ನಂಬರ್ ಪ್ಲೇಟ್’ನಲ್ಲಿದ್ದ T ಅಕ್ಷರದಿಂದ ಕಾರು ಸೀಜ್, ಚಾಲಕ ಪೊಲೀಸರ ವಶಕ್ಕೆ, ತಪ್ಪು ಸಾಬೀತಾದರೆ 1.50 ಲಕ್ಷ ದಂಡ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019

ಟ್ರ್ಯಾಕ್ಟರ್‌ಗಳಿಗೆ ನೋಂದಣಿ ಮಾಡಿಸುವ ನಂಬರ್ ಹಾಕಿಕೊಂಡಿದ್ದ ಕಾರನ್ನು ಆರ್‌ಟಿಒ ಅಧಿಕಾರಿಗಳು ತಮ್ಮ ಕಚೇರಿ ಎದುರೇ ವಶಕ್ಕೆ ಪಡೆದಿದ್ದು, ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

2017ರಲ್ಲಿ ಕಾರು ಖರೀದಿಸಿದ್ದು, ಕಾರಿನ ಮಾಲೀಕ ಎರಡು ವರ್ಷದಿಂದ ನೋಂದಣಿ ಮಾಡಿಸದೇ ರಾಜಾರೋಷವಾಗಿ ಓಡಾಡಿಕೊಂಡಿದ್ದ. ಬುಧವಾರ ಆರ್‌ಟಿಒ ಕಚೇರಿ ಎದುರೇ ನಿಲ್ಲಿಸಿ ಹೋಗಿದ್ದ ವೇಳೆ ಅನುಮಾನಗೊಂಡು ತಪಾಸಣೆ ನಡೆಸಿದ ಆರ್.ಟಿ.ಓ ಅಧಿಕಾರಿಗಳು, ಕಾರು ಮತ್ತು ಚಾಲಕ ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಸಮೀಪದ ನಿವಾಸಿ ಉಮೇಶ್ ಎಂಬಾತನನ್ನು ವಶಕ್ಕೆ ಪಡೆದು ಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅನುಮಾನ ಬಂದದ್ದು ಹೇಗೆ?

ಸಾಮಾನ್ಯವಾಗಿ ‘ಟಿ’ ಸಿರೀಸ್ ನಂಬರ್’ಗಳನ್ನು ಟ್ರ್ಯಾಕ್ಟರ್‌ಗಳಿಗೆ ನೀಡಲಾಗುತ್ತದೆ. ಅದರೆ ಕಾರಿನ ನಂಬರ್ ಪ್ಲೇಟ್‌ನ ಮಧ್ಯದಲ್ಲಿ ‘ಟಿ’ ಕಂಡುಬಂದಿದ್ದರಿಂದ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಆತ ಎರಡು ವರ್ಷದಿಂದ ನೋಂದಣಿ ಮಾಡಿಸದೇ ನಕಲಿ ನಂಬರ್‌ಪ್ಲೇಟ್ ಅಳವಡಿಸಿಕೊಂಡು ಓಡಾಡುತ್ತಿರುವುದು ದೃಢಪಟ್ಟಿದೆ. ಒಂದು ವೇಳೆ ಪೊಲೀಸರು ನಾನ್ ಅಕ್ಷನಲ್ ಸರ್ಟಿಫಿಕೇಟ್ ನೀಡಿದ್ದೆ ಆದಲ್ಲಿ ಪರವಾನಗಿ ಲೈಸೆನ್ಸ್ ಇತ್ಯಾದಿ ಸೇರಿ 1.50 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.

advt for website

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Car Seized by Jayanagara Police station for not registering the car from 2017. RTO Officials handed over the car to the Police in Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment