ಕಾರು ತಡೆದು 15 ಲಕ್ಷ ಹಣ ದರೋಡೆ ಕೇಸ್‌ಗೆ ಬಿಗ್ ಟ್ವಿಸ್ಟ್, ದೂರು ಕೊಟ್ಟವನೆ ಈಗ ಅರೆಸ್ಟ್, ಯಾಕೆ?

291120 Anavatti robbery Case three arrest 1

ಶಿವಮೊಗ್ಗ ಲೈವ್.ಕಾಂ |SORABA NEWS | 29 NOVEMBER 2020 ಸೊರಬ ತಾಲೂಕಿನ ತವನಂದಿ – ಕೊರಕೋಡು ಗ್ರಾಮದ ಬಳಿ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‍ ಸಿಕ್ಕಿದೆ. ದೂರು ನೀಡಿದವನೆ ಈಗ ಅರೆಸ್ಟ್ ಆಗಿದ್ದಾನೆ. ದೂರು ಕೊಟ್ಟವನ ಬಂಧನವೇಕೆ? ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ಹಣ ದರೋಡೆ ಪ್ರಕರಣ ಸಂಬಂಧ ಕಾರು ಚಾಲಕ ನಫೀಸ್ ಆಲಂ, ಕನ್ನಪ್ಪ ಮತ್ತು  ವಿಶ್ವನಾಥ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಕಾರು ಚಾಲಕ ನಫೀಸ್ ಆಲಂ … Read more

ನಕಲಿ ದಾಖಲೆ ಕೊಟ್ಟು ನಾಲ್ಕು ಲಕ್ಷದ ಜೆರಾಕ್ಸ್ ಮಿಷಿನ್, ಪ್ರಿಂಟರ್, ಯುಪಿಎಸ್ ಕೊಂಡೊಯ್ದಿದ್ದ ವಂಚಕ ಅರೆಸ್ಟ್

261120 Jayanagara Police arrest at scammer 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 26 NOVEMBER 2020 ನಕಲಿ ದಾಖಲೆಗಳನ್ನು ನೀಡಿ, ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಿಂದ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿ ವಂಚಿಸಿದ್ದ ಆರೋಪಿಯನ್ನು ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚನೆ ಆಗಿದ್ದು ಹೇಗೆ? ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಕಚೇರಿಯ ಸಿಬ್ಬಂದಿ ಎಂದು ಹೇಳಿಕೊಂಡು, ನಕಲಿ ದಾಖಲೆಗಳನ್ನು ಒದಗಿಸಿ ದುರ್ಗಿಗುಡಿಯ ಇಮ್ಯಾಜಿನ್ ಟೆಕ್ನಾಲಜಿಸ್ ಮತ್ತು ವೆಂಕಟೇಶನಗರದ ಹೈಟೆಕ್ ಸಲ್ಯೂಷನ್‍ ಅಂಗಡಿಗಳಿಂದ ವ್ಯಕ್ತಿಯೊಬ್ಬ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಕೊಂಡೊಯ್ದಿದ್ದ. ಆ ಬಳಿಕ ಅತನ ವಂಚನೆ ಪ್ರಕರಣ … Read more

ಭದ್ರಾವತಿ ಜನ್ನಾಪುರದಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣ, ಹಣ ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ |BHADRAVATHI NEWS | 26 NOVEMBER 2020 ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. 1.10 ಲಕ್ಷ ಮೌಲ್ಯದ ಚಿನ್ನಾಭರಣ, 20 ಸಾವಿರ ನಗದು ದೋಚಲಾಗಿದೆ. ಭದ್ರಾವತಿಯ ಜನ್ನಾಪುರದ ಕುರುಬರ ಬೀದಿಯ ಕೆ.ಸಿ.ರಾಮಚಂದ್ರ ಅವರ ಮನೆಯಲ್ಲಿ ಕಳ್ಳತನವಾಗಿದೆ. ಪತ್ನಿಯ ಚಿಕಿತ್ಸೆಗಾಗಿ ರಾಮಚಂದ್ರ ಅವರು ಬೆಂಗಳೂರಿಗೆ ತೆರಳಿದ್ದರು. ಹಿಂತಿರುಗಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇಂಟರ್‍ಲಾಕ್‍ ಮುರಿದ ಕಳ್ಳರು ಮನೆಯ ಕೊಠಡಿಯಲ್ಲಿದ್ದ ಬೀರುವಿನ ಇಂಟರ್‍ಲಾಕ್‍ ಮುರಿದಿರುವ ಕಳ್ಳರು 20 ಸಾವಿರ ರೂ. … Read more

ಅರಹತೊಳಲು ಗ್ರಾದಮಲ್ಲಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಸವಾರ ಸಾವು

ಶಿವಮೊಗ್ಗ ಲೈವ್.ಕಾಂ |HOLEHONNURU NEWS | 26 NOVEMBER 2020 ವಿದ್ಯುತ್ ಕಂಬಕ್ಕೆ ಬೈಕ್ ಗುದ್ದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅರಹತೊಳಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಉಮೇಶ್ (28) ಮೃತ ದುರ್ದೈವಿ. ಈತ ಚನ್ನಗಿರಿ ತಾಲೂಕು ಹೊದಿಗೆರೆ ಗ್ರಾಮದವರು. ಪತ್ನಿ ಮತ್ತು ಮಕ್ಕಳನ್ನು ಭದ್ರಾವತಿ ತಾಲೂಕು ತಟ್ಟೆಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮವೊಂದಕ್ಕೆ ಬಿಟ್ಟು ಹಿಂತಿರುಗುತ್ತಿದ್ದರು. ಆಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200 ಶಿವಮೊಗ್ಗ ಲೈವ್ ಈ … Read more

ಸಾಗರಕ್ಕೆ ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ದರೋಡೆ

ಶಿವಮೊಗ್ಗ ಲೈವ್.ಕಾಂ |SORABA NEWS | 26 NOVEMBER 2020 ಮುಂಬೈನಿಂದ ಸಾಗರಕ್ಕೆ ಬರುತ್ತಿದ್ದ ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ಹಣ ದೋಚಲಾಗಿದೆ. ಸಾಗರದ ಉದ್ಯಮಿಯೊಬ್ಬರಿಗೆ ಈ ಹಣ ಸೇರಿತ್ತು ಎಂದು ಹೇಳಲಾಗುತ್ತಿದೆ. ಹೇಗಾಯ್ತು ಘಟನೆ? ಮುಂಬೈನಿಂದ ಹಣ ತೆಗೆದುಕೊಂಡು ಸ್ವಿಫ್ಟ್ ಕಾರಿನಲ್ಲಿ ಬರಲಾಗುತ್ತಿತ್ತು. ಸೊರಬ ತಾಲೂಕು ತವನಂದಿ ಗ್ರಾಮದ ಬಳಿ ಗುಂಪೊಂದು ಕಾರನ್ನು ಅಡ್ಡಗಟ್ಟಿದೆ. ಕಾರಿನ ಚಾಲಕ ಮತ್ತು ಆತನ ಜೊತೆಗಿದ್ದ ಮತ್ತೊಬ್ಬನಿಗೆ ಥಳಿಸಲಾಗಿದೆ. ಕಾರಿನಲ್ಲಿದ್ದ ಲಕ್ಷಾಂತರ ರುಪಾಯಿ ಹಣವನ್ನು ದೋಚಲಾಗಿದೆ. ಸಾಗರಕ್ಕೆ ಬರುತ್ತಿತ್ತು ಕಾರು … Read more

ತೀರ್ಥಹಳ್ಳಿಯಲ್ಲಿ ಮಹಿಳೆಗೆ ಗುದ್ದಿ ಪರಾರಿಯಾದ ಓಮಿನಿ ಕಾರು, ಮಹಿಳೆ ಸಾವು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ |THIRTHAHALLI NEWS | 25 NOVEMBER 2020 ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಿದೆ. ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಗಂಟೆಹಕ್ಕಲು ಗ್ರಾಮದ ನಿವಾಸಿ ಶಾರದಾ ರಮೇಶ್, ಮೃತ ದುರ್ದೈವಿ. ಹಾಲು ಕೊಡಲು ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಕಡೆಯಿಂದ ಆಗುಂಬೆ ಕಡೆಗೆ ತೆರಳುತ್ತಿದ್ದ ಓಮಿನಿ ಕಾರೊಂದು ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಗಂಟೆಹಕ್ಕಲು ಸಮೀಪ ರಾಷ್ಟ್ರೀಯ ಹೆದ್ದಾರಿ 169ಎರಲ್ಲಿ ಘಟನೆ ಸಂಭವಿಸಿದೆ. ಅಪಘಾತ ಆಗುತ್ತಿದ್ದಂತೆ … Read more

ಕಾರು, ಬೈಕ್ ಡಿಕ್ಕಿ, ನಿವೃತ್ತ ಪ್ರಾಂಶುಪಾಲರೊಬ್ಬರಿಗೆ ಗಂಭೀರ ಗಾಯ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ |SAGARA NEWS | 23 NOVEMBER 2020 ಸಾಗರದ ಜೋಗ ರಸ್ತೆಯಲ್ಲಿ ಕಾರು ಮತ್ತು ಮೊಪೆಡ್ ಬೈಕ್‍ ನಡುವೆ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರನ ತಲೆಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಿವೃತ್ತ ಪ್ರಾಂಶುಪಾಲ ನೀರ್ ಕೊಡು ಬಡಾವಣೆಯ ಹನುಮಂತಪ್ಪ ಅವರ ತಲೆಗೆ ಗಂಭೀರ ಹೊಡೆತ ಬಿದ್ದಿದೆ. ತೀವ್ರ ರಕ್ತಸ್ರಾವವಾಗುತ್ತಿತ್ತು. ಕೂಡಲೆ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹನುಮಂತಪ್ಪ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯಲ್ಲಿ … Read more

ಶಿವಮೊಗ್ಗದ ಎಂಆರ್‌ಎಸ್‌ ಸರ್ಕಲ್‌ನಲ್ಲಿ ಆಟೋ ಚಾಲಕನ ಮೃತದೇಹ ಪತ್ತೆ

police jeep

ಶಿವಮೊಗ್ಗ ಲೈವ್.ಕಾಂ |SHIMOGA NEWS | 23 NOVEMBER 2020 ಶಿವಮೊಗ್ಗದ ಎಂಆರ್‌ಎಸ್ ಸರ್ಕಲ್‍ನಲ್ಲಿ ಆಟೋ ಚಾಲಕನೊಬ್ಬನ ಮೃತದೇಹ ಪತ್ತೆಯಾಗಿದೆ. ಆತನನ್ನು ಕ್ಲಾರ್ಕ್‍ ಪೇಟೆಯ ಇಜಾಜ್‍ ಎಂದು ಗುರುತಿಸಲಾಗಿದೆ. ಬೆಳಗಿನ ಜಾವ ಇಜಾಜ್ ಮೃತದೇಹ ಪತ್ತೆಯಾಗಿದೆ. ಪಕ್ಕದಲ್ಲಿಯೇ ಆತ ಚಲಾಯಸುತ್ತಿದ್ದ ಅಟೋ ನಿಂತಿದೆ. ಇಜಾಜ್ ಮುಖದ ಮೇಲೆ ಸಣ್ಣಪುಟ್ಟ ಗಾಯದು ಗುರುತುಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಕೋಟೆ ಠಾಣೆ ಪೊಲೀಸರು ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ. ದಿನಕ್ಕೊಂದು ಸಾಮಾನ್ಯ ಜ್ಞಾನದ ವಿಡಿಯೋ ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200 … Read more

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಕೋವಿಡ್ ವಾರ್ಡ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್

221120 Fire At Covid Ward in Mc Gann 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 22 NOVEMBER 2020 ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕರೋನ ವಾರ್ಡ್‍ನಲ್ಲಿ ಶಾರ್ಟ್‍ ಸರ್ಕಿಟ್‍ ಸಂಭವಿಸಿದೆ. ಯಂತ್ರವೊಂದರಲ್ಲಿ ಹೊಗೆ ಕಾಣಿಸಿಕೊಂಡು, ಆತಂಕ ಮೂಡಿಸಿತ್ತು. ಎರಡು ಬಾರಿ ಶಾರ್ಟ್ ಸರ್ಕಿಟ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಯಂತ್ರಕ್ಕೆ ಪ್ರತ್ಯೇಕ ವಿದ್ಯುತ್ ಬೋರ್ಡ್ ಅಳವಡಿಸಲಾಗಿದೆ. ಇದರಲ್ಲಿ ಶಾರ್ಟ್ ಸರ್ಕಿಟ್ ಸಂಭವಿಸಿದೆ. ಮಧ್ಯಾಹ್ನ 1.30ರ ಹೊತ್ತಿಗೆ ಮೊದಲು ಹೊಗೆ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿ, ಆತಂಕ ದೂರಗೊಳಿಸಿದ್ದರು. ಸಂಜೆ ವೇಳೆಗೆ ಅದೆ ಬೋರ್ಡ್‍ನಲ್ಲಿ ಪುನಃ ಹೊಗೆ … Read more

ಮುಡುಬ ಸೇತುವೆ ಬಳಿ ಅಪಘಾತ, ಒಬ್ಬ ಸಾವು, ಮತ್ತೊಬ್ಬನಿಗೆ ಗಾಯ, ಜನರ ಆಕ್ರೋಶ

211120 Bike Accident Near Battemallappa Hosanagara 1

ಶಿವಮೊಗ್ಗ ಲೈವ್.ಕಾಂ |HOSANAGARA NEWS | 21 NOVEMBER 2020 ಹೊಸನಗರ – ಬಟ್ಟೆಮಲ್ಲಪ್ಪ ಮಾರ್ಗದ ಮುಡುಬ ಸೇತುವೆ ಬಳಿ ಅಪಘಾತ ಸಂಭವಿಸಿದ್ದು, ಓರ್ವ ಸವಾರ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೇಗಾಯ್ತು ಘಟನೆ? ಬೈಕ್ ಸವಾರರು ಹಾವೇರಿಯಿಂದ ಹೆಬ್ರಿಗೆ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ. ಮುಡುಬ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗುಂಡಿಗೆ ಬಿದ್ದಿದೆ. ಘಟನೆಯಲ್ಲಿ ಹಾವೇರಿಯ ರೆಹಮಾನ್ ಸಾಬ್ (22) ಮೃತಪಟ್ಟಿದ್ದಾರೆ. ಅನ್ವರ್ ಬಾಷಾ … Read more