ಶಿವಮೊಗ್ಗ ಲೈವ್.ಕಾಂ | SHIMOGA | 03 ಫೆಬ್ರವರಿ 2020
ಜೀವನಕ್ಕೆ ಅಂತಾ ಟೂರಿಸ್ಟ್ ವಾಹನ ಕೊಂಡುಕೊಂಡಿದ್ದಾರೆ ಮಂಜುನಾಥ್. ಆದರೆ ಕೆಲವೊಮ್ಮೆ ಬ್ಯಾಂಕ್ ಸಾಲದ ತಿಂಗಳ ಕಂತು ಕಟ್ಟಲು ಕಷ್ಟ ಕಷ್ಟ ಅನಿಸುತ್ತೆ. ಆದರೂ ಪ್ರತಿದಿನ ಮನೆಯಿಂದ ಕಾರು ಸ್ಟಾಂಡ್’ಗೆ ತಲುಪುತ್ತೆ. ಅಲ್ಲಿಂದ ಸಂಜೆ ವಾಪಸ್ ಬರುತ್ತೆ. ಸ್ಟಾಂಡ್ ಮತ್ತು ಮನೆ ನಡುವಿನ ಓಡಾಟಕ್ಕೆ ಖರ್ಚಾದ ಪೆಟ್ರೋಲ್’ನ ಹಣವನ್ನೇ ಉಳಿಸಿದ್ದರೂ ಇಎಂಐ ಕಟ್ಟಬಹುದಿತ್ತಾ ಅಂತಾ ಹಲವು ಬಾರಿ ಯೋಚಿಸಿದ್ದಾರೆ ಮಂಜುನಾಥ್.
![]() |

ಫ್ಯಾಮಿಲಿ ಜೊತೆಗೆ ಸಿಗಂದೂರಿಗೆ ಹೋಗಬೇಕು. ಆ ಬಳಿಕ ಇನ್ನೊಂದಷ್ಟು ದೇವಸ್ಥಾನ, ಪ್ರವಾಸಿ ತಾಣಗಳಿಗೆ ಭೇಟಿ ಕೊಡಬೇಕು. ಕುಟುಂಬದ ಜೊತೆಗೆ ಒಂದೊಳ್ಳೆ ವೀಕೆಂಡ್ ಕಳೆಯಬೇಕು ಅಂತಾ ಯೋಚಿಸುತ್ತಿದ್ದಾರೆ ಪ್ರಶಾಂತ್. ಆದರೆ ಅವರಿಗಿರುವುದು ಒಂದೇ ಯೋಚನೆ. ಟೂರಿಸ್ಟ್ ಕಾರುಗಳು ಎಲ್ಲಿ ಸಿಗುತ್ತವೆ? ಕಿಲೋ ಮೀಟರ್’ಗೆ ಎಷ್ಟು ಕೊಡಬೇಕು? ಖರ್ಚು ವೆಚ್ಚ ಎಷ್ಟಾಗುತ್ತೆ? ಒಳ್ಳೆಯ ಡ್ರೈವರ್ ಸಿಕ್ತಾರಾ? ಈ ಚಿಂತೆಯಲ್ಲೇ ಪ್ರಶಾಂತ ಪ್ರವಾಸವನ್ನು ಪ್ರಶಾಂತ್ ವಾರದಿಂದ ವಾರಕ್ಕೆ ಮುಂದೂಡುತ್ತಲೇ ಇದ್ದಾರೆ.
ಚಾಲಕ ಮಂಜುನಾಥ್ ಮತ್ತು ಪ್ರವಾಸಕ್ಕೆ ಮಾನಸಿಕವಾಗಿ ಸಿದ್ದವಾಗಿರುವ ಪ್ರಶಾಂತ್ ಅವರು ಲಿಂಕ್ ಆಗಬೇಕಿದೆ. ಇಬ್ಬರು ಕನೆಕ್ಟ್ ಆಗಿಬಿಟ್ಟರೆ, ಎರಡು ಕುಟುಂಬಕ್ಕೂ ಖುಷಿ ಮತ್ತು ನೆಮ್ಮದಿ.
ಇನ್ನು, ರವಿ ಅವರ ಯೋಚನೆಯೇ ಬೇರೆ. ಉತ್ತಮವಾಗಿ, ಗುಣಮಟ್ಟದ ಎಲೆಕ್ಟ್ರಿಕಲ್ ವರ್ಕ್ ಮಾಡುತ್ತಾರೆ. ಹಿಂದೆ ಬಿಸ್ನೆಸ್ ಚನ್ನಾಗಿತ್ತು. ಆದರೆ ಇವತ್ತು ಕಾಂಪಿಟೇಷನ್ ಬೆಳೆದಿದೆ. ಬೀದಿಗೊಬ್ಬರು ಎಲೆಕ್ಟ್ರಿಷಿಯನ್ ಇದ್ದಾರೆ. ಹೀಗಿದ್ದಾಗ ಜನರು ನನ್ನನ್ನು ಹುಡುಕಿಕೊಂಡು ಬರುವುದಕ್ಕೆ ಸಾದ್ಯವಿದೆಯಾ ಎಂಬ ಚಿಂತೆ ಅವರದ್ದು.
ಇತ್ತ ಸವಿತಾ ಅವರ ಮನೆಯಲ್ಲಿ ವಿಚಿತ್ರ ಸಮಸ್ಯೆ ಆರಂಭವಾಗಿದೆ. ಅಡುಗೆ ಮನೆಯಲ್ಲಿ ಸ್ವಿಚ್ ಹಾಕಿದರೆ, ಹಾಲ್’ನಲ್ಲಿರುವ ಟಿವಿ ದಿಢೀರ್ ಆಫ್ ಆಗುತ್ತದೆ. ಸ್ವಿಚ್ ಬೋರ್ಡ್ ಮುಟ್ಟಿದರೆ ಜುಮ್ ಅನಿಸುತ್ತದೆ. ಮನೆಯಲ್ಲಿರುವ ಮಕ್ಕಳು ಆಟವಾಡುತ್ತ ಸ್ವಿಚ್ ಮುಟ್ಟಿಬಿಟ್ಟರೆ ಅನ್ನುವ ಚಿಂತೆ. ರಿಪೇರಿ ಮಾಡೋಕೆ ಬಂದ ವ್ಯಕ್ತಿಯೊಬ್ಬನಿಗೆ ಸಮಸ್ಯೆಯ ಮೂಲವೇ ಗೊತ್ತಾಗದೆ ಹಿಂತಿರುಗಿದ್ದ. ಒಳ್ಳೆಯ ಎಲೆಕ್ಟ್ರಿಷಿಯನ್ ಎಲ್ಲಿ ಸಿಕ್ತಾರೆ ಅಂತಾ ದಿನ ಯೋಚಿಸುವುದೇ ಆಗಿದೆ.
ಸವಿತಾ ಅವರಿಗೆ ಎಲೆಕ್ಟ್ರಿಷಿಯನ್ ರವಿ ಅವರ ನಂಬರ್ ಸಿಕ್ಕಿಬಿಟ್ಟರೆ, ದಿನ ಟೆನ್ಷನ್ ಮಾಡಿಕೊಳ್ಳುವುದು ತಪ್ಪಲಿದೆ. ಅದರೆ ಸವಿತಾ ಅವರ ಮನೆ ಸಮಸ್ಯೆ ರವಿ ಅವರಿಗೆ ಗೊತ್ತಾಗೋದು ಹೇಗೆ?

ಮತ್ತೊಂದು ಕಡೆ, ಓವರ್ ಹೆಡ್ ಟ್ಯಾಂಕ್, ಅಂಡರ್ ಗ್ರೌಂಡ್ ಟ್ಯಾಂಕ್’ಗಳನ್ನು ಕ್ಲೀನ್ ಮಾಡುವ ಮೊಹಮದ್ ಅವರ ಕಥೆಯೇ ಬೇರೆ. ಎಲ್ಲೋ ಕೆಲವರಿಗಷ್ಟೇ ಇವರ ಕೆಲಸದ ಬಗ್ಗೆ ಗೊತ್ತಿದೆ. ಅವರುಗಳು ಅಪರೂಪಕ್ಕೆ ಒಮ್ಮೆ ಟ್ಯಾಂಕ್ ಕ್ಲೀನ್ ಮಾಡಲು ಕರೆಸುತ್ತಾರೆ. ಹೀಗಾಗಿ ಬಿಸ್ನೆಸ್ ಬಹಳ ಡಲ್ ಹೊಡೆದು ಕೂತಿದೆ. ಜೇಬು ಸದಾ ಖಾಲಿಯಾಗಿಯೇ ಇರುತ್ತದೆ.
ಗುರು ಅವರ ಮನೆಯಲ್ಲಿ ಎಲ್ಲರಿಗು ಚರ್ಮದ ಸಮಸ್ಯೆ ಉಂಟಾಗಿದೆ. ಆರಂಭದಲ್ಲಿ ಆಹಾರದ ಅಲರ್ಜಿ ಅಂದುಕೊಂಡಿದ್ದರು. ಡಾಕ್ಟರ್ ಬಳಿ ಹೋದಾಗಲೇ ಓವರ್ ಹೆಡ್ ಟ್ಯಾಂಕ್ ಕ್ಲೀನ್ ಮಾಡದೆ, ನೀರಿನಿಂದಾಗಿ ಸಮಸ್ಯೆ ಆಗುತ್ತಿದೆ ಅಂತಾ ಗೊತ್ತಾಗಿದ್ದು. ಮನೆ ಓನರ್’ಗೆ ಹೇಳಿದರೆ, ಕ್ಲೀನ್ ಮಾಡುವವರು ಗೊತ್ತಿದ್ದರೆ ತಿಳಿಸಿ ಅನ್ನುತ್ತಿದ್ದಾರೆ. ಸಮಸ್ಯೆ ಬಿಗಡಾಯಿಸುವ ಮೊದಲು ಟ್ಯಾಂಕ್ ಕ್ಲೀನ್ ಮಾಡಿಸಬೇಕಿದೆ.
ಮೊಹಮದ್ ಅವರಿಗೆ ಗುರು ಅವರ ಮನೆಯ ಸಮಸ್ಯೆ ತಿಳಿಯುವುದು ಹೇಗೆ? ಒಂದು ವೇಳೆ ಇವರಿಬ್ಬರು ಕನೆಕ್ಟ್ ಆಗಿಬಿಟ್ಟರೆ, ಎರಡು ಕಡೆಯವರ ಸಮಸ್ಯೆಯು ನೀಗಲಿದೆ.

ಈ ಆರು ಜನರ ಸಮಸ್ಯೆ ಬೇರೆ ಬೇರೆ. ಆದರೆ ಎಲ್ಲರದ್ದು ಒಂದೇ ಯೋಚನೆ. ಅದು ತಮ್ಮ ಸಮಸ್ಯೆ ಆದಷ್ಟು ಬೇಗ ಪರಿಹಾರವಾಗಲಿ ಅನ್ನೋದು. ನಿಮ್ಮ ಮನೆಯಲ್ಲಿ, ನಿಮ್ಮ ಬಿಸ್ನೆಸ್’ನಲ್ಲೂ ಇಂತಹ ಸಮಸ್ಯೆ ಇರಬಹುದು. ಆದರೆ ಅದೆಷ್ಟೋ ಬಾರಿ ಪರಿಹಾರವೇ ಅಗುವುದಿಲ್ಲ. ಅದಕ್ಕೆ ಕಾರಣ ಯಾರನ್ನು ಕಾಂಟ್ಯಾಕ್ಟ್ ಮಾಡಬೇಕು ಅನ್ನುವ ಗೊಂದಲ.
ಇಂತಹ ನೂರಾರು ಗೊಂದಲಗಳಿಗೆ ಥಟ್ ಅಂತಾ ಪರಿಹಾರ ಹುಡುಕುವ ಸಲುವಾಗಿ, ಶಿವಮೊಗ್ಗ ಲೈವ್.ಕಾಂ ಒಂದು ವಿಭಿನ್ನ ಪ್ರಯತ್ನ ಆರಂಭಿಸಿದೆ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆ ಪರಿಹರಿಸುವವರನ್ನು, ಥಟ್ ಅಂತಾ ಕನೆಕ್ಟ್ ಮಾಡಿ ಕೊಡುತ್ತದೆ.
ಏನಿದು ವಿಭಿನ್ನ ಪ್ರಯತ್ನ? ಕನೆಕ್ಟ್ ಮಾಡೋದು ಹೇಗೆ?
CONNECTING SHIVAMOGGA ಅನ್ನೋದು ಶಿವಮೊಗ್ಗ ಲೈವ್.ಕಾಂನ ಟ್ಯಾಗ್ ಲೈನ್. ಮೂರು ವರ್ಷದಿಂದ ಶಿವಮೊಗ್ಗದ ನ್ಯೂಸ್ ಅಪ್’ಡೇಟ್’ಗಳನ್ನು ಜನರಿಗೆ ಕನೆಕ್ಟ್ ಮಾಡುತ್ತಿದ್ದೇವೆ. ಸಾವಿರದ ಲೆಕ್ಕದಲ್ಲಿದ್ದ ಓದುಗರ ಸಂಖ್ಯೆ, ಈಗ ಒಂದು ಲಕ್ಷಕ್ಕೆ ತಲುಪಿದೆ. ಪ್ರತಿ ತಿಂಗಳು ಶಿವಮೊಗ್ಗ ಲೈವ್.ಕಾಂಗೆ ಓದುಗರು ಹೆಚ್ಚಳವಾಗುತ್ತಿದ್ದಾರೆ ಅನ್ನುತ್ತಿದೆ ಪ್ರತಿಷ್ಠಿತ ಗೂಗಲ್ ಸಂಸ್ಥೆ.
ಇಷ್ಟೆಲ್ಲ ದೊಡ್ಡ ಓದುಗರನ್ನು ಹೊಂದಿರುವ ಶಿವಮೊಗ್ಗ ಲೈವ್.ಕಾಂ, ಇನ್ಮುಂದೆ ಸುದ್ದಿ ತಲುಪಿಸುವುದರ ಜೊತೆಗೆ ಜನರನ್ನು ಕನೆಕ್ಟ್ ಮಾಡುವತ್ತಲು ಯೋಜಿಸಿದೆ. ಇದಕ್ಕಾಗಿಯೇ ಫೋನ್ ಡೈರಿ ಎಂಬ ವಿಭಿನ್ನ ವೆಬ್’ಸೈಟ್ ಆರಂಭಿಸಲಾಗಿದೆ.

ಹೇಗೆ ಕೆಲಸ ಮಾಡುತ್ತದೆ ಈ ವೆಬ್’ಸೈಟ್?
ಮೇಲಿನ ಉದಾಹರಣೆಯಂತೆ ಪ್ರಶಾಂತ್ ಅವರಿಗೆ ಚಾಲಕ ಮಂಜುನಾಥ್ ಅವರನ್ನು ಕನೆಕ್ಟ್ ಮಾಡಲಾಗುತ್ತದೆ. ಸವಿತಾ ಅವರ ಮನೆಯ ವಿದ್ಯುತ್ ಶಾಕ್’ನ ಸಮಸ್ಯೆ ಪರಿಹಾರಕ್ಕೆ ರವಿ ಅವರನ್ನು ಕನೆಕ್ಟ್ ಮಾಡಲಾಗುತ್ತದೆ. ಗುರು ಮನೆಯ ಪ್ರಾಬ್ಲಂ ನಿವಾರಣೆಗೆ ಮೊಹಮದ್’ರನ್ನು ಕನೆಕ್ಟ್ ಮಾಡಲಾಗುತ್ತದೆ.
ವ್ಯಾಪಾರಿಗಳು ತಮ್ಮ ಬಿಸ್ನೆಸ್ ಕುರಿತು ಫೋನ್ ಡೈರಿಗೆ ರಿಜಿಸ್ಟರ್ ಮಾಡಿಕೊಂಡರೆ ಸಾಕು. ಅವರ ಬಿಸ್ನೆಸ್’ನ ಹೆಸರು, ವಿಳಾಸ, ಫೋನ್ ನಂಬರ್, ಸಂಪರ್ಕ ಸಂಖ್ಯೆ, ಫೋಟೊವನ್ನು ವೆಬ್’ಸೈಟ್’ನಲ್ಲಿ ಪ್ರಕಟಿಸಲಾಗುತ್ತದೆ. ಆ ಬಳಿಕ ಆಸಕ್ತರು ವೆಬ್’ಸೈಟ್’ನಲ್ಲೇ ಹುಡುಕಿ ನಂಬರ್ ಪಡೆದು ಕರೆ ಮಾಡಿ, ಸಮಸ್ಯೆ ಥಟ್ ಅಂತಾ ಪರಿಹಾರ ಕಂಡುಕೊಳ್ಳಬಹುದು. ಅಂದಹಾಗೆ ನಮ್ಮ ಫೋನ್ ಡೈರಿ ವೆಬ್’ಸೈಟ್ ದಿನದ 24 ಗಂಟೆಯೂ ಲಭ್ಯವಿರಲಿದೆ.

ವೆಬ್’ಸೈಟ್’ನಲ್ಲಿ ಹುಡುಕಲು ಆಗದಿದ್ದರೆ ಚಿಂತೆನೇ ಬೇಡ, ಕಾಲ್ ಸೆಂಟರ್ ನಂಬರ್’ಗೆ ಕರೆ ಮಾಡಿದರೆ ಸಾಕು. ಫಟಾಫಟ್ ಬೇಕಾದ ನಂಬರ್’ಗಳು ಕರೆ ಮಾಡಿದವರ ಮೊಬೈಲ್’ಗೆ ತಲುಪಲಿದೆ. ಜನರನ್ನು ಕನೆಕ್ಟ್ ಮಾಡುವ ಈ ವಿಭಿನ್ನ ಪ್ರಯತ್ನ ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆರಂಭವಾಗುತ್ತಿದೆ.

ಇನ್ನೇನು ಯೋಚನೆ ಮಾಡ್ತಿದ್ದೀರ? ನಿಮ್ಮ ಬಿಸ್ನೆಸ್’ಗೆ ತಕ್ಕ ಗ್ರಾಹಕರನ್ನು, ಅವರಿಗೆ ಬೇಕಾದ ಸಮಯಕ್ಕೆ ನೀವು ಕೆನೆಕ್ಟ್ ಆಗಿ. ಬಿಸ್ನೆಸ್ ಬೆಳೆಸಿಕೊಳ್ಳಿ. ಅಂದಹಾಗೆ, ಇದಕ್ಕೆಲ್ಲ ಖರ್ಚಾಗೋದು ಎಷ್ಟು ಗೊತ್ತಾ? ಜಸ್ಟ್ ಒಂದು ರುಪಾಯಿ 80 ಪೈಸೆ ಪ್ರತಿ ದಿನಕ್ಕೆ. ಈಗಾಗಲೇ ಫೋನ್ ಡೈರಿಗೆ ದೊಡ್ಡ ರೆಸ್ಪಾನ್ಸ್ ಸಿಗುತ್ತಿದೆ. ಆರಂಭದಲ್ಲೇ 73 ಮಂದಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಇನ್ನೇಕೆ ತಡ. ನೀವು ಟ್ರೈ ಮಾಡಿ. ಆಸಕ್ತರು 7411700200, 9964634494, 9972194422 ನಂಬರ್’ಗೆ ಕರೆ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200