ಶಿವಮೊಗ್ಗ ಲೈವ್.ಕಾಂ | SHIMOGA | 24 ಜನವರಿ 2020
ಹೆಲ್ಮೆಟ್ ಧರಿಸದೇ ಕದ್ದುಮುಚ್ಚಿ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರು ಪೊಲೀಸರ ಕಣ್ಣು ತಪ್ಪಿಸಿದರೂ ದಂಡದಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಿಗ್ನಲ್ಗಳಲ್ಲಿ ಪೊಲೀಸರು ಕಂಡಾಗ ಮಾತ್ರ ಹೆಲ್ಮೆಟ್ ಧರಿಸುವ ವಾಹನ ಚಾಲಕರು ಇನ್ಮುಂದೆ ಹುಷಾರಾಗಿರಬೇಕು. ಇದಕ್ಕೆ ಕಾರಣ, ಪೊಲೀಸ್ ಇಲಾಖೆ ಸಾರ್ವಜನಿಕರ ಮೂಲಕವೇ ನಿಯಮ ಉಲ್ಲಂಘಿಸುವವರ ಮೇಲೆ ಕಣ್ಣಿಟ್ಟಿದೆ.
ವಾಟ್ಸಪ್’ನಲ್ಲಿ ಬರುತ್ತಿವೆ ಕಂಪ್ಲೇಂಟ್
ಇಲಾಖೆಯಲ್ಲಿರುವ ಸೀಮಿತ ಸಿಬ್ಬಂದಿಯನ್ನೇ ನಂಬಿಕೊಂಡು ಜಿಲ್ಲೆಯಲ್ಲಿರುವ ಎಲ್ಲ ವಾಹನಗಳ ಮೇಲೆ ಕಣ್ಣಿಡಲಾಗದು. ಅದಕ್ಕಾಗಿ ಸಾರ್ವಜನಿಕರ ಸಹಕಾರ ಪಡೆಯಲಾಗುತ್ತಿದೆ. ಕಳೆದ ನವೆಂಬರ್ 26ರಂದು ಇದಕ್ಕಾಗಿಯೇ ವಾಟ್ಸ್ಆಪ್ ಸಂಖ್ಯೆ ನೀಡಲಾಗಿದ್ದು, ಅದಕ್ಕೆ ಎರಡು ತಿಂಗಳಲ್ಲಿ 650 ದೂರುಗಳು ಬಂದಿವೆ. 3.25 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ತಿಂಗಳಿಗೆ ಸರಾಸರಿ 325 ದೂರುಗಳು ಸ್ವೀಕರಿಸಲಾಗಿದೆ. ಈ ಪೈಕಿ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು ಹಾಗೂ ನೋ ಪಾರ್ಕಿಂಗ್ನಲ್ಲಿ ನಿಲುಗಡೆ ಮಾಡುವುದು ಹಾಗೂ ಟ್ರಿಪಲ್ ರೈಡಿಂಗ್ ಪ್ರಕರಣಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.
ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರಷ್ಟೇ ಅಲ್ಲದೇ ಜನರೂ ಕಣ್ಣಿಡಬೇಕೆಂಬ ಉದ್ದೇಶದಿಂದ ವಾಟ್ಸ್ಆಪ್ ಸಂಖ್ಯೆ 9480803300 ನೀಡಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಜನರು ಜವಾಬ್ದಾರಿಯುತವಾಗಿ ದೂರು ನೀಡಿದ್ದಾರೆ. ಅದಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗಿದೆ.
– ಕೆ.ಎಂ. ಶಾಂತರಾಜು, ಎಸ್ಪಿ, ಶಿವಮೊಗ್ಗ
ವಾಟ್ಸಪ್’ನಲ್ಲಿ ಭರ್ಜರಿ ರೆಸ್ಪಾನ್ಸ್
ಹಿಂದಿನ ಎಸ್ಪಿ ಅಭಿನವ್ ಖರೆ ಅವರು ಟ್ರಾಫಿಕ್ ನಿಯಮ ಅನುಷ್ಠಾನದಲ್ಲಿ ಕಟ್ಟುನಿಟ್ಟಿಗೆ ಪಬ್ಲಿಕ್ ಐ, ಆಪ್ಗಳನ್ನು ಅಭಿವೃದ್ಧಿ ಪಡಿಸಿ ಜನರಿಗೆ ನೀಡಿದರು. ಆದರೆ, ಜನರಿಂದ ಪೂರಕ ಸ್ಪಂದನೆ ಸಿಕ್ಕಿರಲಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಚಾರಗಳನ್ನು ಕೈಗೊಂಡರೂ ಜನರು ಬಳಕೆಗೆ ಮುಂದೆ ಬಂದಿರಲಿಲ್ಲ.
ಆದರೆ, ಎಸ್ಪಿ ಕೆ.ಎಂ. ಶಾಂತರಾಜು ಅವರು ವಾಟ್ಸ್ಆಪ್ ಮೂಲಕ ದೂರು ನೀಡಲು ವೇದಿಕೆ ಕಲ್ಪಿಸಿದ್ದು, ಎರಡೇ ತಿಂಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಸಾರ್ವಜನಿಕರ ಸಹಕಾರದೊಂದಿಗೆ ೬೫೦ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Shimoga Police use Whatsapp To control traffic violation. 9480803300 is the whatsapp of Shimoga Police