BREAKING NEWS – ಭದ್ರಾವತಿಯಲ್ಲಿ ರೌಡಿ ಶೀಟರ್‌ ಕಾಲಿಗೆ ಗುಂಡು ಹಾರಿಸಿದ ಲೇಡಿ ಇನ್ಸ್‌ಪೆಕ್ಟರ್‌

breaking news graphics

ಭದ್ರಾವತಿ : ಬಂಧಿಸಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿ ಎಸ್ಕೇಪ್‌ ಆಗಲು ಯತ್ನಿಸಿದ್ದ ರೌಡಿ ಶೀಟರ್‌ (Rowdy Sheeter) ಕಡೇಕಲ್‌ ಅಬೀದ್‌ ಕಾಲಿಗೆ ಗುಂಡು ಹಾರಿಸಲಾಗಿದೆ. ಪೇಪರ್‌ ಟೌನ್‌ ಇನ್ಸ್‌ಪೆಕ್ಟರ್‌ ನಾಗಮ್ಮ, ರೌಡಿ ಶೀಟರ್‌ ಕಡೇಕಲ್‌ ಅಬೀದ್‌ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ. ಕೊಲೆ ಯತ್ನ ಪ್ರಕರಣದರಲ್ಲಿ ರೌಡಿ ಶೀಟರ್‌ (Rowdy Sheeter) ಕಡೇಕಲ್‌ ಅಬೀದ್‌ ತಲೆ ಮರೆಸಿಕೊಂಡಿದ್ದ. ಕಳೆದ ಒಂದು ತಿಂಗಳಿನಿಂದ ಈತನಿಗಾಗಿ ಪೊಲೀಸರು ಶೋಧಿಸುತ್ತಿದ್ದರು. ಇಂದು ಈತನ … Read more

ಶಿವಮೊಗ್ಗದ ಬಿರಿಯಾನಿ ಹೊಟೇಲ್‌ನಲ್ಲಿ ಅನಿಲ ಸೋರಿಕೆಯಿಂದ ಅಗ್ನಿ ಅವಘಡ, ಮಹಿಳೆಗೆ ಗಾಯ

Gas-leakage-at-a-hotel-near-shimoga-bus-stand.webp

ಶಿವಮೊಗ್ಗ : ಅಡುಗೆ ಅನಿಲ (GAS) ಸೋರಿಕೆಯಾಗಿ ನಗರದ ಹೊಟೇಲ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆಗೆ ಸುಟ್ಟ ಗಾಯವಾಗಿದೆ. ಬಸ್ ನಿಲ್ದಾಣ ಸಮೀಪದ ಬಿರಿಯಾನಿ ಹೌಸ್ ಹಟೇಲ್‌ನ ಅಡುಗೆ ಮನೆಯಲ್ಲಿ ಅಡುಗೆ ಅನಿಲ (Gas) ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡುವ ಮಹಿಳೆಗೆ ಸುಟ್ಟ ಗಾಯವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ದೌಡಾಯಿಸಿ ಸಂಭವನೀಯ ಭಾರಿ ದುರಂತ ತಪ್ಪಿಸಿದ್ದಾರೆ. ಹೊಟೇಲ್‌ನ ಅಡುಗೆ ಕೋಣೆಯಲ್ಲಿ ಇದ್ದ ವಸ್ತುಗಳು ಸುಟ್ಟು ಹೋಗಿವೆ. … Read more

ಅರ್ಚಕರಿಗೆ ಲಂಡನ್‌ ಮಮತಾಳಿಂದ ಬಂತು ಫ್ರೆಂಡ್‌ ರಿಕ್ವೆಸ್ಟ್‌, ಅಕ್ಸೆಪ್ಟ್‌ ಮಾಡಿದ್ಮೇಲೆ ಕಾದಿತ್ತು ಬಿಗ್‌ ಶಾಕ್‌

SMS-Fraud-Shimoga-CEN-Police-Station.

ಶಿವಮೊಗ್ಗ : ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಕಳುಹಿಸಿದ್ದ ಫ್ರೆಂಡ್‌ ರಿಕ್ವೆಸ್ಟ್‌ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (Priest) ಸಂಕಷ್ಟ ತಂದೊಡ್ಡಿದೆ. ಲಕ್ಷ‌ ಲಕ್ಷ ರೂ. ಹಣ ಕಳೆದುಕೊಂಡಿರುವ ಅರ್ಚಕ, ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಮತಾ ಕಳಹಿಸಿದ ರಿಕ್ವೆಸ್ಟ್‌ ಮಮತಾ ಜಾಯ್‌ ಎಂಬ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (ಹೆಸರು, ಊರು ಗೌಪ್ಯ) ಫೇಸ್‌ಬುಕ್‌ನಲ್ಲಿ ರಿಕ್ವೆಸ್ಟ್‌ ಬಂದಿತ್ತು. ಕೆಲ ಸಮಯದ ನಂತರ ಆಕೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ರಿಪ್ಲೆ ಮಾಡಿದ ಮಮತಾ ಜಾಯ್‌, ತನ್ನ ವಾಟ್ಸಪ್‌ ನಂಬರ್‌ ಹಂಚಿಕೊಂಡು ಚಾಟಿಂಗ್‌ ಮಾಡಿದ್ದಳು. … Read more

ಗಾಜನೂರಿನಲ್ಲಿ ನಡುರಾತ್ರಿ ಕೇಳಿತು ಶಬ್ದ, ಹೊರಗೆ ಕಾಣಿಸ್ತು ಸ್ಯಾಂಟ್ರೋ ಕಾರ್‌, ಮೊಬೈಲ್‌ನಲ್ಲಿ ದೃಶ್ಯ ಸೆರೆ, ಏನಿದು ಕೇಸ್?

Cow-theives-escaped-in-a-car-in-gajanuru

ಶಿವಮೊಗ್ಗ : ನಡುರಾತ್ರಿ ದನಗಳ್ಳತನಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್‌ (Gang) ಒಂದು ಸ್ಥಳೀಯರು ಬರುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದೆ. ಈ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗದ ತಾಲೂಕು ಗಾಜನೂರಿನ ಬಸವೇಶ್ವರ ಬೀದಿಯಲ್ಲಿ ನಡೆದಿದೆ. ಮಾ.20ರಂದು ರಾತ್ರಿ 3 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ನಡುರಾತ್ರಿ ಶಬ್ದ, ಹೊರಗೆ ನಿಂತಿತ್ತು ಕಾರು ಬಸವೇ‍ಶ್ವರ ಬೀದಿಯಲ್ಲಿ ನಡುರಾತ್ರಿ ಶಬ್ದವಾಗುತ್ತಿತ್ತು. ನಾಯಿಗಳು ಜೋರಾಗಿ ಬೊಗಳುತ್ತಿದ್ದವು. ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಹೊರ ಬಂದಾಗ ರಸ್ತೆ ಬದಿ ನಿಂತಿದ್ದ ಹಸುವೊಂದನ್ನು ಸ್ಯಾಂಟ್ರೋ ಕಾರಿಗೆ ತುಂಬಿಕೊಳ್ಳುವ ಪ್ರಯತ್ನ … Read more

ನಗರ ಪೊಲೀಸರ ಕಾರ್ಯಾಚರಣೆ, ಬೈಕು, ಚಿನ್ನದ ಸಹಿತ ಸಿಕ್ಕಿಬಿದ್ದ ಆರೋಪಿ, ಏನಿದು ಕೇಸ್‌?

Nagara-Police-nab-house-thief

ಹೊಸನಗರ : ಮನೆಯಲ್ಲಿ ಕಳವು ಮಾಡುತ್ತಿದ್ದ ಆರೋಪಿಯನ್ನು (Thief) ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಟ್ಟಿನಹೊಳೆ ಗ್ರಾಮದ ಕೆ.ಆರ್. ಶರತ್ (26) ಬಂಧಿತ. ಈತನಿಂದ 1 ಲಕ್ಷ ರೂ. ಮೌಲ್ಯದ 12 ಗ್ರಾಂನ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ತಾಲ್ಲೂಕಿನ ಮತ್ತಿಕೈ ಗ್ರಾಮದ ದೊಡ್ಡಮನೆ ವಾಸಿ ಪರಮೇಶ್ವರಯ್ಯ ಈಚೆಗೆ ಸಂಬಂಧಿಕರ ಮನೆಗೆ ತೆರಳಿದ್ದರು. ಆಗ ಮನೆಯ ಬೀಗ ಮುರಿದು 12 ಗ್ರಾಂನ ಚಿನ್ನದ ಸರ ಹಾಗೂ 15 ಸಾವಿರ ರೂ. ನಗದು ಕಳ್ಳತನವಾಗಿತ್ತು. … Read more

ಕಾರಿನಲ್ಲಿ ಬಂದು ಡಿವೈಡರ್‌ ಮೇಲಿದ್ದ ಟ್ರಾಫಿಕ್‌ ಪೊಲೀಸ್‌ ರಿಫ್ಲೆಕ್ಟರ್‌ ಕಟೌಟ್‌ ಕದ್ದೊಯ್ದ ದುಷ್ಕರ್ಮಿಗಳು

Traffic-Police-Reflector-cut-out-theft

ಶಿವಮೊಗ್ಗ : ರಸ್ತೆಯ ಡಿವೈಡರ್‌ ಮೇಲೆ ಸಂಚಾರ ಪೊಲೀಸ್‌ ಸಿಬ್ಬಂದಿ ನಿಂತಿರುವಂತಿದ್ದ ರಿಫ್ಲೆಕ್ಟರ್‌ ಕಟೌಟ್‌ (Cut Out) ಅನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ರಿಫ್ಲೆಕ್ಟರ್‌ ಕಟೌಟ್‌ ಕಳವು ಮಾಡಿದ್ದಾರೆ. ಇದು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗದ ಸಾಗರ ರಸ್ತೆಯ ಮಹೇಂದ್ರ ಶೋ ರೂಂ ಮುಂಭಾಗ, ಪೊಲೀಸ್‌ ಸಿಬ್ಬಂದಿಯೊಬ್ಬರು ನಿಧಾನವಾಗಿ ಚಲಿಸಿ ಎಂಬ ಬೋರ್ಡ್‌ ಹಿಡಿದು ನಿಂತಿರುವಂತಹ ರಿಫ್ಲೆಕ್ಟರ್‌ ಕಟೌಟ್‌ (Cut Out)  ಹಾಕಲಾಗಿತ್ತು. ಮಾ.16ರ ರಾತ್ರಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು … Read more

ಶಿವಮೊಗ್ಗದಲ್ಲಿ ಬೈಕಿನಲ್ಲಿ ಅಕ್ಕಿ ಮೂಟೆ ಇಟ್ಟುಕೊಂಡು ಹೋಗುವಾಗ ಅಪಘಾತ, ಕೇರಳದ ವ್ಯಕ್ತಿ ಸಾವು

ACCIDENT-NEWS-GENERAL-IMAGE.

ಶಿವಮೊಗ್ಗ : ಬೈಕ್‌ನ ಮುಂಭಾಗದಲ್ಲಿ ಅಕ್ಕಮೂಟೆ (Rice Bag) ಇಟ್ಟುಕೊಂಡು ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಮೊಗ್ಗದ ಪಿಇಎಸ್‌ ಕಾಲೇಜು ಹಿಂಭಾಗ ಕಿಮ್ಮನೆ ಗಾಲ್ಫ್‌ ಕ್ಲಬ್‌ಗೆ ತೆರಳುವ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕೇರಳ ಮೂಲದ ಎರ್ನಾಕುಲಂನ ಜೋಬಿ ಪೌಲ್‌ (45) ಮೃತ ಬೈಕ್‌ ಸವಾರ. ಇಲ್ಲಿನ ಫಾರಂ ಒಂದರಲ್ಲಿ ಜೋಬಿ ಪೌಲ್‌ ಕೆಲಸ ಮಾಡುತ್ತಿದ್ದರು. ಸಾಗರ ರಸ್ತೆಯ ಅಂಗಡಿಯೊಂದರಲ್ಲಿ ಅಕ್ಕಿ ಮೂಟೆ (Rice Bag) ಖರೀದಿಸಿ, ಅದನ್ನು ಬೈಕಿನ ಮುಂಭಾಗದಲ್ಲಿ … Read more

ಅಬಕಾರಿ ಕಾನ್‌ಸ್ಟೇಬಲ್‌ಗೆ ಕಪಾಳಮೋಕ್ಷ, ತಪಾಸಣೆಗೆ ಹೋದಾಗ ಇಬ್ಬರು ಸಿಬ್ಬಂದಿ ಮೇಲೆ ದಾಳಿ, ಏನಿದ ಕೇಸ್‌?

Crime-News-General-Image

ಶಿವಮೊಗ್ಗ : ಗಾಂಜಾ ಸೇವಿಸುತ್ತಿರುವ ಅನುಮಾನದ ಮೇರೆಗೆ ಪರಿಶೀಲನೆಗೆ ತೆರಳಿದ್ದ ಅಬಕಾರಿ ಇಲಾಖೆ (EXCISE) ಸಿಬ್ಬಂದಿ ಮತ್ತು ಹೋಮ್‌ ಗಾರ್ಡ್‌ ಮೇಲೆ ಮೂವರು ಯುವಕರು ಮನಸೋಯಿಚ್ಛೆ ಥಳಿಸಿದ್ದಾರೆ. ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯ ಲಾಡ್ಜ್‌ ಒಂದರ ಸಮೀಪ ಗಾಂಜಾ ಸೇವಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಅಬಕಾರಿ (EXCISE) ಡಿವೈಎಸ್‌ಪಿ ಸೂಚನೆ ಮೇರೆಗೆ ಅಬಕಾರಿ ಕಾನ್ಸ್‌ಟೇಬಲ್‌ ಪ್ರಭು ಮತ್ತು ಹೋಮ್‌ ಗಾರ್ಡ್‌ ಯುಸುಫ್‌ ಖಾನ್‌ ಸ್ಥಳಕ್ಕೆ ತೆರಳಿದ್ದರು. ಎರಡು ಬೈಕ್‌, ಮೂವರು ಯುವಕರು ಸ್ಥಳದಲ್ಲಿ ಎರಡು … Read more

ಲಂಡನ್‌ನಿಂದ ಬಂತು ಫೋನ್‌, ಮೆಸೇಜ್‌, ಭದ್ರಾವತಿ ವ್ಯಕ್ತಿಗೆ ಕಾದಿತ್ತು ಬಿಗ್‌ ಶಾಕ್‌, ಆಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ : ಲಂಡನ್‌ನಿಂದ (London) ಬೆಲೆ ಬಾಳುವ ಗಿಫ್ಟ್‌ ಬಂದಿದೆ ಎಂದು ನಂಬಿಸಿ ಭದ್ರಾವತಿಯ ವ್ಯಕ್ತಿಯೊಬ್ಬರಿಗೆ (ಹೆಸರು ಗೌಪ್ಯ) 8.56 ಲಕ್ಷ ರೂ. ವಂಚಿಸಲಾಗಿದೆ. ಇದೇ ಮಾದರಿ ಈ ಹಿಂದೆಯು ಹಲವರಿಗೆ ವಂಚನೆಯಾಗಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಲಂಡನ್‌ನಿಂದ ಬಂತು ಫೋನ್‌ ಲಂಡನ್‌ನಿಂದ (London) ಮೈಕಲ್‌ ಮ್ಯಾಕ್‌ಡೊನಾಲ್ಡ್‌ ಹೆಸರಿನಲ್ಲಿ ಕರೆ ಮತ್ತು ಮೆಸೇಜ್‌ ಮಾಡಿ 43 ಲಕ್ಷ ರೂ. ಮೌಲ್ಯದ ಗಿಫ್ಟ್‌ ಕಳುಹಿಸುತ್ತಿರುವುದಾಗಿ ಭದ್ರಾವತಿಯ ವ್ಯಕ್ತಿಗೆ ನಂಬಿಸಿದ್ದ. ಗಿಫ್ಟ್‌ ಕಳುಹಿಸಲು ಕಂಪನಿಯ ವೇಯ್ಟಿಂಗ್‌ ಚಾರ್ಜ್‌ 5 ಸಾವಿರ … Read more

ಗಾಜನೂರಿನಲ್ಲಿ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕನ ವಿರುದ್ಧ ಕೇಸ್‌ ದಾಖಲಿಸಿದ ಮೆಸ್ಕಾಂ

ACCIDENT-NEWS-GENERAL-IMAGE.

ಶಿವಮೊಗ್ಗ : ಕಾರು ಡಿಕ್ಕಿಯಾಗಿ ವಿದ್ಯುತ್‌ ಕಂಬಕ್ಕೆ (Pole) ಹಾನಿಯಾಗಿದ್ದು, ಕಾರು ಚಾಲಕನ ವಿರುದ್ಧ ಮೆಸ್ಕಾಂ ಜೂನಿಯರ್‌ ಇಂಜಿನಿಯರ್‌ ದೂರು ನೀಡಿದ್ದಾರೆ. ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಭಾಗ ಟೊಯೊಟ ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡದಿತ್ತು. ಇದರಿಂದ ಕಂಬ ಜಖಂಗೊಂಡಿದೆ. ಹಾಗಾಗಿ 23,778 ರೂ. ನಷ್ಟವಾಗಿದೆ ಎಂದು ಆರೋಪಿಸಿ ಕಾರು ಚಾಲಕನ ವಿರುದ್ಧ ಮೆಸ್ಕಾಂ ಜೂನಿಯರ್‌ ಇಂಜಿನಿಯರ್‌ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.  ಇದನ್ನೂ ಓದಿ » ಕಮಲಾ … Read more