ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021
ಹುಣಸೋಡಿನ ಕಲ್ಲು ಗಣಿಗಾರಿಕೆಯಲ್ಲಿ ಭಾರಿ ಪ್ರಮಾಣದ ಜಿಲೆಟಿಕ್ ಕಡ್ಡಿಗಳು ಬಂದಿವೆ. ಲಾರಿಯಲ್ಲಿ ಇಷ್ಟೊಂದು ಪ್ರಮಾಣದ ಜಿಲೆಟಿನ್ ಕಡ್ಡಿ ತರಿಸಿದ್ದು ಹೇಗೆ ಎಂಬದು ಆತಂಕಕ್ಕೆ ಕಾರಣವಾಗಿದೆ.
ಜನ ಏನೆಲ್ಲ ಹೇಳ್ತಿದ್ದಾರೆ?
ಭಾರಿ ಪ್ರಮಾಣದ ಜಿಲೆಟಿನ್ ಕಡ್ಡಿಗಳನ್ನು ನೆರೆಯ ತಮಿಳುನಾಡು ರಾಜ್ಯದಿಂದ ಲಾರಿಯಲ್ಲಿ ತರಿಸಲಾಗಿತ್ತು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿಂದ ಜಿಲೆಟಿನ್ ಕಡ್ಡಿಗಳನ್ನು ಅಲ್ಲಿಂದಲೆ ತಂದಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.
ಇಲ್ಲಿ ತಂದ ಜಿಲೆಟಿನ್ ಕಡ್ಡಿಗಳನ್ನು ಅಕ್ರಮವಾಗಿ ಬೇರೆ ಕ್ವಾರಿಗಳಿಗೆ ಸಾಗಾಣೆ ಮಾಡುತ್ತಿರುವ ಶಂಕೆ ಮೂಡಿದೆ.
ಹುಣಸೋಡು ಗ್ರಾಮದ ಈ ಗಣಿಯಲ್ಲಿ ಜಿಲೆಟಿನ್, ಬಂಡೆಗಳನ್ನು ಸ್ಪೋಟಿಸುವ ಸ್ಫೋಟಕಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದರಾ ಎಂಬ ಕುರಿತು ಅನುಮಾನಗಳು ಮೂಡಿದೆ.
ಅಕ್ರಮ ದಾಸ್ತಾನು ಮಾಡುವ ಸಲುವಾಗಿಯೆ ಇಷ್ಟೊಂದು ಪ್ರಮಾಣದ ಸ್ಫೋಟಕಗಳನ್ನು ತರಿಸಲಾಗಿತ್ತು ಎಂದು ಅನುಮಾನವಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]