ಒಂದೇ ರೀತಿಯ ವಂಚನೆ, ಶಿವಮೊಗ್ಗ ಜಿಲ್ಲೆಯ ಇಬ್ಬರು ಕಳೆದುಕೊಂಡರು ಲಕ್ಷ ಲಕ್ಷ ಹಣ, ಆಗಿದ್ದೇನು?

Online-Fraud-Case-image

ಶಿವಮೊಗ್ಗ: ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಆನ್‌ಲೈನ್ ಮೂಲಕ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. LF Work ಎಂಬ ಕಂಪನಿಯ ಹೆಸರಿನಲ್ಲಿ ಈ ವಂಚನೆ ನಡೆದಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಪ್ರಕರಣ 1 ವ್ಯಕ್ತಿಯೊಬ್ಬರಿಗೆ ವಾಟ್ಸ್‌ಆಪ್ ಮೂಲಕ ಸಂಪರ್ಕಿಸಿದ ವಂಚಕರು, LF Work ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಹಂತಹಂತವಾಗಿ ಒಟ್ಟು ₹6,99,310 … Read more

ದಿಢೀರ್‌ ಕಟ್‌ ಆಯ್ತು ಜಿಯೋ ಸಿಗ್ನಲ್‌, ಟವರ್‌ ಬಳಿ ಹೋದ ಸಿಬ್ಬಂದಿಗೆ ಕಾದಿತ್ತು ಶಾಕ್

Police-Jeep-at-Shimoga-General-Image

ಶಿವಮೊಗ್ಗ: ಶ್ರೀರಾಂಪುರ ಗ್ರಾಮದ ರಿಲಯನ್ಸ್ ಜಿಯೋ ಟವರ್‌ಗೆ (Jio tower) ಅಳವಡಿಸಿದ್ದ ಲೀಥಿಯಂ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. 4 ಬ್ಯಾಟರಿಗಳು ಕಳುವಾಗಿದ್ದು ಅವುಗಳ ಮೌಲ್ಯ ₹3,36,088 ಎಂದು ಅಂದಾಜಿಸಲಾಗಿದೆ. ಶ್ರೀರಾಂಪುರದಲ್ಲಿ ಜಮೀನಿನಲ್ಲಿ ಟವರ್ ಅಳವಡಿಸಲಾಗಿದೆ. ಅದರ ಕಾರ್ಯನಿರ್ವಹಣೆಗಾಗಿ ಒಟ್ಟು 6 ಬ್ಯಾಟರಿಗಳನ್ನು ಇರಿಸಲಾಗಿತ್ತು. ಟವರ್‌ನ ಸಿಗ್ನಲ್ ಸ್ಥಗಿತಗೊಂಡ ಬಗ್ಗೆ ಅಲಾರಂ ಬಂದಿತ್ತು. ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಒಟ್ಟು 6 ಬ್ಯಾಟರಿಗಳ ಪೈಕಿ 4 ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ … Read more

ಶಿವಮೊಗ್ಗದಲ್ಲಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೈಲಿದ್ದ ರೋಲ್ಡ್‌ ಗೋಲ್ಡ್‌ ಬಳೆ ಕದ್ದೊಯ್ದ ಕಳ್ಳರು..!

Crime-News-General-Image

ಶಿವಮೊಗ್ಗ: ನಗರದ ಗೋಪಾಲ ಬಡಾವಣೆಯ ಕೆಹೆಚ್‌ಬಿ ಕಾಲೋನಿಯಲ್ಲಿ ಒಂಟಿ ವೃದ್ಧೆಯನ್ನು ಕಟ್ಟಿ ಹಾಕಿ ಅವರ ಕೈಯಲ್ಲಿದ್ದ ಬಳೆಗಳನ್ನು ದೋಚಿರುವ (Shocking robbery) ಘಟನೆ ನಡೆದಿದೆ. ಗೋಪಾಲ ಬಡಾವಣೆಯ ನಿವಾಸಿ ಶಿವಲಿಂಗಮ್ಮ (73) ಎಂಬುವವರ ಕೈಯಲ್ಲಿದ್ದ ಬೆಳೆಗಳನ್ನು ದರೋಡೆ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಒಳನುಗ್ಗಿದ ಇಬ್ಬರು ಅಪರಿಚಿತ ಯುವಕರು ಈ ದರೋಡೆ ಎಸಗಿದ್ದಾರೆ. ಶಿವಲಿಂಗಮ್ಮ ಅವರ ಮಗ, ಸೊಸೆ ಮತ್ತು ಮೊಮ್ಮಗ ಕೆಲಸಕ್ಕೆಂದು ಹೋಗಿದ್ದರು. ಬೆಳಿಗ್ಗೆ 11.30ರ ಹೊತ್ತಿಗೆ ಶಿವಲಿಂಗಮ್ಮ ಅವರು ಮಹಡಿಯ ಮೇಲೆ … Read more

BREAKING NEWS – ಶಿವಮೊಗ್ಗದ ಠಾಣೆಯಲ್ಲೇ ನೇಣು ಬಿಗಿದುಕೊಂಡ ಪೊಲೀಸ್‌ ಸಿಬ್ಬಂದಿ

080126 Police succumbed in the traffic station

ಶಿವಮೊಗ್ಗ: ದೊಡ್ಡಪೇಟೆ ಠಾಣೆ ಪಕ್ಕದಲ್ಲಿರುವ ಪಶ್ಚಿಮ ಸಂಚಾರ ಠಾಣೆಯಲ್ಲಿ ಪೊಲೀಸ್‌ (Police) ಹೆಡ್‌ ಕನ್‌ಸ್ಟೇಬಲ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ರಾತ್ರಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ » ಕೈದಿ ಭೇಟಿಗೆ ಬಂದವರೆ ಅರೆಸ್ಟ್‌, ಒಂದು ತಿಂಗಳ ಅಂತರದಲ್ಲಿ ಇದು ಮೂರನೇ ಕೇಸ್‌, ಆಗಿದ್ದೇನು? ಹೆಡ್‌ ಕಾನ್‌ಸ್ಟೇಬಲ್‌ ಮೊಹಮದ್‌ ಝಕ್ರಿಯ (55) ಅವರು ನೇಣು ಬಿಗಿದುಕೊಂಡಿದ್ದಾರೆ. ಕಳೆದ ಕೆಲವು ದಿನದಿಂದ ಮೊಹಮದ್‌ ಝಕ್ರಿಯ ಅವರು ರಜೆ ತೆಗೆದುಕೊಂಡಿದ್ದರು. ಈಗ ಮೂರು ದಿನದ ಹಿಂದಷ್ಟೆ ಡ್ಯೂಟಿಗೆ … Read more

ಕೈದಿ ಭೇಟಿಗೆ ಬಂದವರೆ ಅರೆಸ್ಟ್‌, ಒಂದು ತಿಂಗಳ ಅಂತರದಲ್ಲಿ ಇದು ಮೂರನೇ ಕೇಸ್‌, ಆಗಿದ್ದೇನು?

two-arrested-in-Shivamogga-central-prison.

ಶಿವಮೊಗ್ಗ: ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯ ಭೇಟಿಗೆ ಬಂದಿದ್ದ ಇಬ್ಬರು ಈಗ ಜೈಲುಪಾಲಾಗಿದ್ದಾರೆ. ಜೈಲು ಭದ್ರತೆಯನ್ನು ಕಣ್ಣಿಗೆ ಮಣ್ಣೆರಚಿ (smuggling) ತಮ್ಮ ಕಾರ್ಯ ಸಾಧನೆ ಮಾಡಬಹುದು ಅಂದುಕೊಂಡಿದ್ದವರೆ ಈಗ ಕಂಬಿ ಹಿಂದೆ ಸರಿಯುವಂತಾಗಿದೆ. ಏನಿದು ಕೇಸ್‌? ಶಿವಮೊಗ್ಗದ ಕೇಂದ್ರ ಕಾರಾಗೃಹದ ವಿಚರಣಾಧೀನ ಕೈದಿ ಸೈಯದ್‌ ವಾಸೀಮ್‌ನ ಭೇಟಿಗೆ ಬಂದಿದ್ದ ಮೊಹಮದ್‌ ಅಕ್ಬರ್‌ ಮತ್ತು ಅಜ್ಗರ್‌ ಅಲಿ ಈಗ ಬಂಧಿತರಾಗಿದ್ದಾರೆ. ವಾಸೀಮ್‌ ಭೇಟಿ ವೇಳೆ ಆತನಿಗೆ ಕೊಡಲು ಹಣ್ಣು, ಬಟ್ಟೆಗಳನ್ನು ತಂದಿದ್ದರು. ಜೈಲು ಭದ್ರತಾ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದಾಗ ಗಾಂಜಾ … Read more

ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯ ಖಾಸಗಿ ಫೋಟೊ ಅಪ್‌ಲೋಡ್, ಡಿಲೀಟ್‌ ಮಾಡಲು ಹಣಕ್ಕೆ ಡಿಮಾಂಡ್‌

Instagram-Cyber-Crime-Shimoga-Station.

ಶಿವಮೊಗ್ಗ: ಮಹಿಳೆಯೊಬ್ಬರ ಖಾಸಗಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿ, ಅವುಗಳನ್ನು ಡಿಲೀಟ್ ಮಾಡಲು ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಮಹಿಳೆಗೆ ಕಳೆದ ಎರಡು ವರ್ಷಗಳಿಂದ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಇಬ್ಬರು ಒಟ್ಟಿಗೆ ಇದ್ದ ಸಂದರ್ಭ ಆ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಮಹಿಳೆಯ ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದ. ನಂತರದ ಇಬ್ಬರ ನಡುವೆ ಜಗಳವಾಗಿದ್ದು, ಮಹಿಳೆಯು ಆತನಿಂದ ದೂರಾಗಿದ್ದರು. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೂರುದಾರರ ಖಾಸಗಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ವಾಟ್ಸ್‌ಆಪ್ ಮೂಲಕ ಮಹಿಳೆಗೆ ಫೋಟೋಗಳನ್ನು … Read more

ಶಿವಮೊಗ್ಗದ ಬೈಕ್‌ ಮಾಲೀಕರೆ ಎಚ್ಚರ, ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

Doddapete-Police-Station-General-Image.

ಶಿವಮೊಗ್ಗ:‌ ನಗರದ ಎನ್.ಟಿ ರಸ್ತೆಯಲ್ಲಿರುವ ಅರಸು ವೆಜ್ ಹೋಟೆಲ್ ಪಕ್ಕದ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದ ಹೀರೊ ಸ್ಪ್ಲೆಂಡರ್ ಬೈಕ್ (Splendor bike) ಕಳ್ಳತನವಾಗಿದೆ. ಆನಂದರಾವ್ ಬಡಾವಣೆಯ ಇಮ್ರಾನ್ ಬೇಗ್ ಎಂಬುವವರಿಗೆ ಸೇರಿದ ಬೈಕ್‌ ಕಳುವಾಗಿದೆ. ಇದನ್ನೂ ಓದಿ »  ₹1.20 ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ? ಕೆಲಸದ ನಿಮಿತ್ತ ತಮ್ಮ ಬೈಕನ್ನು ಅರಸು ವೆಜ್ ಹೋಟೆಲ್ ಪಕ್ಕದ ಅಂಗಡಿಯ ಮುಂದೆ ನಿಲ್ಲಿಸಿದ್ದರು. ಸ್ನೇಹಿತನ ಬೈಕ್‌ನಲ್ಲಿ ಮಾಚೇನಹಳ್ಳಿಗೆ ಹೋಗಿದ್ದರು. ನಂತರ ರಾತ್ರಿ ವಾಪಸ್ ಬಂದು … Read more

ಕೆಲಸ ಮುಗಿಸಿ ವಾಜಪೇಯಿ ಲೇಔಟ್‌ಗೆ ಹಿಂತಿರುಗಿದ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

crime name image

ಶಿವಮೊಗ್ಗ: ವಾಜಪೇಯಿ ಲೇಔಟ್ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ (Passion Bike) ಒಂದನ್ನು ಕಳ್ಳತನ ಮಾಡಲಾಗಿದೆ. ನೂರುಲ್ಲಾ ಎಂಬುವವರು ಕೆಲಸದ ನಿಮಿತ್ತ ತಮ್ಮ ಬೈಕನ್ನು ಮಧ್ಯಾಹ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ, ಸ್ನೇಹಿತನ ವಾಹನದಲ್ಲಿ ಶಿವಮೊಗ್ಗ ನಗರಕ್ಕೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಅವರು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. 2015ರ ಮಾಡೆಲ್‌ನ ಕಪ್ಪು ಮತ್ತು ಬಿಳಿ ಬಣ್ಣದ ಹಿರೋ ಪ್ಯಾಶನ್ ಪ್ರೋ ಬೈಕ್‌ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ … Read more

ಶಿವಮೊಗ್ಗದಲ್ಲಿ ತಳ್ಳುಗಾಡಿಯನ್ನೂ ಬಿಡದ ಖದೀಮರು, ಎಲ್ಲಿ? ಆಗಿದ್ದೇನು?

Tunga-Nagara-Police-Station-Shimoga

ಶಿವಮೊಗ್ಗ: ಸಾಗರ ರಸ್ತೆಯ ಮಲ್ಲಿಗೇನಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತಳ್ಳುವ ಗಾಡಿಯೊಂದನ್ನು (Pushcart) ಕಳ್ಳರು ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದ ರೈಸ್‌ ಮಿಲ್‌ ಮಾಲೀಕನಿಗೆ ಹಾಸನದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ, ಆಗಿದ್ದೇನು? ರಾಘವೇಂದ್ರ ನಾಯ್ಕ ಎಂಬುವವರು ವ್ಯಾಪಾರ ಮುಗಿಸಿ ರಾತ್ರಿ ಎಂದಿನಂತೆ ಗಾಡಿಯನ್ನು ನಿಲ್ಲಿಸಿ ಮನೆಗೆ ಹೋಗಿದ್ದರು. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಗಾಡಿಯು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ತಳ್ಳುವ ಗಾಡಿಯು ಕಬ್ಬಿಣದ ಚಾವಣಿ ಮತ್ತು ಬೈಕ್ ಚಕ್ರಗಳನ್ನು ಹೊಂದಿತ್ತು ಎಂದು … Read more

ಶಿವಮೊಗ್ಗದಲ್ಲಿ ಟ್ರಾಫಿಕ್‌ ಫೈನ್‌ ಎಷ್ಟಿದೆ ಅಂತಾ ನೋಡಲು ಹೋಗಿ ₹11.25 ಲಕ್ಷ ಕಳೆದುಕೊಂಡ ವ್ಯಕ್ತಿ

Crime-News-General-Image

ಶಿವಮೊಗ್ಗ:‌ ವ್ಯಕ್ತಿಯೊಬ್ಬರು ತಮ್ಮ ವಾಹನದ ಟ್ರಾಫಿಕ್ ಫೈನ್ (traffic fines) ಎಷ್ಟಿದೆ ಎಂದು ನೋಡಲು ಹೋಗಿ ಬರೋಬ್ಬರಿ ₹11.25 ಲಕ್ಷ ಹಣ ಕಳೆದುಕೊಂಡಿದ್ದಾರೆ. ಶಿವಮೊಗ್ಗದ ವ್ಯಕ್ತಿಯೊಬ್ಬರ (ಹೆಸರು ಗೌಪ್ಯ) ಮೊಬೈಲ್‌ಗೆ ಅಪರಿಚಿತರು Traffic challan.Apk ಎಂಬ ಫೈಲ್ ಕಳುಹಿಸಿದ್ದರು. ಇದನ್ನೂ ಓದಿ » ಶಿವಮೊಗ್ಗದ ರೈಸ್‌ ಮಿಲ್‌ ಮಾಲೀಕನಿಗೆ ಹಾಸನದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ, ಆಗಿದ್ದೇನು? ಅದನ್ನು ಇನ್‌ಸ್ಟಾಲ್ ಮಾಡಿದಾಗ ವಾಹನದ ನಂಬರ್ ಕೇಳುವ ಪೇಜ್ ಓಪನ್ ಆಗಿದೆ. ಆದರೆ ಅದರಲ್ಲಿ ಯಾವುದೇ ಮಾಹಿತಿ ಕಾಣಿಸದ ಕಾರಣ … Read more