SHIVAMOGGA LIVE NEWS | 5 FEBRUARY 2024
SHIMOGA : ನಗರದಲ್ಲಿ ಪ್ರೀ ಪೇಯ್ಡ್ ಆಟೋ ರಿಕ್ಷ ಕೌಂಟರ್ ತೆರೆಯಲು ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, KSRTC ಬಸ್ ನಿಲ್ದಾಣದ ಆವರಣದಲ್ಲಿ ಪ್ರೀ ಪೇಯ್ಡ್ ಆಟೋ ಕೌಂಟರ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಕೌಂಟರ್ ಸ್ಥಾಪಿಸಲು ಜಿಎಸ್ಟಿ ಅಥವಾ ಐಟಿ ನಂಬರ್ ಹೊಂದಿರುವ ನೊಂದಾಯಿತ ಸಂಸ್ಥೆಯವರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಸಂಪರ್ಕಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ಸಂ.: 08182-222209 ಹಾಗೂ ಇ-ಮೇಲ್ [email protected] ನ್ನು ಸಂಪರ್ಕಿಸುವುದು.
ಇದನ್ನೂ ಓದಿ – ಮ್ಯಾಟ್ರಿಮೋನಿ ಆ್ಯಪ್ ಬಳಸುತ್ತಿದ್ದ ಉಪನ್ಯಾಸಕಿಗೆ ಇಂಗ್ಲೆಂಡ್ನಿಂದ ಗಿಫ್ಟ್, ಕಾದಿತ್ತು ಶಾಕ್, ಶಿವಮೊಗ್ಗದಲ್ಲಿ ಕೇಸ್