ನಿತಿನ್‌ ಕೈದೊಟ್ಲು

ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Editor
Follow:
12253 Articles

ಬೆಳಗ್ಗೆ ಜಿಮ್‌ಗೆ ತೆರಳಲು ಮನೆಯಿಂದ ಹೊರ ಬಂದ ಯುವಕನಿಗೆ ಆಘಾತ, ಆಗಿದ್ದೇನು?

ಶಿವಮೊಗ್ಗ : ಮನೆ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದ ಎರಡು ಬೈಕುಗಳನ್ನು ರಾತ್ರೋರಾತ್ರಿ ಕಳ್ಳತನ (Theft) ಮಾಡಲಾಗಿದೆ.…

ಬ್ಯೂಟಿ ಪಾರ್ಲರ್‌ ಬಾಗಿಲು ತೆಗೆದಾಗ ಮಾಲೀಕರಿಗೆ ಶಾಕ್‌, ಸಿಸಿಟಿವಿ ಚೆಕ್‌ ಮಾಡಿದಾಗ ಕಾದಿತ್ತು ಆಘಾತ

ಶಿವಮೊಗ್ಗ : ಬ್ಯೂಟಿ ಪಾರ್ಲರ್‌ನ ಇಂಟೀರಿಯರ್‌ (Interior Design) ಕೆಲಸಕ್ಕೆ ಬಂದವರು ರಾತ್ರೋರಾತ್ರಿ ವಸ್ತುಗಳನ್ನು ಕಳ್ಳತನ…

ಶಿವಮೊಗ್ಗದಲ್ಲಿ ಬೈಕ್‌ ಖರೀದಿಗೆ ಬಂದವನು ಟ್ರಯಲ್‌ ನೋಡಲು ಕೊಂಡೊಯ್ದ, ಹಿಂತಿರುಗಲೇ ಇಲ್ಲ, ಹೇಗಾಯ್ತು ಘಟನೆ?

ಶಿವಮೊಗ್ಗ : ಖರೀದಿಸುವವನಂತೆ ಬಂದು ಬೈಕ್‌ ಟ್ರಯಲ್‌ (Trail) ನೋಡಲು ಕೊಂಡೊಯ್ದವನು ಹಿಂತಿರುಗಿಲ್ಲ ಎಂದು ಆರೋಪಿಸಿ…

ಶಿವಮೊಗ್ಗದ ಜೆಡಿಎಸ್‌ ಮುಖಂಡ ಸಿದ್ದಪ್ಪ ವಿಧಿವಶ

ಶಿವಮೊಗ್ಗ : ಜೆಡಿಎಸ್‌ ಮುಖಂಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದಪ್ಪ (62) ನಿಧನರಾಗಿದ್ದಾರೆ (No…

ಸರ್ಕಾರಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ

ಸೊರಬ : ಶಾಲೆ ಕಾಂಪೌಂಡ್‌ ನಿರ್ಮಾಣ ಕಾರ್ಯಕ್ಕೆ ಶಿಕ್ಷಣ ಸಚಿವರೆ ಗುದ್ದಲಿ, ಪಿಕಾಸಿ ಹಿಡಿದು, ಮಣ್ಣು…

ಶಿವಮೊಗ್ಗದಲ್ಲಿ ಸದ್ಯಕ್ಕೆ ತಂಪು ತಂಪು ವಾತಾವರಣ, ಇವತ್ತೂ ಮಳೆಯಾಗುತ್ತಾ?

ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಶನಿವಾರ ಉತ್ತಮ ಮಳೆಯಾಗಿದೆ. ಇದರಿಂದ ವಾತಾವರಣ ತಂಪಾಗಿದೆ.…

ಉದ್ಯೋಗ ಖಾತ್ರಿ ಯೋಜನೆ ಅಡಿ ಇಬ್ಬರು ಸಚಿವರಿಂದ ಶ್ರಮದಾನಕ್ಕೆ ದಿನಾಂಕ ಫಿಕ್ಸ್‌, ಎಲ್ಲಿ?

ಸೊರಬ : ಉದ್ಯೋಗ ಖಾತ್ರಿ ಯೋಜನೆ ಅಡಿ ಶಾಲೆಯ ಕಾಂಪೌಂಡ್‌ ಮತ್ತು ಅಡುಗೆ ಮನೆ ನಿರ್ಮಾಣ…

ಆರೋಪ ಸಾಬೀತು, ಭದ್ರಾವತಿಯ ಯುವಕನಿಗೆ 10 ವರ್ಷ ಜೈಲು, 1 ಲಕ್ಷ ರೂ. ದಂಡ, ಏನಿದು ಕೇಸ್‌?

ಶಿವಮೊಗ್ಗ : ಓಮ್ನಿ ಕಾರಿನಲ್ಲಿ ಗಾಂಜಾ ಸಾಗಿಸಿದ್ದ ಆರೋಪ ಸಾಬೀತಾದ ಹಿನ್ನೆಲೆ ಭದ್ರಾವತಿಯ ಕಲ್ಲಹಳ್ಳಿಯ ಮುರುಗ…

ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಕುರಿತು ಷಡಾಕ್ಷರಿ ಮಹತ್ವದ ಹೇಳಿಕೆ, ಏನದು?

ಶಿವಮೊಗ್ಗ : ಸಂಬಳ ಪ್ಯಾಕೇಜ್‌ ಯೋಜನೆಗೆ ಸರ್ಕಾರಿ ನೌಕರರು ಶೀಘ್ರ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ವೇತನ…

ಶಿವಮೊಗ್ಗ ಸಿಟಿಯಲ್ಲಿ ಜೋರು ಮಳೆ, ತೀರ್ಥಹಳ್ಳಿಯಲ್ಲು ವರ್ಷಧಾರೆ, ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಳೆಯಾಗ್ತಿದೆ?

ಶಿವಮೊಗ್ಗ : ಸಂಜೆ ವೇಳೆಗೆ ಶಿವಮೊಗ್ಗ ನಗರದ ವಿವಿಧೆಡೆ ಜೋರು ಮಳೆ (Rain) ಸುರಿಯುತ್ತಿದೆ. ಇದರಿಂದ…