ಶಿವಮೊಗ್ಗದ ಅಪಾರ್ಟ್‌ಮೆಂಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

Police-Jeep-at-Shimoga-General-Image

SHIMOGA, 6 SEPTEMBER 2024 : ಅಪಾರ್ಟ್‌ಮೆಂಟ್‌ (Apartment) ಒಂದಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ದುರ್ವಾಸನೆ ಹಿನ್ನೆಲೆ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗೋಪಾಳ ಬಡಾವಣೆಯ ಅಪಾರ್ಟ್‌ಮೆಂಟ್‌ ಒಂದರ ನಿವಾಸಿ ಸುಧಾ (48) ಮೃತ ಮಹಿಳೆ. ಅವರು ತಂಗಿದ್ದ ಅಪಾರ್ಟ್‌ಮೆಂಟ್ ಮನೆ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದು ಮನೆಯ ಬಾತ್ ರೂಂನಲ್ಲಿ ಮೃತದೇಹ ಪತ್ತೆಯಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೆ ವಾಸಿಸುತ್ತಿದ್ದರು ಮನೆಯಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ … Read more

ಫೋನ್‌ ಬಂತು ಅಂತಾ ಎಚ್ಚರವಾಗಿ ಪಕ್ಕದ ಸೀಟ್‌ ಕಡೆ ಕಣ್ಣು ಹಾಯಿಸಿದ ಇಂಜಿನಿಯರ್‌ಗೆ ಕಾದಿತ್ತು ಆಘಾತ

KSRTC-Bus-Stand-In-Shimoga

SHIMOGA, 5 SEPTEMBER 2024 : KSRTC ಬಸ್ಸಿನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ ಬ್ಯಾಗ್‌ ಕಳ್ಳತನ ಮಾಡಲಾಗಿದೆ. ಅದರಲ್ಲಿ ಲ್ಯಾಪ್‌ ಟಾಪ್‌ ಸೇರಿ ವಿವಿಧ ವಸ್ತುಗಳಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಕಮ್ಮರಡಿ ಮೂಲದ ಇಂಜಿನಿಯರ್‌ ಸುಹೈಬತ್‌ ಉಲ್‌ ಅಸ್ಲಾಮಿಯಾ ಎಂಬುವರು ಬೆಂಗಳೂರಿನಿಂದ ತಮ್ಮೂರಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಎಚ್ಚರವಾದಾಗ ಬ್ಯಾಗ್‌ ನಾಪತ್ತೆ ಸುಹೈಬತ್‌ ಉಲ್‌ ಅಸ್ಲಾಮಿಯಾ ಅವರು ಬೆಂಗಳೂರಿನಿಂದ ಶೃಂಗೇರಿಗೆ ತೆರಳುವ ಬಸ್‌ ಹತ್ತಿದ್ದರು. ಆ ಬಸ್ಸು ಬೆಳಗ್ಗೆ 5 ಗಂಟೆಗೆ ಶಿವಮೊಗ್ಗಕ್ಕೆ ಬಂದು ಶೃಂಗೇರಿ ಕಡೆಗೆ … Read more

ಬೈಕುಗಳು ಡಿಕ್ಕಿ, ಓರ್ವ ಸವಾರ ಸಾವು, ಮತ್ತಿಬ್ಬರು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು

two bikes mishap near sampigehalla in kumsi limits.

SHIMOGA, 3 SEPTEMBER 2024 : ಬೈಕುಗಳು ಡಿಕ್ಕಿಯಾಗಿ (MISHAP) ಗಂಭೀರ ಗಾಯಗೊಂಡಿದ್ದ ಓರ್ವ ಸವಾರ ಸಾವನ್ನಪ್ಪಿದ್ದಾನೆ. ಕಲ್ಲುಕೊಪ್ಪ ಸಮೀಪದ ಗುತ್ತಿಹಳ್ಳ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಶಿವಮೊಗ್ಗ ತಾಲೂಕು ಸಂಪಿಗೆಹಳ್ಳದ ಮಂಜುನಾಥ್‌ (27) ಮೃತರು. ಮತ್ತೊಂದು ಬೈಕ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಂಜುನಾಥನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟಿದ್ದಾನೆ. ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಉತ್ತಮ … Read more

ಶಿವಮೊಗ್ಗದಲ್ಲಿ ಉಪನ್ಯಾಸಕ ಅರೆಸ್ಟ್‌, ವಿದ್ಯಾರ್ಥಿನಿ ನೀಡಿದ್ದ ದೂರಿನ ಹಿನ್ನಲೆ ಬಂಧನ, ಕಾರಣವೇನು?

women-police-station-general-image.

DAM LEVEL, 3 SEPTEMBER 2024 : ಮದುವೆ ಆಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೆಸಗಿದ ಆರೋಪ ಸಂಬಂಧ ಕಾಲೇಜು ಒಂದರ ಉಪನ್ಯಾಸಕನನ್ನು (LECTURER) ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಪನ್ಯಾಸಕ ಪುನೀತ್ ಬಂಧಿತ. ಕಾಲೇಜು ಒಂದರಲ್ಲಿ ಉಪನ್ಯಾಸಕನಾಗಿರುವ ಪುನೀತ್‌ಗೆ ಬಸ್‌ನಲ್ಲಿ ಹೋಗುವಾಗ ಶಿವಮೊಗ್ಗದ 19 ವರ್ಷದ ವಿದ್ಯಾರ್ಥಿನಿ ಪರಿಚಯವಾಗಿದ್ದಳು. ಪಠ್ಯದಲ್ಲಿ ಅರ್ಥವಾಗದ ವಿಷಯಗಳನ್ನು ಹೇಳಿಕೊಡುವುದಾಗಿ ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಶಿವಮೊಗ್ಗ … Read more

ಬಡ್ಡಿ ದಂಧೆ, ಸಾಲಕ್ಕೆ 20 ಪರ್ಸೆಂಟ್‌ ಬಡ್ಡಿ ವಸೂಲಿ ಮಾಡ್ತಿದ್ದ ಮಹಿಳೆ, ದಾಖಲಾಯ್ತು ಕೇಸ್‌

Kote Police station building

SHIMOGA, 2 SEPTEMBER 2024 : ಸಾಲಕ್ಕೆ ಮಿತಿ ಮೀರಿದ ಬಡ್ಡಿ (Interest) ವಸೂಲಿ ಮಾಡಿದ್ದಲ್ಲದೆ ಮತ್ತಷ್ಟು ಹಣ ನೀಡುವಂತೆ ಪೀಡಿಸುತ್ತಿದ್ದ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಖಾಲಿ ಚೆಕ್‌ಗಳಲ್ಲಿ ಇಷ್ಟ ಬಂದಷ್ಟು ಹಣ ನಮೂದು ಮಾಡಿ ಗಂಡ, ಹೆಂಡತಿಯನ್ನು ಜೈಲಿಗೆ ಕಳುಹಿಸುವ ಬೆದರಿಕೆ ಒಡ್ಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಬಾಪೂಜಿನಗರದ ಹಸೀನಾ ಬಾನು ಎಂಬುವವರು ಮಹಿಳೆಯೊಬ್ಬರಿಂದ 1.70 ಲಕ್ಷ ರೂ. ಸಾಲ ಪಡೆದಿದ್ದರು. ಇದಕ್ಕೆ ಸಾಕ್ಷಿಯಾಗಿ ಎರಡು ಬಾಂಡ್‌, ಹಸೀನಾ ಬಾನು ಅವರ ಪತಿಯ ಬ್ಯಾಂಕ್‌ ಖಾತೆಯ … Read more

11 ದಿನ, 11.79 ಲಕ್ಷ ರೂ. ಹಣ, ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ಪ್ರಕರಣ, ಏನಿದು ಕೇಸ್‌?

SMS-Fraud-Shimoga-CEN-Police-Station.

SHIMOGA, 2 SEPTEMBER 2024 : ಹೊಟೇಲ್‌ ರಿವ್ಯು (Review) ಬರೆದು ಹಣ ಸಂಪಾದಿಸಬಹುದು ಎಂದು ನಂಬಿಸಿ ಯುವಕನೊಬ್ಬನಿಗೆ 11.79 ಲಕ್ಷ ರೂ ಹಣ ವಂಚಿಸಲಾಗಿದೆ. ಶಿವಮೊಗ್ಗದ ಯುವಕನಿಗೆ (ಹೆಸರು ಗೌಪ್ಯ) ಟೆಲಿಗ್ರಾಂ ಆಪ್‌ನಲ್ಲಿ ರಿವ್ಯು ಬರೆದು ಹಣ ಸಂಪಾದಿಸುವ ಕುರಿತು ಲಿಂಕ್‌ ಬಂದಿತ್ತು. ಇದನ್ನು ನಂಬಿ ರಿವ್ಯು ಬರೆಯುತ್ತಿದ್ದಂತೆ ಯುವಕನ ಬ್ಯಾಂಕ್‌ ಖಾತೆಗೆ 720 ರೂ. ನಗದು ಬಂದಿತ್ತು. ಆಮೇಲೆ 10 ಸಾವಿರ ರೂ. ಹಣ ಡೆಪಾಸಿಟ್‌ ಮಾಡಿ ಹೊಟೇಲ್‌ ರಿವ್ಯು ಬರೆದರೆ 7230 ರೂ. … Read more

ವಾಟ್ಸಪ್‌ ಸ್ಟೇಟಸ್‌ ಹಾಕಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

010924-jayadeep-missing-in-thirthahalli-tunga-river.

THIRTHAHALLI, 2 SEPTEMBER 2024 : ವಾಟ್ಸಪ್‌ ಸ್ಟೇಟಸ್‌ನಲ್ಲಿ (Status) ಡೆತ್‌ ನೋಟ್‌ ಅಪ್‌ಲೋಡ್‌ ಮಾಡಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ತುಂಗಾ ನದಿಯ ಸ್ಮಶಾನಕಟ್ಟೆ ಬಳಿ ತುಂಗಾ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇಂದಾವರ ಗ್ರಾಮದ ಜಯದೀಪ್‌ (24) ಶನಿವಾರ ನಾಪತ್ತೆಯಾಗಿದ್ದ. ಇದಕ್ಕೂ ಮೊದಲು ಮೂರು ಪುಟದ ಪತ್ರವನ್ನು ವಾಟ್ಸಪ್‌ ಸ್ಟೇಟಸ್‌ಗೆ ಅಪ್‌ಲೋಡ್‌ ಮಾಡಿದ್ದ. ಆತನ ಬೈಕ್‌ ತುಂಗಾ ನದಿ ದಂಡೆ ಮೇಲೆ ಪತ್ತೆಯಾಗಿತ್ತು. ಈ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಆದರೆ ಜಯದೀಪ್‌ … Read more

ವಾಟ್ಸಪ್‌ ಸ್ಟೇಟಸ್‌ ಹಾಕಿ ಯುವಕ ನಾಪತ್ತೆ, ತುಂಗಾ ನದಿ ಬಳಿ ಬೈಕ್‌ ಪತ್ತೆ, ಕುಟುಂಬದವರಲ್ಲಿ ಆತಂಕ

010924-jayadeep-missing-in-thirthahalli-tunga-river.

THIRTHAHALLI, 1 SEPTEMBER 2024 : ಯುವಕನೊಬ್ಬ (youth) ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದಾನೆ. ಇದಕ್ಕು ಮೊದಲು ಆತ ಹಾಕಿರುವ ವಾಟ್ಸಪ್‌ ಸ್ಟೇಟಸ್‌ ಕುಟುಂಬದವರು, ಸ್ನೇಹಿತರಲ್ಲಿ ಆತಂಕ ಮೂಡಿಸಿದೆ. ತೀರ್ಥಹಳ್ಳಿಯ ತುಂಗಾ ನದಿ ಸಮೀಪ ಆತನ ಬೈಕ್‌ ಪತ್ತೆಯಾಗಿದೆ. ಹಾಗಾಗಿ ಯುವಕ ಹೊಳೆಗೆ ಜಿಗಿದಿರುವ ಶಂಕೆಯಲ್ಲಿ ಶೋಧ ಕಾರ್ಯ ನಡೆಸಲಾಯಿತು. ಇಂದಾವರ ನಿವಾಸಿ ಜಯದೀಪ (24) ನಾಪತ್ತೆಯಾಗಿದ್ದಾನೆ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.   ಸದ್ಯ ಜಯದೀಪ್‌ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇನ್ನೊಂದೆಡೆ ಆನ್‌ಲೈನ್‌ ಟ್ರೇಡಿಂಗ್‌ ಕುರಿತು ಎಚ್ಚರ … Read more

ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿ ಸಾವು – 5 ಫಟಾಫಟ್‌ ಅಪರಾಧ ಸುದ್ದಿ

Crime-News-General-Image

FATAFAT NEWS, 31 AUGUST 2024 ಇದನ್ನೂ ಓದಿ ⇒ ಶಿವಮೊಗ್ಗ ಜೈಲಿನಲ್ಲಿ ಕೈದಿಗಳ ಬ್ಯಾರೆಕ್‌ನಲ್ಲಿ ಮೊಬೈಲ್‌ ಚಾರ್ಜರ್‌, ಚಿಲುಮೆ, ಬೀಡಿ, ಸಿಗರೇಟ್‌..!

ಶಿವಮೊಗ್ಗದ ವಾಹನ ಸವಾರರಿಗೆ 10 ದಿನದ ಗಡುವು, ತಪ್ಪಿದರೆ ದಂಡ ಫಿಕ್ಸ್‌, ಎಸ್‌ಪಿ ಹೇಳಿದ್ದೇನು?

Shimoga-SP-Mithun-Kumar-IPS

SHIMOGA, 31 AUGUST 2024 : ವಾಹನಗಳ ಇನ್ಷುರೆನ್ಸ್‌ (Insurance) ವಾಯಿದೆ ಮುಗಿದ್ದರೆ ತಕ್ಷಣ ರಿನಿವಲ್‌ ಮಾಡಿಸಿಕೊಳ್ಳಿ. ಸೆ.10ರ ನಂತರ ಇನ್ಷುರೆನ್ಸ್‌ ತಪಾಸಣೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಈ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮಿಥುನ್‌ ಕುಮಾರ್‌, ಕಳೆದ ಎರಡ್ಮೂರು ವರ್ಷದಲ್ಲಿ ಅಪಘಾತದಲ್ಲಿ ಮೃತರಾದ ಹಲವರ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ವಾಹನಗಳ ಇನ್ಷುರೆನ್ಸ್‌ ರಿನಿವಲ್‌ ಮಾಡಿಸದೆ ಇರುವುದು ಇದಕ್ಕೆ ಕಾರಣ. ಆದ್ದರಿಂದ ವಾಹನ ಸವಾರರು ಇನ್ಷುರೆನ್ಸ್‌ ರಿನಿವಲ್‌ ಮಾಡಿಸಬೇಕು. … Read more