SHIVAMOGGA LIVE NEWS | 18 NOVEMBER 2023
SHIMOGA : ಫ್ರೀಡಂ ಪಾರ್ಕ್ನಲ್ಲಿ (freedom park) ಪಟಾಕಿ ಖರೀದಿಗೆ ತೆರಳಿದ್ದಾಗ ವ್ಯಕ್ತಿಯೊಬ್ಬರ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನ ಮಾಡಲಾಗಿದೆ. ನ.12ರಂದು ಘಟನೆ ಸಂಭವಿಸಿದೆ.
ವಿನೋಬನಗರದ ಪ್ರಕಾಶ್ ಎಂಬುವವರು ದೀಪಾವಳಿ ಹಬ್ಬದಂದು ಪಟಾಕಿ ಖರೀದಿಗೆ ತೆರಳಿದ್ದರು. ಪಟಾಕಿ ಖರೀದಿಸಿ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಪ್ರಕಾಶ್ ಅವರು ನ.16ರಂದು ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ- ಇನ್ಸ್ಪೆಕ್ಟರ್ಗಳ ವರ್ಗಾವಣೆ, ಜಯನಗರಕ್ಕೆ ಸಿದ್ದೇಗೌಡ, ರಿಲೀವ್ ಆಗ್ತಾರಾ ಅಂಜನ್ ಕುಮಾರ್?
