GOOD NEWS | ಶಿವಮೊಗ್ಗದ ಮಹಿಳೆಯರಿಗೆ ಗುಡ್ ನ್ಯೂಸ್, ನಡು ರಾತ್ರಿಯಲ್ಲೂ ಸೇಫಾಗಿ ಮನೆ ತಲುಪಿಸಲು ಪೊಲೀಸರ ಸ್ಪೆಷಲ್ ಪ್ಲಾನ್

police jeep

ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019 ತೆಲಂಗಾಣದಲ್ಲಿ ಪಶು ವೈದ್ಯೆ ಅತ್ಯಾಚಾರ, ಬರ್ಬರ ಹತ್ಯೆ ಪ್ರಕರಣದ ಬಳಿಕ ಮಹಿಳಾ ಸುರಕ್ಷೆ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಮಧ್ಯೆ ರಾತ್ರಿ ವೇಳೆ ಮಹಿಳೆಯರು ಸುರಕ್ಷತೆಯಿಂದ ಸಂಚರಿಸಲು ಅನುವು ಮಾಡಿಕೊಡಲು ಶಿವಮೊಗ್ಗ ಪೊಲೀಸರು ವಿಭಿನ್ನ ಹೆಜ್ಜೆ ಇರಿಸಿದ್ದಾರೆ. ಮಹಿಳೆಯರು ಸುರಕ್ಷಿತೆಯಿಂದ ನಿಗದಿತ ಸ್ಥಳ ತಲುಪಲು ಇನ್ಮುಂದೆ ಪೊಲೀಸರು ನೆರವು ನೀಡಲಿದ್ದಾರೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಪ್ರಕಟಣೆ ಹೊರಡಿಸಿದ್ದು, ತುರ್ತು ಸಂದರ್ಭದಲ್ಲಿ ಮಹಿಳೆಯರು ಕರೆ ಮಾಡಬಹುದು … Read more

VINOBANAGARA | ವಾಹನ ತಪಾಸಣೆ ವೇಳೆ ಅನುಮಾನದ ವರ್ತನೆ, ವಿಚಾರಣೆ ನಡೆಸಿದಾಗ ಹೊರಬಿತ್ತು ವರ್ಷದ ಹಿಂದಿನ ಖತರ್ನಾಕ್ ಕಳ್ಳತನ ಕೇಸ್

ಶಿವಮೊಗ್ಗ ಲೈವ್.ಕಾಂ | SHIMOGA | 09 ಡಿಸೆಂಬರ್ 2019 ನಿಲ್ಲಿಸಿದ್ದ ಕಾರಿನ ಮ್ಯಾಗ್ ವೀಲ್’ಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಒಂದು ವರ್ಷದ ಬಳಿಕ ಅರೆಸ್ಟ್ ಆಗಿದ್ದಾರೆ. ವಿನೋಬಗರ ಪೊಲೀಸರು ಇವರನ್ನು ಬಂಧಿಸಿದ್ದಾರೆ. 2018ರ ಡಿಸೆಂಬರ್’ನಲ್ಲಿ, ವಿನೋಬನಗರ ಪೊಲೀಸ್ ಚೌಕಿ ಬಳಿಕ ಮ್ಯಾಗ್ ವೀಲ್’ಗಳನ್ನು ಕಳ್ಳತನ ಮಾಡಲಾಗಿತ್ತು. ಆದರೆ ಕಳ್ಳರು ಪತ್ತೆಯಾಗಿರಲಿಲ್ಲ. ಇತ್ತೀಚೆಗೆ ಇದೇ ಕಳ್ಳರು ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. … Read more

SHIMOGA | ಉಷಾ ನರ್ಸಿಂಗ್ ಹೊಂ ಸರ್ಕಲ್’ನಲ್ಲಿ ಆಂಬುಲೆನ್ಸ್’ಗೆ ಟ್ರಾಕ್ಟರ್ ಡಿಕ್ಕಿ, ತಪ್ಪಿತು ದೊಡ್ಡ ಅನಾಹುತ

ಶಿವಮೊಗ್ಗ ಲೈವ್.ಕಾಂ | SHIMOGA | 08 ಡಿಸೆಂಬರ್ 2019 ಟ್ರಾಕ್ಟರ್ ಮತ್ತು ಆಂಬುಲೆನ್ಸ್ ನಡುವೆ ಡಿಕ್ಕಿ ಸಂಭವಿಸಿದೆ. ಇದರಿಂದ ಆಂಬುಲೆನ್ಸ್’ನ ಒಂದು ಭಾಗ ನುಜ್ಜುಗುಜ್ಜಾಗಿದ್ದು, ಘಟನೆಯಲ್ಲಿ 15 ದಿನದ ಹಸುಳೆ ಅದೃಷ್ಟವಶಾತ್ ಪಾರಾಗಿದೆ. ಉಷಾ ನರ್ಸಿಂಗ್ ಹೋಂನ ಬಳಿ ರಾತ್ರಿ ಘಟನೆ ನಡೆದಿದೆ. ಆಂಬುಲೆನ್ಸ್ ಶಿಕಾರಿಪುರದಿಂದ ಶಿವಮೊಗ್ಗದ ಕಡೆಗೆ ಬರುತ್ತಿತ್ತು. ಈ ವೇಳೆ ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿ ಟ್ರಾಕ್ಟರ್ ಡಿಕ್ಕಿಯಾಗಿದೆ. ಶಿಕಾರಿಪುರ ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ಮಗುವಿಗೆ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಮಗುವಿನ … Read more

SHIMOGA | ಶಿವಮೊಗ್ಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿಗೆ ಅಪಘಾತ, ಸಾವಿನ ಕುರಿತು ಪೋಷಕರಿಗೆ ಅನುಮಾನ, ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 07 ಡಿಸೆಂಬರ್ 2019 ಕಾಲೇಜಿನಿಂದ ಸರ್ವೇ ಕ್ಯಾಂಪ್’ಗೆ ತೆರಳಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಆದರೆ ಕಾಲೇಜು ಆಡಳಿತ ಮಂಡಳಿಯ ಭಿನ್ನ ಹೇಳಿಕೆ, ವಿದ್ಯಾರ್ಥಿನಿಯ ಪೋಷಕರು ಮತ್ತು ಸಂಬಂಧಿಗಳಲ್ಲಿ ಗೊಂದಲ ಸೃಷ್ಟಿಸಿತು. ಇದರಿಂದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶವಾಗಾರದ ಬಳಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಣಿತಾ (20) ಮೃತ ವಿದ್ಯಾರ್ಥಿನಿ. ಶಿವಮೊಗ್ಗದ ಪಿಇಎಸ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿದ್ದ ಪರಿಣಿತಾ ಸರ್ವೇ ಕ್ಯಾಂಪ್’ಗೆ ತೆರಳಿದ್ದಳು. ಈ ವೇಳೆ … Read more

SHIMOGA | ದೇವಸ್ಥಾನದ ಹುಂಡಿ ಒಡೆದ ನಾಲ್ಕು ಕಳ್ಳರ ಬಳಿ ಸಿಕ್ತು ಪಿಸ್ತೂಲು, ಒಂಭತ್ತು ಜೀವಂತ ಗುಂಡು

ಶಿವಮೊಗ್ಗ ಲೈವ್.ಕಾಂ | SHIMOGA | 06 ಡಿಸೆಂಬರ್ 2019 ಬಿದರೆಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಹುಂಡಿಗಳನ್ನು ಒಡೆದು ಕಾಣಿಕೆ ಹಣ ಕಳ್ಳತನ ಮಾಡಿದ್ದ ತಂಡವನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರದಿಂದ ಪಿಸ್ತೂಲ್, ಒಂಭತ್ತು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ನವೆಂಬರ್ 25ರಂದು ಸೆಕ್ಯೂರಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಬಾಗಿಲು ಒಡೆದು ಕಳ್ಳತನ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು, ನಾಲ್ಕು … Read more

SHIMOGA | ಮಹಿಳೆ ಹೆಸರಿನಲ್ಲಿ ನಕಲಿ ಫೇಸ್’ಬುಕ್ ತೆರೆದು, ಅಶ್ಲೀಲ ಫೋಟೊ ಅಪ್’ಲೋಡ್ ಮಾಡಿದವನು ಅರೆಸ್ಟ್

facebook logo

ಶಿವಮೊಗ್ಗ ಲೈವ್.ಕಾಂ | SHIMOGA | 05 ಡಿಸೆಂಬರ್ 2019 ಮಹಿಳೆಯೊಬ್ಬರ ಹೆಸರಿನಲ್ಲಿ ನಕಲಿ ಫೇಸ್’ಬುಕ್ ಅಕೌಂಟ್ ತೆರೆದು, ಅವರ ಫೋಟೊಗಳನ್ನು ಎಡಿಟ್ ಮಾಡಿ ಅಶ್ಲೀಲ ಫೋಟೊಗಳನ್ನು ಅಪ್’ಲೋಡ್ ಮಾಡುತ್ತಿದ್ದ ಯುವಕನೊಬ್ಬನನ್ನು ಶಿವಮೊಗ್ಗದ ಸಿ.ಇ.ಎನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹರಮಘಟ್ಟ ಗ್ರಾಮದ ಉಮೇಶ್ (19) ಬಂಧಿತ ಯುವಕ. ಈತ ಮಹಿಳೆಯೊಬ್ಬರ ಹೆಸರಿನಲ್ಲಿ ನಕಲಿ ಫೇಸ್’ಬುಕ್ ಅಕೌಂಟ್ ತೆರೆದಿದ್ದ. ಅಲ್ಲದೆ ಅವರ ಫೋಟೊಗಳನ್ನು ಎಡಿಟ್ ಮಾಡಿ, ಅಶ್ಲೀಲವಾಗಿ ಅಪ್’ಲೋಡ್ ಮಾಡುತ್ತಿದ್ದ. ಈ ಕುರಿತು ಮಹಿಳೆ ಸಿ.ಇ.ಎನ್ ಠಾಣೆಗೆ ದೂರು … Read more

SHIMOGA NEWS | ವಿಚಾರಣೆಗೆ ಕರೆಸಿಕೊಂಡರು, ಹಿಗ್ಗಾಮುಗ್ಗಾ ಥಳಿಸಿದರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಫಾರೆಸ್ಟ್ ಗಾರ್ಡ್ ಅಡ್ಮಿಟ್

ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019 ಪ್ರಕರಣವೊಂದರ ವಿಚಾರಣೆಗಾಗಿ ಕರೆದು ಅರಣ್ಯ ವೀಕ್ಷಕನೊಬ್ಬನ ಮೇಲೆ ಅರಣ್ಯ ಸಂಚಾರಿ ದಳದ ಗಾರ್ಡ್ ಒಬ್ಬರು ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಳೆದ ಐದು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಫಾರೆಸ್ಟ್ ವಾಚರ್ ಆಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್ ಎಂಬಾತನೇ ಹಲ್ಲೆಗೀಡಾದ ವ್ಯಕ್ತಿ. ನಾಲ್ಕು ದಿನಗಳ ಹಿಂದೆ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಮರಕಡಿತಲೆ ಸಂಬಂಧ ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಯಲ್ಲಿನ ಗಾಜನೂರು ಬಳಿಯ ಚೆಕ್ ಪೋಸ್ಟ್ ವಾಚರ್‌’ನನ್ನು … Read more

SHIMOGA CRIME | ಏಳು ವರ್ಷ ಕೋರ್ಟ್’ಗೆ ಬಾರದ ಸರಗಳ್ಳನ್ನು ಹಿಡಿದ ವಿನೋಬನಗರ ಪೊಲೀಸ್, ಈತ ಸಿಕ್ಕಿದ್ದು ಹೇಗೆ ಗೊತ್ತಾ?

vinobanagara polic station and police jeep

ಶಿವಮೊಗ್ಗ ಲೈವ್.ಕಾಂ | SHIMOGA | 25 ನವೆಂಬರ್ 2019 ಏಳು ವರ್ಷದಿಂದ ಪ್ರಕರಣದ ವಿಚಾರಣೆಗೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಸರಗಳ್ಳನನ್ನು ವಿನೋಬನಗರ ಠಾಣೆ ಪೊಲೀಸರು ಹಿಡಿದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ. ಏನಿದು ಪ್ರಕರಣ? 2012ರಲ್ಲಿ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಮಾಲತೇಶ ನಾಯ್ಕ (37) ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ವಿನೋಬನಗರ ಠಾಣೆ ಪೊಲೀಸರು ಟೀಂ ರಚನೆ ಮಾಡಿದ್ದರು. ಸರಗಳ್ಳ … Read more

SHIMOGA CRIME | ಸೆಕ್ಯೂರಿಟಿ ಗಾರ್ಡ್ ಕೈಕಾಲು ಕಟ್ಟಿ, ದೇವಸ್ಥಾನದ ಐದು ಹುಂಡಿ ಒಡೆದ ಖತರ್ನಾಕ್ ಕಳ್ಳರು

ಶಿವಮೊಗ್ಗ ಲೈವ್.ಕಾಂ | SHIMOGA | 25 ನವೆಂಬರ್ 2019 ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ಆತನ ಕೈಕಾಲು ಕಟ್ಟಿ ಹಾಕಿ, ಹುಂಡಿ ಒಡೆದು ಹಣ ಕಳ್ಳತನ ಮಾಡಲಾಗಿದೆ. ಖತರ್ನಾಕ್ ಕಳ್ಳರ ಕೈಚಳಕ ದೇವಸ್ಥಾನದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಮಧ್ಯರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಬಂಧಿಸುವುದಾಗಿ ತಿಳಿಸಿದ್ದಾರೆ. ಕಳ್ಳತನ ಆಗಿದ್ದು ಯಾವ ದೇವಸ್ಥಾನದಲ್ಲಿ? ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಕಳ್ಳರು ಕೈಚಳಕ … Read more

CRIME NEWS | ಶಿವಮೊಗ್ಗ ಬಸ್ ನಿಲ್ದಾಣದಿಂದ ಮಹಿಳೆ ಕಿಡ್ನಾಪ್, ಸುಲಿಗೆ ಕೇಸ್, ಮೂವರಿಗೆ ಶಿಕ್ಷೆ ಪ್ರಕಟ

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019 ಮಹಿಳೆಯೊಬ್ಬರನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪಿಗಳಿಗೆ ಶಿವಮೊಗ್ಗ ಕೋರ್ಟ್ ಶಿಕ್ಷೆ ವಿಧಿಸಿದೆ. ಮೂವರು ಆರೋಪಿಗಳು ಶಿವಮೊಗ್ಗ ಬಸ್ ನಿಲ್ದಾಣದಿಂದ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿದ್ದರು. ಏನಿದು ಘಟನೆ? ಬಾಳೆಕೊಪ್ಪದ ಸಹನಾ ಎಂಬುವವರನ್ನು ಶಿವಮೊಗ್ಗದ ಬಸ್ ನಿಲ್ದಾಣದಿಂದ ಅಪಹರಣ ಮಾಡಲಾಗಿತ್ತು. ಅನುಪಿನಕಟ್ಟೆ ಬಳಿ ಕೆರೆ ಅಂಗಳದಲ್ಲಿ ಸಹನಾ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಬಳಿಕ ಅವರ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು, ಎಟಿಎಂನಿಂದ 9500 ರೂ. ಹಣ ಡ್ರಾ … Read more