ಶಿವಮೊಗ್ಗ ಲೈವ್.ಕಾಂ | SHIMOGA | 29 ಮಾರ್ಚ್ 2020
ಲಾಕ್’ಡೌನ್ ಆದೇಶ ಉಲ್ಲಂಘಿಸಿ ಅನಾವಶ್ಯಕವಾಗಿ ಬೈಕ್’ಗಳಲ್ಲಿ ಸಿಟಿ ರೌಂಡ್ಸ್ ಹೊಡೆಯುತ್ತಿದ್ದ ಯುವಕರಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೇಸ್ ದಾಖಲು ಮಾಡಿ, ಬೈಕ್’ಗಳನ್ನು ಸೀಜ್ ಮಾಡಿದ್ದಾರೆ.
ಮಾರ್ಚ್ 27 ಮತ್ತು 28ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಣವಿಲ್ಲದೆ ಬೈಕ್’ನಲ್ಲಿ ಸುತ್ತುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನು, ರೌಂಡ್ಸ್ ಹೊಡೆಯಲು ಬಳಸಿದ್ದ 176 ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರೋನ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಲಾಕ್’ಡೌನ್ ಘೋಷಿಸಲಾಗಿದೆ. ಈ ವೇಳೆ ತುರ್ತು ಮತ್ತು ಅನಿವಾರ್ಯ ಕಾರಣವಿದ್ದರಷ್ಟೇ ಮನೆಯಿಂದ ಹೊರಬರಬೇಕು ಎಂದು ಸೂಚಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]