ಲಿದ್ದ ಇಬ್ಬರು ಅವಾಚ್ಯವಾಗಿ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ ಎಂದು ಎಫ್ಐಆರ್’ನಲ್ಲಿ ದಾಖಲಿಸಲಾಗಿದೆ.  ಏಕಾಏಕಿ ಮಚ್ಚಿನಿಂದ DRFO ಗೋವಿಂದರಾಜು ಅವರ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಜೊತೆಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆಕೋರರನ್ನು ತಡೆಯಲು ಯತ್ನಿಸಿದ್ದಾರೆ. ಹಲ್ಲೆಕೋರರ ನೆರವಿಗೆ ಮತ್ತೆ ಮೂರ್ನಾಲ್ಕು ಜನರು ಬಂದಿದ್ದರಿಂದ ಗೋವಿಂದರಾಜು ಅವರ ಮೇಲೆ ಮತ್ತಷ್ಟು ಗಂಭೀರವಾಗಿ ಹಲ್ಲೆ ನಡೆಸಲು ಅನುಕೂಲವಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

81025914 1004309343263819 7038846649568854016 n.png? nc cat=103& nc eui2=AeGBgcLYfqb0h9xfTqMc yNEHA0KcvmY5ZhTCGWgD3k4eduHfSW kwiGkLiGC H30dzdMUUqiQZhT11r82R3Xw2oDyt5AVuo6PBFJB5TXKdtQ& nc ohc=qk3klAijrjkAQmhE6WcEx4a9rwN2R70Uxt5uHifJllv j7qSOn07xd7Tg& nc ht=scontent.fblr11 1

ಕೂಗಾಟ, ವಾಹನದ ಸದ್ದು ಉಳಿಸುತು ಪ್ರಾಣ

ಹಲ್ಲೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಜೋರಾಗಿ ಕೂಗಿಕೊಂಡಿದ್ದಾರೆ. ಈ ನಡುವೆ ರಸ್ತೆಯಲ್ಲಿ ವಾಹನಗಳ ಸದ್ದು ಕೇಳಿಸಿದೆ. ಇದರಿಂದ ಬೆದರಿದ ಹಲ್ಲೆಕೋರರು ಮಚ್ಚು ಮತ್ತು ಇತರೆ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು, ಹಲ್ಲೆಕೋರರಲ್ಲಿ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುತಿಸಿದ್ದಾರೆ. ಹೆಗ್ಗರಸು ಗ್ರಾಮದ ಮೋಹನ್ ಮತ್ತು ಕುಮಾರ್ ಹಲ್ಲೆಕೋರರ ಟೀಂನದಲ್ಲಿದ್ದರು ಎಂದು ತಿಳಿದು ಬಂದಿದ್ದು ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

80374703 1004309389930481 765557021201137664 n.png? nc cat=106& nc eui2=AeFmjge2Np7Dc5ZrtdoOZa4Qj fnPozRcAwrpXnYOGPK0vj6atxXIpCoX4KIxigLso6l gJvxz1B4bidefPLzTfWPxZiRDR4xslJtxlWmn4MNw& nc ohc=2Y8ZiwfF pQAQlPZUknnM9AMZYfrlNQ2D86EcWUOoPxH93o FIiZGI9uw& nc ht=scontent.fblr11 1

ಅರಣ್ಯಾಧಿಕಾರಿಗೆ ಮುಂದುವರೆದ ಚಿಕಿತ್ಸೆ

DRFO ಗೋವಿಂದರಾಜು ಅವರ ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರಿಗೆ ಹೊಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಘಟನೆ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Sandalwood smugglers attack on DRFO in Hosanagara during a raid. DRFO has been admitted to the local hospital. Hosanagara Police have registered the case.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment