ಶಿವಮೊಗ್ಗ ಲೈವ್.ಕಾಂ | SHIMOGA | 07 ಡಿಸೆಂಬರ್ 2019
ಶಿವಮೊಗ್ಗ ಮಹಾನಗರ ಪಾಲಿಕೆಯ ಹಿಂದಿನ ಕಮಿಷನರ್ ಚಾರುಲತಾ ಸೋಮಲ್ ಅವರು ಸೇವಾ ನ್ಯೂನ್ಯತೆ ಎಸಗಿದ್ದು, 50 ಸಾವಿರ ರೂ. ಪರಿಹಾರ ನೀಡಬೇಕು ಅಂತಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.
ಸೇವಾ ನ್ಯೂನತೆ ಏನು?
ಆಲ್ಕೊಳ ಗ್ರಾಮದ ಬಡಾವಣೆಯಲ್ಲಿರುವ ನಿವಾಸಿ ರಾಜು ಎಂಬುವವರಿಂದ ಕಸ ಸಂಗ್ರಹಕ್ಕಾಗಿ ಪಾಲಿಕೆ ವತಿಯಿಂದ ಹಣ ವಸೂಲಿ ಮಾಡಲಾಗಿದೆ. 2016, 2017ರಲ್ಲಿ ವಾರ್ಷಿಕ 600 ರೂ. ಮತ್ತು 2019ರ ಸಾಲಿಗೆ 1,200 ರೂ. ಹಣ ವಸೂಲಿ ಮಾಡಲಾಗಿದೆ. ಆದರೆ ಪಾಲಿಕೆ ವತಿಯಿಂದ ಕಸವನ್ನು ಮಾತ್ರ ತೆಗೆದುಕೊಂಡು ಹೋಗಿಲ್ಲ.
ಗಮನ ಸೆಳೆದರು ಕ್ರಮವಿಲ್ಲ
ಕಸ ಸಂಗ್ರಹಿಸದ ಕುರಿತು ರಾಜು ಅವರು 2019ರ ಏಪ್ರಿಲ್ 18 ಮತ್ತು ಆಗಸ್ಟ್ 27ರಂದು ಪಾಲಿಕೆ ಕಮಿಷನರ್ ಚಾರುಲತಾ ಸೋಮಲ್ ಅವರ ಗಮನಕ್ಕೆ ತಂದಿದ್ದರು. ಆದರೆ ಈ ಕುರಿತು ಕಮಿಷನರ್ ಅವರು ಯಾವುದೆ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ರಾಜು ಅವರು ದೂರು ನೀಡಿದ್ದರು.

ವಿಚಾರಣೆಯಲ್ಲಿ ಬೆಳಕಿಗೆ ಬಂತು ಸೇವಾ ನ್ಯೂನ್ಯತೆ
ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ, ಸೇವೆಯನ್ನು ನೀಡದೆ ಅನಧಿಕೃತವಾಗಿ ಸೇವಾಶುಲ್ಕ ವಸೂಲಿ ಮಾಡಿರುವುದು ಸೇವಾ ನ್ಯೂನ್ಯತೆಯಾಗಿದೆ. ಹಾಗಾಗೆ ಸೇವಾ ನ್ಯೂನ್ಯತೆ ಮತ್ತು ಮಾನಸಿಕ ಹಿಂಸೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಆರು ವಾರದೊಳಗೆ ಪರಿಹಾರದ ಹಣ ನೀಡದಿದ್ದರೆ ಶೇ.10ರಷ್ಟು ಬಡ್ಡಿಯೊಂದಿಗೆ ಹಣ ನೀಡಬೇಕಾಗುತ್ತದೆ ಎಂದು ಆದೇಶ ಹೊರಡಿಸಿದೆ.
ವೇದಿಕೆ ಅಧ್ಯಕ್ಷರಾದ ಸಿ.ಎಂ.ಚಂಚಲ ಮತ್ತು ಸದಸ್ಯೆ ಹೆಚ್.ಮಂಜುಳಾ ತೀರ್ಪು ನೀಡಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Alkola resident filed a case against Shimoga Mahanagara Palike Commissioner for not collecting waste from his house. Though Palike Collected amount for waste collection. Consumer court fined commissioner for negligence.