NEWS 1 ಋಣಮುಕ್ತ ಕಾಯ್ದೆ ವ್ಯಾಪ್ತಿಗೆ ಬರಲ್ಲ ಮೈಕ್ರೋ ಫೈನಾನ್ಸ್ ಸಾಲ | NEWS 2 ಹೊಸನಗರ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019

advt for website

ಮೈಕ್ರೋ ಫೈನಾನ್ಸ್ ಸಾಲ ಹಿಂತಿರುಗಿಸಲೇಬೇಕು

ಶಿವಮೊಗ್ಗ | ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಪಡೆದ ಸಾಲವನ್ನು ಗ್ರಾಹಕರು ಮರುಪಾವತಿಸಬೇಕು. ಈ ಸಾಲಗಳು ರಾಜ್ಯ ಸರ್ಕಾರದ ಋಣಮುಕ್ತ ಕಾಯ್ದೆ ವ್ಯಾಪ್ತಿಗೆ ಅನ್ವಯ ಆಗುವುದಿಲ್ಲ ಎಂದು ಎಕೆಎಂಐ (ಅಸೋಷಿಯೇಷನ್ ಆಫ್ ಕರ್ನಾಟಕ ಮೈಕ್ರೋಫೈನಾನ್ಸ್ ಇನ್ಸ್’ಟಿಟೂಶನ್) ಸಿಇಒ ವಿ.ಎನ್.ಹೆಗಡೆ ತಿಳಿಸಿದರು. ಮೈಕೋ ಫೆನಾನ್ ಕಂಪನಿಗಳ ಆರ್‌ಬಿಐ ಅಡಿ ಕೆಲಸ ಮಾಡುತ್ತಿದೆ. ಮಹಿಳೆಯರು ಸ್ವಾವಲಂಬಿ ಆಗಲು ಗುಂಪು ಸಾಲ ನೀಡಲಾಗುತ್ತಿದೆ. ಈ ಸಾಲ ಮರುಪಾವತಿ ಮಾಡಬೇಕು. ಆದರೆ ಕೆಲವರು ಸಾಲಮರುಪಾವತಿ ಮಾಡಬೇಡಿ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಕೆಎಂಐ ಕಾರ್ಯದರ್ಶಿ ಶಾಂತಕುಮಾರ್ ಮಾತನಾಡಿ ಶಿವಮೊಗ್ಗ ಜಿಲ್ಲೆಯಲ್ಲೂ 3 ಲಕ್ಷ ಕುಟುಂಬಗಳಿಗೆ ಸಾಲ ನೀಡಲಾಗಿದೆ ಎಂದರು. ಎಕೆಎಂಐ ಕಾರ್ಯನಿರ್ವಾಹಕ ಸದಸ್ಯ ಪಂಚಾಕ್ಷರಿ, ಫೈನಾನ್ಸ್ ಸಂಸ್ಥೆಗಳ ವೆಂಕಟಾನಾಯಕ್, ತೇಜಾನಾಯಕ್ ಇದ್ದರು.

ತಂಬಾಕು ಉತ್ಪನ್ನ ಮಾರುವವರ ಮೇಲೆ ಕೇಸ್

ಹೊಸನಗರ | ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮತ್ತು ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿ, ಹೊಟೇಲ್’ಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಅಡಿ 22 ಪ್ರಕರಣ ದಾಖಲು ಮಾಡಿದ್ದಾರೆ. 1650 ರೂ. ದಂಡವನ್ನು ವಿಧಿಸಲಾಗಿದೆ. ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ. ಪ.ಪಂ ಮುಖ್ಯಾಧಿಕಾರಿ ಬಾಲಚಂದ್ರ, ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ರವಿರಾಜ್, ಹೊಸನಗರ ತಾಲೂಕು ಹಿರಿಯ ಆರೋಗ್ಯ ಸಹಾಯಕ ರಮೇಶಾಚಾರ್ ಮತ್ತು ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಾಳಿ ನಡೆಸಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Micro finance loan cannot be withdrawn. Officers raid various shops and hotels in Hosanagara over On KOTPA act. Shivamogga Live

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment