ರಸ್ತೆಯಲ್ಲಿ PUBG ಗೇಮ್ ಆಡುತ್ತ ಹೋಗುತ್ತಿದ್ದ ಬಾಲಕ ಶಿವಮೊಗ್ಗದಲ್ಲಿ ಸಾವು

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 29 ಆಗಸ್ಟ್ 2019 ಪಬ್’ಜಿ ಮೊಬೈಲ್ ಗೇಮ್ ಚಟಕ್ಕೆ ಬಿದ್ದು ಶಿವಮೊಗ್ಗದಲ್ಲಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಇಲ್ಲಿನ ಹಕ್ಕಿಪಿಕ್ಕಿ ಕ್ಯಾಂಪ್’ನಲ್ಲಿ ಘಟನೆ ನಡೆದಿದೆ. ಪ್ರೀತಿಮ್ (16) ಮೃತ ಬಾಲಕ. ರಸ್ತೆಯಲ್ಲಿ ನಡೆದು ಹೋಗುವಾಗ, ಆನ್’ಲೈನ್ ಮೊಬೈಲ್ ಗೇಮ್ ಪಬ್’ಜಿ ಆಡುತ್ತಿದ್ದ ಪ್ರೀತಮ್, ರಸ್ತೆಯ ಹಂಪ್ ಗಮನಿಸದರೆ ಎಡವಿಬಿದ್ದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಮ್’ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 26ರಂದು ರಾತ್ರಿ 8 ಗಂಟೆ ಹೊತ್ತಿಗೆ ಘಟನೆ ನಡೆದಿತ್ತು. ಚಿಕಿತ್ಸೆ ಫಲಕಾರಿಯಾಗದೆ … Read more

OLXನಲ್ಲಿ ಜಾಹೀರಾತು ನೀಡಿ ಶಿವಮೊಗ್ಗದ ಜನರಿಗೆ ಟೋಪಿ ಹಾಕಲು ಯತ್ನಿಸಿದವನು ಅರೆಸ್ಟ್

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಆಗಸ್ಟ್ 2019 ಸಾಲ ಕೊಡಿಸುವುದಾಗಿ ಒಎಲ್ಎಕ್ಸ್’ನಲ್ಲಿ ಜಾಹೀರಾತು ನೀಡಿ, ಶಿವಮೊಗ್ಗದಲ್ಲಿ ಜನರಿಗೆ ಟೋಪಿ ಹಾಕಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರದ ಮಂಜೂಶ (20) ಬಂಧಿತ. ಮಾರ್ಕ್ಸ್ ಕಾರ್ಡ್ ಆಧಾರದ ಮೇಲೆ ಸಾಲ ಕೊಡಿಸುವುದಾಗಿ ಒಎಲ್ಎಕ್ಸ್’ನಲ್ಲಿ ಜಾಹೀರಾತು ಪ್ರಕಟಿಸಿದ್ದ. ಜಾಹೀರಾತು ಆಧಾರದ ಮೇಲೆ ಮಂಜೂಶನನ್ನು ಸಂಪರ್ಕಿಸಿದರೆ, ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಿಯಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಾಹೀರಾತು ಗಮನಿಸಿ ಶಿವಮೊಗ್ಗದ ವೆಂಕಟೇಶ್ ಎಂಬುವವರು ಸಾಲಕ್ಕಾಗಿ ಕರೆ ಮಾಡಿದ್ದರು. … Read more

ಶಿವಮೊಗ್ಗ ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ, 41 ಬುಲೆಟ್ ಸೀಜ್, ಗ್ಯಾರೇಜ್ ಮಾಲೀಕರಿಗೆ ವಾರ್ನಿಂಗ್

300719 Bullets Seized By Traffic Police 1

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 30 ಜುಲೈ 2019 ಶಿವಮೊಗ್ಗ ಟ್ರಾಫಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ಶಿವಮೊಗ್ಗ ನಗರದಲ್ಲಿ ಸಂಚರಿಸುತ್ತಿದ್ದ ಬುಲೆಟ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ನಗರದ ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಸಿಬ್ಬಂದಿ, 41 ಬುಲೆಟ್ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಕ್ ಸವಾರರ ವಿರುದ್ಧ ಇಂಡಿಯನ್ ಮೋಟಾರ್ ವೆಹಿಕಲ್ ಕಾಯ್ದೆ ಅನ್ವಯ ಕೇಸು ದಾಖಲಿಸಲಾಗಿದೆ. ಗ್ಯಾರೇಜ್ ಮಾಲೀಕರಿಗೆ ನೊಟೀಸ್ … Read more

ಚಿನ್ನದ ಉದ್ಯಮಿ, ಎಂಇಪಿ ಪಕ್ಷದ ರಾಷ್ಟ್ರಾಧ್ಯಕ್ಷೆ, ಕನ್ನಡ ನ್ಯೂಸ್ ಚಾನೆಲ್’ನ ಓನರ್ ಶಿವಮೊಗ್ಗ ಪೊಲೀಸ್ ವಶಕ್ಕೆ

290719 Nowhera Sheik Arrested by Shivamogga Police 1

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 29 ಜುಲೈ 2019 ವಂಚನೆ ಪ್ರಕರಣ ಸಂಬಂಧ ಎಐಎಂಇಪಿ ಪಕ್ಷದ ಸಂಸ್ಥಾಪಕಿ ನೌಹೇರಾ ಶೇಖ್ ಅವರನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೈದರಾಬಾದ್’ನಿಂದ ನೌಹೇರಾ ಶೇಖ್ ಅವರನ್ನು ಬಾಡಿ ವಾರೆಂಟ್ ಮೇಲೆ ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವತ್ತು ಶಿವಮೊಗ್ಗ ಕೋರ್ಟ್’ಗೆ ಹಾಜರುಪಡಿಸಲಾಗಿದ್ದು, ಆರು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. 25 ಲಕ್ಷದ ವಂಚನೆ ಕೇಸ್ ನೌಹೇರಾ ಶೇಖ್, ತಮ್ಮ ಒಡೆತನದ ಹೀರಾ ಗೋಲ್ಡ್ ಕಂಪನಿ ಮೇಲೆ ಶಿವಮೊಗ್ಗದ ಮೊಹಮ್ಮದ್ … Read more

ಹಾಸ್ಟೆಲ್’ನಲ್ಲಿ ನೇಣು ಬಿಗಿದುಕೊಂಡು ಶಿವಮೊಗ್ಗ ಕೋರ್ಟ್ ಎಫ್’ಡಿಎ ಆತ್ಮಹತ್ಯೆ

Suicide-Hanging-General

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 22 ಜುಲೈ 2019 ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಎಫ್’ಡಿಎ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಂದೀಪ್ (21), ನೇಣಿಗೆ ಶರಣಾದ ಯುವಕ. ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ಸಂದೀಪ್ , ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಎಫ್’ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ. ನಗರದ ಉಪ್ಪಾರ ಹಾಸ್ಟೆಲ್’ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ ಲೈವ್.ಕಾಂ … Read more

ಒಂದೇ ಒಂದು ಬೈಕ್ ಕಳ್ಳತನ ಕೇಸಲ್ಲಿ ನಡೆಯಿತು ವಿಚಾರಣೆ, ಆರೋಪಿ ಬಾಯಿಬಿಟ್ಟದ್ದನ್ನು ಕೇಳಿ ಪೊಲೀಸರಿಗೆ ಆಯ್ತು ಶಾಕ್

police jeep

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 22 ಜುಲೈ 2019 ತನಿಕೆ ಆರಂಭವಾಗಿದ್ದು ಕಳುವಾಗಿದ್ದ ಒಂದು ಬೈಕ್ ಪತ್ತೆಗೆ. ಆದ  ರೆ ಭೇದಿಸಿದ್ದು ಹತ್ತು ಬೈಕ್ ಕಳ್ಳತನ ಕೇಸುಗಳನ್ನು. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು, ವಿವಿಧ ಠಾಣೆಯಲ್ಲಿ ದಾಖಲಾಗಿರುವ ಹತ್ತು ಬೈಕ್ ಕಳವು ಪ್ರಕರಣದ ಆರೋಪಿಯನ್ನು ಬೈಕುಗಳ ಸಹಿತ ವಶಕ್ಕೆ ಪಡೆದಿದ್ದಾರೆ. ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ? ಬೆಳಲಕಟ್ಟೆ ಗ್ರಾಮದ ಹಾಲೇಶಪ್ಪ ಎಂಬುವವರು ಮೇಲಿನಹನಸವಾಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ದಿಢೀರ್ ನಾಪತ್ತೆಯಾಗಿತ್ತು. ಈ ಕುರಿತು ಗ್ರಾಮಾಂತರ … Read more

ಶಿವಮೊಗ್ಗದ ಉದ್ಯಮಿ ತಲೆಗೆ ರಿವಾಲ್ವರ್ ಇಟ್ಟು ಹತ್ಯೆ ಬೆದರಿಕೆ, ಕೆಲವೇ ಗಂಟೆಯಲ್ಲಿ ಸುಪಾರಿ ಹಂತಕರು ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019 ರಿಯಲ್ ಎಸ್ಟೇಟ್ ಉದ್ಯಮಿ ಎದೆಗೆ ರಿವಾಲ್ವರ್ ಇಟ್ಟು, ಹತ್ಯೆ ಮಾಡುವ ಬೆದರಿಕೆ ಒಡ್ಡಿದ್ದ ಪ್ರಕರಣ ಸಂಬಂಧ, ಶಿವಮೊಗ್ಗ ಪೊಲಿಸರು ಐದು ಜನರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ರಿವಾಲ್ವರ್ ಮತ್ತು ಒಂದು ಗುಂಡು ವಶಕ್ಕೆ ಪಡೆಯಲಾಗಿದೆ. ಉದ್ಯಮಿ ಹೆವನ್ ಇನ್ ಹಬೀಬ್ ಹತ್ಯೆ ಮಾಡಲು, ಐವರು ಸುಪಾರಿ ಕಿಲ್ಲರ್’ಗಳು ಸಂಚು ರೂಪಿಸಿದ್ದರು. ಜುಲೈ 16ರಂದು ರಾತ್ರಿ ಚಾಲುಕ್ಯ ನಗರದ ಬಳಿ, ಹಬೀಬ್ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ರಿವಾಲ್ವರ್ … Read more

ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಕರೆ ಮಾಡಿ ಶಿವಮೊಗ್ಗದ ವ್ಯಕ್ತಿಗೆ 50 ಸಾವಿರ ರೂ. ಪಂಗನಾಮ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019 ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಕರೆ ಮಾಡಿದ ವಂಚಕನೊಬ್ಬ, ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 50 ಸಾವಿರ ರೂ. ಪಂಗನಾಮ ಹಾಕಿದ್ದಾನೆ. ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬ, ಹಸೂಡಿ ಗ್ರಾಮದ ಎ.ಎನ್.ಬೆಳ್ಳಯ್ಯ ಎಂಬುವವರನ್ನು ವಂಚಿಸಿದ್ದಾನೆ. ಎಟಿಎಂ ಕಾರ್ಡ್ ಅವಧಿ ಮುಗಿದಿದೆ. ಅದನ್ನು ಕೂಡಲೇ ನವೀಕರಣ ಮಾಡಿಸಿಕೊಳ್ಳಿ. ಇದಕ್ಕಾಗಿ ಮೊಬೈಲ್’ಗೆ ಬರುವ ಒಟಿಪಿ ಪಿನ್ ನಂಬರ್ ಹೇಳುವಂತೆ ತಿಳಿಸಿದ್ದಾನೆ. ವಂಚಕನ ಮಾತು ನಂಬಿದ ಬೆಳ್ಳಯ್ಯ ಒಟಿಪಿ … Read more

ಗಾಂಧಿ ಬಜಾರ್ ಚಿನ್ನದ ವ್ಯಾಪಾರಿಗೆ ರಿವಲ್ವಾರ್ ತೋರಿಸಿ ಹಣ ದೋಚಿದ ಖದೀಮರು

shivamogga graphics map

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019 ಶಿವಮೊಗ್ಗದ ಚಿನ್ನ, ಬೆಳ್ಳಿ ವ್ಯಾಪಾರಿ ಮೇಲೆ ಹಲ್ಲೆ ನಡಸಿ, ರಿವಲ್ವಾರ್ ತೋರಿಸಿ ಹಣ ದೋಚಲಾಗಿದೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗಂಧರ್ವ ನಗರ ನಿವಾಸಿ ಎಂ.ಕೆ.ಅನೀಸುರ್ ಇಸ್ಲಾಂ ಅವರ ಮೇಲೆ ಹಲ್ಲೆ ನಡೆಸಿ, ರಿವಾಲ್ವರ್ ತೋರಿಸಿ, ಹಣ ದೋಚಲಾಗಿದೆ. ಸಾದಿಕ್ ಅಲಿಯಾಸ್ ಸಾತು ಎಂಬಾತ ಕೃತ್ಯ ಎಸಗಿದವನು. ಗಾಂಧಿ ಬಜಾರ್’ನಲ್ಲಿರುವ ಅನೀಸುರ್ ಇಸ್ಲಾಂ ಅವರ … Read more