ಶಿವಮೊಗ್ಗ MRSನಲ್ಲಿ ಭುವನೇಶ್ವರಿಗೆ ಪೂಜೆ, ಅನ್ನ ಸಂತರ್ಪಣೆ | ಕೂಡಲಿಯಲ್ಲಿ ರಥಾರೋಹಣ | ಫಟಾಫಟ್‌ ನ್ಯೂಸ್‌

281123-Karnataka-Rajyotsava-in-MRS-Shimoga.webp

SHIVAMOGGA LIVE NEWS | 28 NOVEMBER 2023 ಎಂಆರ್‌ಎಸ್‌ ಸರ್ಕಲ್‌ನಲ್ಲಿ ಅದ್ಧೂರಿ ರಾಜ್ಯೋತ್ಸವ SHIMOGA : ನಗರದ ಎಂಆರ್‌ಎಸ್‌ ಸರ್ಕಲ್‌ನಲ್ಲಿ ಭಗತ್‌ ಸಿಂಗ್‌ ಗೆಳೆಯರ ಬಳಗದ ವತಿಯಿಂದ ಎರಡನೇ ವರ್ಷದ ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಆಚರಿಸಲಾಯಿತು. ಭುವನೇಶ್ವರಿ ತಾಯಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೊಡ್ಡ ಸಂಖ್ಯೆ ಜನರು ಭಾಗವಹಿಸಿದ್ದರು. ರಾಜ್ಯೋತ್ಸವದ ಹಿನ್ನೆಲೆ ಎಂಆರ್‌ಎಸ್‌ ಸರ್ಕಲ್‌ನಲ್ಲಿ ಕರ್ನಾಟಕ ಧ್ವಜದ ಬಣ್ಣ ಹೋಲುವ ಬಂಟಿಂಗ್ಸ್‌ ಹಾಕಲಾಗಿತ್ತು. ಕೂಡಲಿಯಲ್ಲಿ ರಥಾರೋಹಣ SHIMOGA : ಕೂಡಲಿ … Read more

ಆರು ವರ್ಷದಿಂದ ಪ್ರೀತಿಸುತ್ತಿದ್ದ ಯುವಕನ ಹೆಸರು ಹೇಳಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ, ಕಾರಣವೇನು?

Hosanagara-Police-Station-Board

SHIVAMOGGA LIVE NEWS | 28 NOVEMBER 2023 HOSANAGARA : ಪ್ರೀತಿಸಿದ್ದ ಯುವಕ (youth) ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಮಾತ್ರೆಗಳನ್ನು ನುಂಗಿ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೊಸನಗರದ ಯುವತಿ ಮತ್ತು ಯುವಕ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಯುವಕ ಸಲುಗೆಯಿಂದ ಇದ್ದ. ಈಗ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ- ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳಿಂದ ರಸ್ತೆ ತಡೆ, ಮಾತು ತಪ್ಪಿದ ವಿವಿ ಆಡಳಿತದ … Read more

ಶಿವಮೊಗ್ಗ ಜಿಲ್ಲೆಯಲ್ಲಿ 238 ಸಮಸ್ಯಾತ್ಮಕ ಗ್ರಾಮಗಳ ಗುರುತು, ಏನಿದು?

60823-Minister-Madhu-Bangarappa.jpg

SHIVAMOGGA LIVE NEWS | 28 NOVEMBER 2023 SHIMOGA : ಗ್ಯಾರಂಟಿಗಳ ನಡುವೆಯೂ ರಾಜ್ಯ ಸರ್ಕಾರ ಉತ್ತಮವಾಗಿ ಬರ ನಿರ್ವಹಣೆ ಮಾಡುತ್ತಿದೆ. ಜತೆಗೆ ಬರ ಪರಿಹಾರಕ್ಕೆ ಹಣದ ಕೊರತೆಯೂ ಎದುರಾಗಿಲ್ಲ. ಈಗಾಗಲೇ ಜಿಲ್ಲಾಧಿಕಾರಿ ಖಾತೆಗೆ ಬರ ನಿರ್ವಹಣೆಗೆ ಸಾಕಾಗುವಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು. 238 ಸಮಸ್ಯಾತ್ಮಕ ಗ್ರಾಮಗಳು ಗುರುತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ(Madhu Bangarappa), ಶಿವಮೊಗ್ಗ ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವು … Read more

ಶಿಕಾರಿಪುರದ ಬೇಗೂರು, ಬೈರನಹಳ್ಳಿ ಸುತ್ತಮುತ್ತ ಚಿರತೆ ಭೀತಿ

201023-leopard-general-image.webp

SHIVAMOGGA LIVE NEWS | 28 NOVEMBER 2023 SHIKARIPURA : ತಾಲೂಕಿನ ಬೇಗೂರು ಮತ್ತು ಬೈರನಹಳ್ಳಿ ಗ್ರಾಮದ ನಡುವೆ ಚಿರತೆ (Leopard) ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ರೈತರು ಜಮೀನಿಗೆ ತೆರಳಲು ಕೂಡ ಹೆದರುತ್ತಿದ್ದಾರೆ. ಬೇಗೂರು ಕರೇಹಳ್ಳ ಭಾಗದಲ್ಲಿ ನವೆಂಬರ್‌ ತಿಂಗಳ ಆರಂಭದಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿತ್ತು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಸುತ್ತಮುತ್ತಲು ಬೋನ್‌ ಇರಿಸಲಾಗಿದೆ. ಆದರೆ ಚಿರತೆ ಸುತ್ತಮುತ್ತಲು ಸಂಚರಿಸುತ್ತಿದೆ. ಇದರಿಂದ ಆತಂಕಕ್ಕೀಡಾದ ಗ್ರಾಮಸ್ಥರು ಜಮೀಗೆ … Read more

ಪತಿಯೊಂದಿಗೆ ಶಿವಮೊಗ್ಗದಿಂದ ಭದ್ರಾವತಿಗೆ ಬಸ್ಸಿನಲ್ಲಿ ತೆರಳಿ ಆಟೋ ಹತ್ತಿದ ಮಹಿಳೆಗೆ ಕಾದಿತ್ತು ಬಿಗ್‌ ಶಾಕ್

Women-Standing-in-Door-in-KSRTC-Shimoga-Bhadravathi-route

‌SHIVAMOGGA LIVE NEWS | 28 NOVEMBER 2023 SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಪರ್ಸ್‌ಗಳ (purse) ಕಳವು ಪ್ರಕರಣ ಮುಂದುವರೆದಿದೆ. ಈವರೆಗೆ ಪ್ಲಾಟ್‌ ಫಾರಂನಲ್ಲಿ ಕೃತ್ಯ ಎಸಗುತ್ತಿದ್ದ ಖದೀಮರು, ಈಗ ಭದ್ರಾವತಿ ಬಸ್‌ಗಳು ನಿಲ್ಲುವೆಡೆ ಮಹಿಳೆಯೊಬ್ಬರ ಬ್ಯಾಗ್‌ನಿಂದ ಪರ್ಸ್‌ ಲಪಟಾಯಿಸಿದ್ದಾರೆ. ಭದ್ರಾವತಿಯಲ್ಲಿ ಇಳಿದಾಗ ಶಾಕ್‌ ಶಿವಮೊಗ್ಗದಲ್ಲಿ ಸಂಬಂಧಿಯೊಬ್ಬರ ಮನೆಯಲ್ಲಿ ನಾಮಕರಣ ಕಾರ್ಯಕ್ರಮ ಮುಗಿಸಿ ವಿಜಯಾ ಎಂಬುವವರು ತಮ್ಮ ಪತಿಯೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಭದ್ರಾವತಿಗೆ ತೆರಳಿದ್ದರು. ಆಟೋದಲ್ಲಿ ಮನೆವರೆಗೆ ತಲುಪಿ ಹಣ … Read more

ದೀವರ ಸಾಂಸ್ಕೃತಿಕ ವೈಭವ, ಮೂವರಿಗೆ ಪ್ರಶಸ್ತಿ, ದೊಡ್ಡ ಸಮಾವೇಶದ ದಿನಾಂಕ ಪ್ರಕಟಿಸಿದ ಮಿನಿಸ್ಟರ್‌

271123 deevara samskrutika programme inaugration 1

SHIVAMOGGA LIVE NEWS | 27 NOVEMBER 2023 SHIMOGA : ಧೀರ ದೀವರ ಬಳಗ, ಹಳೆಪೈಕ ದೀವರ (deevara) ಸಂಸ್ಕೃತಿ ಸಂವಾದ ಬಳಗದ ವತಿಯಿಂದ ಈಡಿಗ ಸಮುದಾಯ ಭವನದಲ್ಲಿ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾರಗನಜಡ್ಡು ಶ್ರೀಕ್ಷೇತ್ರ ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಯಾರೆಲ್ಲ ಏನೇನು ಹೇಳಿದರು? ಮೂವರಿಗೆ ಧೀರ ದೀವರ ಪ್ರಶಸ್ತಿ ಕಾರ್ಯಕ್ರಮದಲ್ಲಿ ದೀವರ ಸಾಂಸ್ಕತಿಕ ವೈಭವದಲ್ಲಿ ಬೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆಯಲ್ಲಿ 98 ಕಲಾವಿದರು ಭಾಗವಹಿಸಿದ್ದರು. … Read more

ಶಿಕಾರಿಪುರದ ಶಿವಮೊಗ್ಗ ರಸ್ತೆಯಿಂದ ಬೈಕ್‌ ಜಾಥಾ, ನ.30ರಂದು ಸಂತೆ ಮೈದಾನದಲ್ಲಿ ಸಮಾರಂಭ

Shikaripura-MLA-BY-Vijayendra.webp

SHIVAMOGGA LIVE NEWS | 27 NOVEMBER 2023 SHIKARIPURA : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ (B.Y.Vijayendra) ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರಿಗೆ ನ.30ರಂದು ಶಿಕಾರಿಪುರದ ಹಳೆ ಸಂತೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ತಿಳಿಸಿದರು. ಶಿಕಾರಿಪುರ ಪಟ್ಟಣದ ಕುಮದ್ವತಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಗುರುಮೂರ್ತಿ, ನಮ್ಮ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಾಮಾನ್ಯ ಕಾರ್ಯಕರ್ತರಿಂದ … Read more

2024ರ ಸರ್ಕಾರಿ ರಜೆಗಳ ಪಟ್ಟಿ ಪ್ರಕಟಿಸಿದ ಸರ್ಕಾರ, ಎಷ್ಟು ರಜೆಗಳಿವೆ?

VIDHANA-SOUDHA-GENERAL-IMAGE.jpg

SHIVAMOGGA LIVE NEWS | 25 NOVEMBER 2023 BANGALORE : 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ. ಎಲ್ಲ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಕೆಳಕಂಡ ದಿನಗಳು ಸಾರ್ವತ್ರಿಕ ರಜಾದಿನಗಳಾಗಿವೆ. ಈ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಅಂಬೇಡ್ಕರ್‌ ಜಯಂತಿ (ಏ. 14), ಮಹಾವೀರ ಜಯಂತಿ (ಏಪ್ರಿಲ್‌ 21), ಎರಡನೇ ಶನಿವಾರ ಬರುವ ವಿಜಯದಶಮಿ (ಅ. 12) ನಮೂದಿಸಿಲ್ಲ. ಇದನ್ನೂ ಓದಿ – ‘ಸಾಗರದ ಗಣಪತಿ ಕೆರೆ … Read more

ಕೊಟ್ಟಿಗೆಗೆ ಬೆಂಕಿ, ಕಾರು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

251123-Incident-at-kodanavalli-in-Kudaruru.webp

SHIVAMOGGA LIVE NEWS | 25 NOVEMBER 2023 BYKODU : ಕೊಟ್ಟಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿದೆ. ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡನವಳ್ಳಿಯ ಗಣಪತಿ ಎಂಬುವವರ ಅವರ ಕೊಟ್ಟಿಗೆಯಲ್ಲಿ ಘಟನೆ (Incident) ಸಂಭವಿಸಿದೆ. ಹೇಗಾಯ್ತು ಘಟನೆ? ಏನೇನೆಲ್ಲ ನಷ್ಟವಾಗಿದೆ? ಗಣಪತಿ ಅವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಟ್ಟದಲ್ಲಿ ಸಂಗ್ರಹಿಸಿ ಇಟ್ಟಿದ್ದ 200 ಪಿಂಡಿ ಹುಲ್ಲು, ತಾಮ್ರದ ಹಂಡೆ, ಲಕ್ಷಾಂತರ ಮೌಲ್ಯದ ನಾಟಾ, ಓಮ್ನಿ ಕಾರು, ಪೈಪ್‌, ಕಟ್ಟಿಗೆ ಸೇರಿದಂತೆ ಸುಮಾರು 6 … Read more

ಕುಂಸಿ ಸಮೀಪ ಮನೆಯಲ್ಲಿ ವಿಷ ಸೇವಿಸಿದ್ದ ವ್ಯಕ್ತಿ ಸಾವು

Kumsi-Police-Station-Shimoga

SHIVAMOGGA LIVE NEWS | 25 NOVEMBER 2023 KUMSI : ಸಾಲಬಾಧೆಗೆ ಕುಂಸಿ ಸಮೀಪದ ಚಿಕ್ಕಮರಸದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೋಕಾಚಾರಿ (60) ಮೃತರು. ಬ್ಯಾಂಕ್‌ನಿಂದ ಸಾಲ ಪಡೆದಿದ್ದು, ಈ ಬಾರಿ ಬೆಳೆ ಸರಿಯಾಗಿ ಬಾರದ ಕಾರಣ ಸಾಲ ತೀರಿಸಿರಲಿಲ್ಲ. ಇದರಿಂದ ಬೇಸತ್ತಿದ್ದರು ಎಂದು ಆರೋಪಿಸಲಾಗಿದೆ. ಮನೆಯಲ್ಲಿ ವಿಷ ಸೇವಿಸಿದ್ದ ಅವರನ್ನು ತಕ್ಷಣ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಮೃತಪಟ್ಟಿದ್ದಾರೆ. ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more