ಬಸ್ ನಿಲ್ದಾಣದಲ್ಲಿ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

SHIVAMOGGA-CITY-TALUK-NEWS-

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2021 ಬಸ್ ತಂಗುದಾಣದಲ್ಲಿ ಮಹಿಳೆಯೊಬ್ಬರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮೃತಳನ್ನು ಲತಾ ಎಂದು ಗುರುತಿಸಲಾಗಿದೆ. ನಿರ್ಗತಿಕಳಾಗಿದ್ದ ಈಕೆ ಎನ್‍.ಟಿ.ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿ ಬಳಿ ಬಸ್ ನಿಲ್ದಾಣದ ಬಳಿ ಇದ್ದರು. ಮಲಗಿದ್ದಾಗ ಲತಾಳ ತಲೆ ಮೇಲೆ ಸಿಮೆಂಟ್ ಸ್ಲಾಬ್ ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ … Read more

ಶಿವಮೊಗ್ಗ ವೆಂಕಟೇಶನಗರದ ಮನೆಯೊಂದರ ಬಾವಿಗೆ ಬಿದ್ದು ನಿವೃತ್ತ ಶಿಕ್ಷಕಿ ಸಾವು

020721 Retired Teacher Drowned in Well 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2021 ಮಹಿಳೆಯೊಬ್ಬರು ಶಿವಮೊಗ್ಗದ ವೆಂಕಟೇಶನಗರದಲ್ಲಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಮೋಟರ್‍ ಪರಿಶೀಲನೆ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಿವೃತ್ತ ಶಿಕ್ಷಕಿ ನೀಲಮ್ಮ (73) ಮೃತರು. ಮನೆಯ ಕಾಂಪೌಂಡ್‍ನಲ್ಲಿದ್ದ ಬಾವಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹೇಗಾಯ್ತು ಘಟನೆ? ಕಾರಣವೇನು? ನೀಲಮ್ಮ  ವೆಂಕಟೇಶನಗರದಲ್ಲಿರುವ ತಮ್ಮ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಮನೆಯ ಕಾಂಪೌಂಡ್‍ನೊಳಗಿದ್ದ ಬಾವಿಗೆ ಅಳವಡಿಸಿದ್ದ ಮೋಟರ್ ಕೆಟ್ಟು ಹೋಗಿತ್ತು. ನಿನ್ನೆ ಸಂಜೆ ಮೋಟರ್ … Read more

ಅಪ್ಪ, ಅಮ್ಮ, ಅಣ್ಣನ ಎದುರಲ್ಲೇ ನೀರಿನಲ್ಲಿ ಮುಳುಗಿ ಬಾಲಕ ಸಾವು

Drowned-Reference-Image-

ಶಿವಮೊಗ್ಗ ಲೈವ್.ಕಾಂ | RIPPONPETE NEWS | 2 ಜುಲೈ 2021 ಪೋಷಕರ ಎದುರಲ್ಲೆ ಮಗ ಹೊಳೆ ಪಾಲಾದ ಕರುಣಾಜನಕ ಘಟನೆ ರಿಪ್ಪನ್‍ಪೇಟೆ ಸಮೀಪ ವರದಿಯಾಗಿದೆ. ಹೊಸನಗರ ತಾಲೂಕು ಮುತ್ತಲ ಹೊಳೆಯಲ್ಲಿ ಘಟನೆ ಸಂಭವಿಸಿದೆ. ಸಿದ್ದೇಶ್ ಅಲಿಯಾಸ್ ಸಚಿನ್ (14) ನೀರಿನಲ್ಲಿ ಮುಳುಗಿದ ಬಾಲಕ. ತಂದೆ, ತಾಯಿ, ಸಹೋದರನ ಕಣ್ಣೆದುರಲ್ಲೇ ಈತ ನೀರಿನಲ್ಲಿ ಮುಳುಗಿದ್ದಾನೆ. ಬಟ್ಟೆ ಒಗೆಯಲು ಹೋಗಿದ್ದರು ಜಾಗದ್ದೆಯ ಶೇಷಗಿರಿ, ಮಧುಮತಿ ಅವರು ಇಬ್ಬರು ಮಕ್ಕಳನ್ನು ಕರೆದುಕೊಂಡು ಮುತ್ತಲ ಹೊಳೆಯಲ್ಲಿ ಬಟ್ಟೆ ಒಗೆಯಲು ತೆರಳಿದ್ದರು. ಈ … Read more

ಎರಡು ಪ್ರತ್ಯೇಕ ಅಪಘಾತ, ಶಿವಮೊಗ್ಗ ತಾಲೂಕಿನಲ್ಲಿ ಇಬ್ಬರು ಸಾವು, ಹೇಗಾಯ್ತು ಘಟನೆಗಳು?

HIVAMOGGA-NEWS- map

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2021 ಪ್ರತ್ಯೇಕ ಎರಡು ಘಟನೆಗಳಲ್ಲಿ ಟ್ರಾಕ್ಟರ್ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಎರಡು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಘಟನೆ 1 : ಟ್ರಾಕ್ಟರ್ ಪಲ್ಟಿಯಾಗಿ ಸಾವು ಜಮೀನು ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿಯಾಗಿದೆ. ಚಾಲಕ ಕೆಂಚಪ್ಪ (48) ಮೈ,ಕೈಗೆ ಗಂಭೀರ ಗಾಯವಾಗಿದ್ದು, ಮೃತಪಟ್ಟಿದ್ದಾರೆ. ಸಿದ್ಲಿಪುರದ ಕೆಂಚಪ್ಪ ಅವರು ಇಲ್ಲಿನ ಮಂಜಪ್ಪ ಎಂಬುವವರ ಜಮೀನಿನಲ್ಲಿ ಉಳುಮೆ ಮಾಡುವಾಗ ಘಟನೆ ಸಂಭವಿಸಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ … Read more

ಖಾಲಿ ಕಾರಲ್ಲಿ ಕೈ ಹಾಕಿದಲೆಲ್ಲ ಸಿಕ್ತು ಗಾಂಜಾ, ಭದ್ರಾವತಿ ಗಡಿಯಲ್ಲಿ ಲಾಕ್ ಆದ ಖತರ್ನಾಕ್ ದಂಧೆಕೋರ

290621 Ganja in Omni Car near Bhadravathi 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 JUNE 2021 ಶಿವಮೊಗ್ಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಗಾಂಜಾ ಸಾಗಣೆ ಮಾಡತ್ತಿದ್ದವನನ್ನು ಬಂಧಿಸಿದ್ದಾರೆ. ಆತನ ಕಾರಿನ ಮೂಲೆ ಮೂಲೆಯಲ್ಲೂ ಗಾಂಜಾ ಅಡಗಿಸಿಟ್ಟಿರುವುದು ಬಯಲಿಗೆ ಬಂದಿದೆ. ತರೀಕೆರೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಕಾರನ್ನು ಕಾರೇಹಳ್ಳಿ ಚೆಕ್‍ ಪೋಸ್ಟ್‍ನಲ್ಲಿ ತಡೆದು ತಪಾಸಣೆ ನಡೆಸಿದಾಗ ಗಾಂಜಾ ಇರುವುದು ಬೆಳೆಕಿಗೆ ಬಂದಿದೆ. ಕಾರು ಚಾಲಕ ಮುರುಗ (32) ಎಂಬಾತನನ್ನು ಬಂಧಿಸಲಾಗಿದೆ. ಈತ ಭದ್ರಾವತಿಯ ಸಂಕ್ಲಿಪುರದವನು ಎಂದು ಪೊಲೀಸರು ಪ್ರಕಟಣೆಯಲ್ಲಿ … Read more

ವೀಕೆಂಡ್ ಕರ್ಫ್ಯೂ ಉಲ್ಲಂಘನೆ, ಪೊಲೀಸರಿಂದ ನಡುರಾತ್ರಿ ಕ್ಲಾಸ್, ಸ್ಟೇಷನ್ ಮುಂದೆ ಯುವಕರಿಗೆ ಡ್ರಿಲ್

270621 Mid Night Drill at Kote Station 1

ಶಿವಮೊಗ್ಗ ಲೈವ್‌.ಕಾಂ | SHIMOGA NEWS | 27 JUNE 2021 ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ ಓಡಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪೊಲೀಸ್ ಠಾಣೆ ಆವರಣದಲ್ಲೆ ಮಿಡ್‌ನೈಟ್ ಡ್ರಿಲ್ ಮಾಡಿ, ಕರ್ಫ್ಯೂ ನಿಯಮದ ಪಾಠ ಮಾಡಿದ್ದಾರೆ. ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡರು. ಅನಾಗತ್ಯ ಓಡಾಡುತ್ತಿದ್ದವರು ವಶಕ್ಕೆ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಬಿ.ಹೆಚ್‌.ರಸ್ತೆ, ಸಹ್ಯಾದ್ರಿ ಕಾಲೇಜು ಬಳಿ, ಎಂಆರ್‌ಎಸ್ ಸರ್ಕಲ್ ಸೇರಿದಂತೆ … Read more

ಮದುವೆಯಾಗಿ ಏಳು ತಿಂಗಳಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಮೃತದೇಹ ಪತ್ತೆ

HOSANAGARA-TALUK-NEWS-1.jpg

ಶಿವಮೊಗ್ಗ ಲೈವ್.ಕಾಂ | HOSANAGARA NEWS | 26 JUNE 2021 ಫೇಸ್‍ಬುಕ್‍ನಲ್ಲಿ ಪರಿಚಯವಾದ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು ಏಳು ತಿಂಗಳಲ್ಲೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಹೊಸನಗರ ತಾಲೂಕು ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಿಗ್ಗೇರಿ ಉಮೇಶ್ ಪತ್ನಿ ಸೌಂದರ್ಯ (21) ಮೃತಳು. ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೌಂದರ್ಯಾಳ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಫೇಸ್‍ಬುಕ್‍ನಿಂದ ಪರಿಚಯ, ಪ್ರೇಮ, ಮದುವೆ … Read more

ಎತ್ತುಗಳಿಗೆ ನೀರು ಕುಡಿಸಲು ಹೋದ ಯುವಕ ನೀರು ಪಾಲು

250621 soraba youth drowned in varada river 1

ಶಿವಮೊಗ್ಗ ಲೈವ್.ಕಾಂ | SORABA NEWS | 25 JUNE 2021 ಎತ್ತುಗಳಿಗೆ ನೀರು ಕುಡಿಸಲು ಹೋದ ಯುವಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಾಲ್ಲೂಕಿನ ಭದ್ರಾಪುರ ಸಮೀಪದ ವರದಾ ನದಿಯಲ್ಲಿ ನಡೆದಿದೆ. ಭದ್ರಾಪುರ ಗ್ರಾಮದ ನಿವಾಸಿ ಮಹೇಶ ಈರಪ್ಪ ದೊಡ್ಡ ಕುಂಬಾರ ಮನೆ ( 24) ಮೃತ ದುರ್ದೈವಿ. ಈತ ವರದಾ ನದಿಗೆ ಎತ್ತುಗಳಿಗೆ ನೀರು ಕುಡಿಸಲು ಹೋದಾಗ ಆಕಸ್ಮಿಕವಾಗಿ ಜಾರಿ ನದಿಗೆ ಬಿದ್ದಿದ್ದಾನೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸತತ‌ ಪ್ರಯತ್ನದಿಂದ ಇವತ್ತು … Read more

ರಾಗಿಗುಡ್ಡದಲ್ಲಿ ನಡುರಾತ್ರಿ ಕಬ್ಬಿಣದ ರಾಡ್ ಹಿಡಿದು ಓಡಾಡುತ್ತಿದ್ದ ಇಬ್ಬರ ವಿರುದ್ಧ ಕೇಸ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JUNE 2021 ನಡುರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರ ವಿಚಾರಣೆ ನಡೆಸಿದ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಯುವಕನೊಬ್ಬನ ಕೈಯಲ್ಲಿ ಕಬ್ಬಿಣದ ರಾಡ್ ಇರುವುದು ಅನುಮಾನಕ್ಕೆ ಕಾರಣವಾಗಿತ್ತು. ಶಿವಮೊಗ್ಗದ ರಾಗಿಗುಡ್ಡದ ಚರ್ಚ್ ಬಳಿ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ಯುವಕರು ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಒಬ್ಬ ಯುವಕನ ಕೈಯಲ್ಲಿ ಕಬ್ಬಿಣದ ರಾಡ್ ಇತ್ತು. ಅಲ್ಲದೆ … Read more

ಕರೋನ ಸೋಂಕಿತನ ಮನೆಯಲ್ಲಿ ಮದ್ಯದ ಪಾರ್ಟಿ, ಟಾಸ್ಕ್ ಫೋರ್ಸ್ ಸದಸ್ಯನಿಗೆ ಆವಾಜ್

Thirthahalli Name Graphics

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 22 JUNE 2021 ಕರೋನ ಸೋಂಕಿತನ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಿದ್ದಲ್ಲದೆ, ಟಾಸ್ಕ್ ಫೋರ್ಸ್‍ ಸದಸ್ಯನಿಗೆ ನಿಂದಿಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಬಸವಾಪುರ ಗ್ರಾಮದ ಯುವಕ ಮತ್ತು ಆತನ ಕುಟುಂಬದವರಿಗೆ ಕರೋನ ಪಾಸಿಟಿವ್ ಬಂದಿತ್ತು. ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ನಿಯಮ ಉಲ್ಲಂಘಿಸಿದ ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ತನ್ನ ಮನೆಯಲ್ಲಿ ಪಾರ್ಟಿ ಮಾಡಿದ್ದಾನೆ. ಕುಕ್ಕೆ ಬಾಂಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮತ್ತು … Read more