ಚನ್ನಪ್ಪ ಲೇಔಟ್‌ನಲ್ಲಿ ಬೆಳಗ್ಗೆ ಮನೆ ಹೊರ ಬಂದ ಯುವಕನಿಗೆ ಕಾದಿತ್ತು ಆಘಾತ

Shimoga-News-update

SHIMOGA NEWS, 27 NOVEMBER 2024 ಶಿವಮೊಗ್ಗ ಸಿಟಿ : ಮನೆ ಮುಂದೆ ನಿಲ್ಲಿಸಿದ್ದ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕ್‌ (Bike) ಕಳ್ಳತನವಾಗಿದೆ. ಶಿವಮೊಗ್ಗ ನಗರದ ಚನ್ನಪ್ಪ ಲೇಔಟ್‌ನಲ್ಲಿ ಘಟನೆ ನಡೆದಿದೆ. ಸೂರ್ಯದೇವ್‌ ಎಂಬುವವರು ರಾತ್ರಿ 12 ಗಂಟೆಗೆ ತಮ್ಮ ಮನೆಯ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದರು. ಬೆಳಗೆ 5 ಗಂಟೆಗೆ ಎದ್ದು ಹೊರ ಬಂದು ನೋಡಿದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಸೂರ್ಯದೇವ್‌ ಬಳಿಕ ಜಯನಗರ ಠಾಣೆಗೆ ದೂರು ನೀಡಿದ್ದಾರೆ. 2.50 ಲಕ್ಷ ರೂ. ಮೌಲ್ಯದ ಬೈಕ್‌ … Read more

ಗಾಂಧಿ ಬಜಾರ್‌ನ ಅಂಗಡಿಯಲ್ಲಿ ಬೆಂಕಿ, ಲಕ್ಷ ಲಕ್ಷದ ವಸ್ತುಗಳು ಆಹುತಿ

Gandhi-Bazaar-shop-incident.

SHIMOGA NEWS, 26 NOVEMBER 2024 ಶಿವಮೊಗ್ಗ : ಗಾಂಧಿ ಬಜಾರ್‌ನ ಜೈ ಅಂಬೆ ಮಾರ್ಕೆಟಿಂಗ್‌ ಅಂಗಡಿಯಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಸುಮಾರು 6 ಲಕ್ಷ ರೂ. ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಗಾಂಧಿ ಬಜಾರ್‌ 1ನೇ ಅಡ್ಡರಸ್ತೆಯಲ್ಲಿರುವ ಜೈ ಅಂಬೆ ಮಾರ್ಕೆಟಿಂಗ್‌ ಸಂಸ್ಥೆಯಲ್ಲಿ ಗ್ಯಾಸ್‌ ಸ್ಟೌ, ಫ್ಯಾನ್‌ಗಳು ಸೇರಿದಂತೆ ವಿವಿಧ ಉಪಕರಣ ಮಾರಾಟ ಮಾಡಲಾಗುತ್ತಿತ್ತು. ಕಳೆದ ರಾತ್ರಿ ಅಂಗಡಿಯ ಮೇಲ್ಭಾಗದ ಗೋಡೋನ್‌ನಲ್ಲಿ ಧಿಡೀರ್‌ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದ ಹಲವು ವಸ್ತುಗಳು ಸುಟ್ಟು ಹೋಗಿವೆ. … Read more

ಕಳೆನಾಶಕ ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಸಾವು

R-Lakshman-Former-Nagarasabhe-Member.

SHIMOGA NEWS, 24 NOVEMBER 2024 : ಕಳೆನಾಶಕ (Pesticide) ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಆರ್‌.ಲಕ್ಷ್ಮಣ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶುಕ್ರವಾರ ಆರ್.ಲಕ್ಷ್ಮಣ್‌, ಗೋಪಾಳದ ಪಾರ್ಕ್‌ ಒಂದರಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೊನೆಗೆ ಲಕ್ಷ್ಮಣ್‌ ಅವರೆ ಆಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಲಕ್ಷ್ಮಣ್‌ ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮಣ್‌ ಅವರು ಹೊಸಮನೆ ನಿವಾಸಿ. ಈ … Read more

ಶಿವಮೊಗ್ಗದ ATM ಕೇಂದ್ರದಲ್ಲಿ ಅಪರಿಚಿತರು ಪ್ರತ್ಯಕ್ಷ, ಮನೆಗೆ ಮರಳಿದ್ಮೇಲೆ ಮಹಿಳೆಗೆ ಕಾದಿತ್ತು ಆಘಾತ

Crime-News-General-Image

SHIMOGA NEWS, 20 NOVEMBER 2024 : ಎಟಿಎಂ ಕೇಂದ್ರದ ಒಳಗೆ ಮಹಿಳೆಯೊಬ್ಬರಿಗೆ ಬದಲಿ ಎಟಿಎಂ ಕಾರ್ಡ್‌ ನೀಡಿ 44 ಸಾವಿರ ರೂ. ಹಣ ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ATM ಕೇಂದ್ರದಲ್ಲಿ ಘಟನೆ ನಡೆದಿದೆ. ಎಟಿಎಂ ಕಾರ್ಡ್‌ ಬದಲಿಸಿದ್ದು ಹೇಗೆ? ಸ್ವಸಹಾಯ ಸಂಘಕ್ಕೆ ಪಾವತಿಸಲು ಎಟಿಎಂನಿಂದ ಹಣ ಬಿಡಿಸಲು ಮಹಿಳೆ ತೆರಳಿದ್ದರು. ಎಟಿಎಂ ಮೆಷಿನ್‌ಗೆ ಹಾಕಿದ್ದ ಎಟಿಎಂ ಕಾರ್ಡ್‌ ಕಾರ್ಯನಿರ್ವಹಿಸಲಿಲ್ಲ. ಆಗ ಎಟಿಎಂ ಕೇಂದ್ರದ ಒಳಗೇ ಇದ್ದ ಇಬ್ಬರು ಅಪರಿಚಿತರು … Read more

ತುಂಗಾ ನದಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಶವವಾಗಿ ಪತ್ತೆ

Bank-Manager-found-in-tunga-river-at-thirthahalli

THIRTHAHALLI NEWS, 20 NOVEMBER 2024 : ಮೊಬೈಲ್‌ ಮತ್ತು ಚಪ್ಪಲಿ ಬಿಟ್ಟು ನಾಪತ್ತೆಯಾಗಿದ್ದ ಬ್ಯಾಂಕ್‌ ಮ್ಯಾನೇಜರ್‌ (Manager) ಶವವಾಗಿ ಪತ್ತೆಯಾಗಿದ್ದಾರೆ. ತುಂಗಾ ನದಿಯಲ್ಲಿ ಅವರ ಮೃತದೇಹ ಸಿಕ್ಕಿದೆ. ತೀರ್ಥಹಳ್ಳಿ ತಾಲೂಕು ಅರಳಸುರಳಿಯ ಯುನಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಶ್ರೀವತ್ಸ (38) ಮೃತರು. ತುಂಗಾ ನದಿ ದಡದಲ್ಲಿ ಮೊಬೈಲ್‌ ಮತ್ತು ಚಪ್ಪಲಿ ಪತ್ತೆಯಾಗಿತ್ತು. ಮೊಬೈಲ್‌ ಪರಿಶೀಲಿಸಿದಾಗ ಶ್ರೀವತ್ಸ ಅವರಿಗೆ ಸೇರಿದ್ದು ಎಂದು ಗೊತ್ತಾಗಿತ್ತು. ಚಪ್ಪಲಿ ಮತ್ತು ಮೊಬೈಲ್‌ ದಡದ ಮೇಲೆ ಬಿಟ್ಟು ತುಂಗಾ ನದಿಯಲ್ಲಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿತ್ತು. … Read more

ಮೈಸೂರಿನಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿ ಲಾಡ್ಜ್‌ನಲ್ಲಿ ನೇಣಿಗೆ ಶರಣು

Doddapete-Police-raid-on-Lodge-in-Shimoga.

SHIMOGA NEWS, 20 NOVEMBER 2024 : ಮೈಸೂರು (Mysore) ಮೂಲದ ವ್ಯಕ್ತಿಯೊಬ್ಬರು ಶಿವಮೊಗ್ಗದ ಲಾಡ್ಜ್‌ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಠಡಿಯಲ್ಲಿ ಡೆತ್‌ ನೋಟ್‌ ಪತ್ತೆಯಾಗಿದ್ದು ಬ್ಯಾಂಕ್‌ ಮ್ಯಾನೇಜರ್‌ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೈಸೂರಿನ ವಿಜಯನಗರ ನಿವಾಸಿ ರವಿಕುಮಾರ್‌ ನ.17ರ ರಾತ್ರಿ ಶಿವಮೊಗ್ಗದ ಲಾಡ್ಜ್‌ ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ತರಕಾರಿ ಮಂಡಿ ನಡೆಸುತ್ತಿದ್ದ ರವಿಕುಮಾರ್‌ ಖಾಸಗಿ ಬ್ಯಾಂಕ್‌ ಮತ್ತು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದರು. ದಿನದ ಬಡ್ಡಿ ಮತ್ತು ಹಣ ಮರುಪಾವತಿಗಾಗಿ … Read more

ತುಂಗಾ ನದಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ಗಾಗಿ ಶೋಧ

Thirthahalli-Tunga-Bridge

THIRTHAHALLI NEWS, 19 NOVEMBER 2024 : ತೀರ್ಥಹಳ್ಳಿಯಲ್ಲಿ ತುಂಗಾ ನದಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ (Manager) ಒಬ್ಬರು ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದೆ. ಅವರ ಚಪ್ಪಲಿ ಮತ್ತು ಮೊಬೈಲ್‌ ಫೋನ್‌ ನದಿ ದಂಡೆ ಮೇಲೆ ಪತ್ತೆಯಾಗಿದೆ. ತೀರ್ಥಹಳ್ಳಿಯ ತುಂಗಾ ನದಿ ಸೇತುವೆ ಸಮೀಪ ದಂಡೆ ಮೇಲೆ ಚಪ್ಪಲಿ ಮತ್ತು ಮೊಬೈಲ್‌ ಪತ್ತೆಯಾಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೊಬೈಲ್‌ ಪರಿಶೀಲಿಸಿದಾಗ ಅದು ಬ್ಯಾಂಕ್‌ ಮ್ಯಾನೇಜರ್‌ಗೆ ಒಬ್ಬರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಹಾಗಾಗಿ ಅಗ್ನಿಶಾಮಕ ಸಿಬ್ಬಂದಿ ತುಂಗಾ ನದಿಯಲ್ಲಿ ಶೋಧ … Read more

ನದಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ತೀರ್ಥಹಳ್ಳಿ ಪೊಲೀಸ್

Thirthahalli-News-Update

THIRTHAHALLI NEWS, 18 NOVEMBER 2024 : ನದಿಗೆ ಬಿದ್ದಿದ್ದ ವ್ಯಕ್ತಿಯೊಬ್ಬನನ್ನು 112 ಪೊಲೀಸ್‌ ಸಿಬ್ಬಂದಿ ರಕ್ಷಣೆ (Rescue) ಮಾಡಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಸುಮಾರು ಒಂದು ಕಿ.ಮೀ ದೂರದವರೆಗೆ ಆತನನ್ನು ಹೊತ್ತು ತಂದು, ಬಳಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀರ್ಥಹಳ್ಳಿಯ ಸಂಕದಹೊಳೆ ಸಮೀಪ ನದಿಯಲ್ಲಿ ವ್ಯಕ್ತಿಯೊಬ್ಬ ಬಿದ್ದಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ 112 ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ನದಿಗೆ ಇಳಿದ ಪೊಲೀಸ್‌ ಸಿಬ್ಬಂದಿ ಲೋಕೇಶ್‌ ಮತ್ತು ಸಾದತ್‌, ಅನಾಮಧೇಯ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಸುಮಾರು ಒಂದು … Read more

ನೀರು ಕೇಳಿ ದಿಢೀರ್‌ ವೃದ್ಧೆಯ ಮನೆಯೊಳಗೆ ನುಗ್ಗಿದ ಅಪ್ರಾಪ್ತರು, 24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸ್

gold-chain-recovered-by-police-in-Shimoga

SHIMOGA NEWS, 18 NOVEMBER 2024 : ಕುಡಿಯಲು ನೀರು ಕೇಳಿ ಏಕಾಏಕಿ ಮನೆಯೊಳಗೆ ನುಗ್ಗಿದ ನಾಲ್ವರು ಬಾಲಕರು, ವೃದ್ಧೆಯ ಬಾಯಿ ಗಟ್ಟಿಯಾಗಿ ಹಿಡಿದು ಚಿನ್ನದ ಸರ (Gold Chain) ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನೆ ನಡೆದು 24 ಗಂಟೆಯೊಳೆಗೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.   ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಘಟನೆ ಸಂಭವಿಸಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಂಬಂಧ 77 ವರ್ಷದ ವೃದ್ಧೆ ನೀಡಿದ್ದ ದೂರಿನ ಆಧಾರದಲ್ಲಿ … Read more

ಶಾಲಾ ಪ್ರವಾಸಕ್ಕೆ ಹೊರಟಿದ್ದ ಖಾಸಗಿ ಬಸ್‌ ಮರಕ್ಕೆ ಡಿಕ್ಕಿ

Chamarajanagara-Tour-Bus-mishap-at-hosanagara

HOSANAGARA NEWS, 18 NOVEMBER 2024 : ಚಾಮರಾಜನಗರದಿಂದ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ (Tour) ತೆರಳುತ್ತಿದ್ದ ಖಾಸಗಿ ಬಸ್‌ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 29 ಮಂದಿ ಗಾಯಗೊಂಡಿದ್ದಾರೆ. ಹೊಸನಗರ ತಾಲೂಕು ಮಂಡಳ್ಳಿ ಸಮೀಪ ನರ್ತಿಗೆ ಬಳಿ ಘಟನೆ ಸಂಭವಿಸಿದೆ. ಚಾಮರಾಜನಗರ ಜಿಲ್ಲೆಯ ಆಳಂದೂರಿನ ಎಸ್‌ಡಿವಿಎಸ್‌ ಶಾಲೆಯ ಮಕ್ಕಳು ಪ್ರವಾಸಕ್ಕೆ ತೆರಳುತ್ತಿದ್ದರು. ನರ್ತಿಗೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ ಮರಕ್ಕೆ ಡಿಕ್ಕಿ ಹೊಡೆದಿದೆ. ವಿಚಾರ ತಿಳಿದು ಸ್ಥಳೀಯರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, … Read more