SHIVAMOGGA LIVE NEWS | 25 SEPTEMBER 2023
SHIMOGA : ಮೆಗ್ಗಾನ್ ಆಸ್ಪತ್ರೆಯ ವೈದ್ಯರೊಬ್ಬರ ಬೈಕ್ ಕಳ್ಳತನವಾಗಿದೆ (Bike Theft). ಆಸ್ಪತ್ರೆಯ ಎಮರ್ಜನ್ಸಿ ವಾರ್ಡ್ ಮುಂಭಾಗ ಲಾಕ್ ಮಾಡಿ ನಿಲ್ಲಿಸಿದ ಬೈಕ್ ಕಳುವಾಗಿದೆ. ವೈದ್ಯ ರಾಕೇಶ್ ಕುಮಾರ್ ಅವರು ಸೆ.9ರಂದು ಬೆಳಗ್ಗೆ 8 ಗಂಟೆಗೆ ಮೆಗ್ಗಾನ್ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಬೈಕ್ ಅನ್ನು ಆಸ್ಪತ್ರೆ ಮುಂಭಾಗ ನಿಲ್ಲಿಸಿದ್ದರು. ಮಧ್ಯಾಹ್ನ 3.30ಕ್ಕೆ ಡ್ಯೂಟಿ ಮುಗಿಸಿ ಹೊರಗೆ ಬಂದಾಗ ಅವರ ಪ್ಯಾಷನ್ ಪ್ರೋ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಬಳಿಕ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ – ಬಸ್ ಹತ್ತಿ ಸೀಟ್ನಲ್ಲಿ ಕುಳಿತು ಬ್ಯಾಗ್ನತ್ತ ನೋಡಿದ ಮಹಿಳೆಗೆ ಕಾದಿತ್ತು ಆಘಾತ, ಠಾಣೆಗೆ ದೌಡು