ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ, ಮಸ್ಕ್‌ ಸಂಸ್ಥೆಗೆ ಪರವಾನಗಿ

Tech-News-update.webp

ನವದೆಹಲಿ: ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಸೇವೆಗಳನ್ನು ಒದಗಿಸಲು ಪರವಾನಗಿ ದೊರೆತಿದೆ. ದೂರಸಂಪರ್ಕ ಇಲಾಖೆಯಿಂದ (DoT) ಈ ಪರವಾನಗಿ ಪಡೆದ ಮೂರನೇ ಕಂಪನಿ ಸ್ಟಾರ್‌ಲಿಂಕ್ ಆಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪ್ರಾಯೋಗಿಕ ತರಂಗಾಂತರವನ್ನು ಅರ್ಜಿ ಸಲ್ಲಿಸಿದ 15ರಿಂದ 20 ದಿನಗಳ ಒಳಗಾಗಿ ಹಂಚಿಕೆ ಮಾಡಲಾಗುವುದು ಎಂದು ದೂರಸಂಪರ್ಕ ಇಲಾಖೆ ಹೇಳಿದೆ. ಆದರೆ, ಈ ಮಹತ್ವದ ಪರವಾನಗಿ ಹಂಚಿಕೆ ಕುರಿತು ಸ್ಟಾರ್‌ಲಿಂಕ್‌ ಅಥವಾ ದೂರಸಂಪರ್ಕ ಇಲಾಖೆ ಯಾವುದೇ … Read more

ನಂದಿನಿ ಹಾಲಿಗೆ ದೆಹಲಿ ಜನ ಫಿದಾ, ಮೊದಲ ದಿನ ಎಷ್ಟಿತ್ತು ವ್ಯಾಪಾರ?

Nandini-Milk-logo-general-image

SHIVAMOGGA LIVE NEWS, 3 DECEMBER 2024 ನವದೆಹಲಿ : ಮಾರುಕಟ್ಟೆಗೆ ಲಗ್ಗೆ ಇಟ್ಟ ಮೊದಲ ದಿನವೇ ನಂದಿನಿ ಹಾಲಿಗೆ (Milk) ದೆಹಲಿ ಜನ ಉತ್ತಮವಾಗಿ ಸ್ಪಂದಿಸಿದ್ದಾರೆ. ನವದೆಹಲಿಯಲ್ಲಿ ಮೊದಲ ದಿನವೆ 10 ಸಾವಿರ ಲೀಟರ್‌ ಹಾಲು ಮಾರಾಟವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ನಿತ್ಯ 70 ಸಾವಿರ ಲೀಟರ್‌ ಹಾಲು ಮತ್ತು ಮೊಸರು ಮಾರಾಟದ ಗುರಿ ಹೊಂದಲಾಗಿದೆ ಎಂದು ಸರ್ಕಾರ ತಿಳಿಸಿದೆ. ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌) ಇತ್ತೀಚೆಗೆ ದೆಹಲಿಯಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ … Read more

ಕಳೆನಾಶಕ ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಸಾವು

R-Lakshman-Former-Nagarasabhe-Member.

SHIMOGA NEWS, 24 NOVEMBER 2024 : ಕಳೆನಾಶಕ (Pesticide) ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಆರ್‌.ಲಕ್ಷ್ಮಣ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶುಕ್ರವಾರ ಆರ್.ಲಕ್ಷ್ಮಣ್‌, ಗೋಪಾಳದ ಪಾರ್ಕ್‌ ಒಂದರಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೊನೆಗೆ ಲಕ್ಷ್ಮಣ್‌ ಅವರೆ ಆಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಲಕ್ಷ್ಮಣ್‌ ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮಣ್‌ ಅವರು ಹೊಸಮನೆ ನಿವಾಸಿ. ಈ … Read more

ಇನ್ಮುಂದೆ ದೆಹಲಿಯಲ್ಲು ಸಿಗುತ್ತೆ ನಂದಿನಿ ಹಾಲು

Nandini-Milk-logo-general-image

NATIONAL NEWS : ಇನ್ಮುಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯು ನಂದಿನಿ (Nandini) ಉತ್ಪನ್ನಗಳು ದೊರೆಯಲಿದೆ. ದೆಹಲಿಯಲ್ಲಿ ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಶ್ರೇಣಿಯ ಹಾಲಿನ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡಿ ಮಾರಾಟಕ್ಕೆ ಚಾಲನೆ ನೀಡಿದರು. ದೆಹಲಿಯಲ್ಲಿ ಪ್ರತಿದಿನ 1 ಲಕ್ಷ ಲೀಟರ್‌ ಹಾಲು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಇನ್ನು ಆರು ತಿಂಗಳ ಒಳಗೆ 2.5 ಲಕ್ಷ ಲೀಟರ್‌ ಹಾಲು ಮಾರಾಟಕ್ಕೆ ಯೋಜಿಸಲಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ವಿತರಕರ ಜೊತೆಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ … Read more

ಚಂಡಮಾರುತ, ದಕ್ಷಿಣ ಭಾರತದ ವಿವಿಧಡೆ ಭಾರಿ ಮಳೆ ಸಾಧ್ಯತೆ

rain in shimoga

RAIN NEWS : ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸೃಷ್ಟಿಯಾಗಿದೆ. ತಮಿಳುನಾಡು, ಶ್ರೀಲಂಕ ಭಾಗದಲ್ಲಿ ಚಂಡಮಾರುತ ಹಾದು ಹೋಗಲಿದೆ. ಹಾಗಾಗಿ ಇನ್ನು 48 ಗಂಟೆಯಲ್ಲಿ ದಕ್ಷಿಣ ಭಾರತದ ವಿವಿಧೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರು, ತುಮಕೂರು, ಕೋಲಾರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ » ಶಿವಮೊಗ್ಗಕ್ಕೆ ಮತ್ತೊಂದು ಕಾರು ಶೋ ರೂಂ, ಮಲೆನಾಡಿಗೆ ಇಸೂಝು ಎಂಟ್ರಿ

ಗುಂಡಿನ ಚಕಮಕಿ, ಓರ್ವ ಯೋಧ ಹುತಾತ್ಮ, ಮೂವರಿಗೆ ಗಾಯ

SUPER-FAST-INDIA-

INDIA NEWS : ಜಮ್ಮು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಪ್ಯಾರಾ ಕಮಾಂಡೋ (Army) ನೈಬ್‌ ಸುಬೇದಾರ್‌ ರಾಕೇಶ್‌ ಕುಮಾರ್‌ ವೀರ ಹುತಾತ್ಮರಾಗಿದ್ದಾರೆ. ಮೂವರು ಯೋಧರು ಗಾಯಗೊಂಡಿದ್ದಾರೆ. ಕಿಶ್ತ್ವಾರ್‌ ಜಿಲ್ಲೆಯಲ್ಲಿ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆದಾಗ ಗುಂಡು ತಗುಲಿ ನೈನ್‌ ಸುಬೇದಾರ್‌ ರಾಕೇಶ್‌ ಕುಮಾರ್‌ ಮರಣವನ್ನಪ್ಪಿದ್ದಾರೆ. ಉಗ್ರರು ಗ್ರಾಮ ರಕ್ಷಣ ಪಡೆಯ ಇಬ್ಬರು ಗಾರ್ಡ್‌ಗಳನ್ನು ಹತ್ಯೆಗೈದ ಹಿನ್ನೆಲೆ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ … Read more

ಸುಪ್ರೀಂ ಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿ, ಸೋಮವಾರ ಪ್ರಮಾಣವಚನ

Judgement-court

INDIA NEWS : ಸುಪ್ರೀಂ ಕೋರ್ಟ್‌ನ (Court) 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸಂಜೀವ್‌ ಖನ್ನಾ ಅವರು ಸೋಮವಾರ ಬೆಳಗ್ಗೆ 10 ಗಂಟೆಗೆ ಪದಗ್ರಹಣ ಮಾಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಅವರು ಭಾನುವಾರ ನಿವೃತ್ತರಾಗಿದ್ದಾರೆ. ನ್ಯಾ. ಸಂಜೀವ್‌ ಖನ್ನಾ 1983ರಲ್ಲಿ ದೆಹಲಿಯಲ್ಲಿ ವಕೀಲರಾಗಿ ಕರ್ತವ್ಯ ಆರಂಭಿಸಿದ್ದರು. ಆ ಬಳಿಕ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ದಿಢೀರ್‌ ಕಾರ್ಯಾಚರಣೆ, 20 ಆಟೋಗಳು ಸೀಜ್‌, 100 ಕೇಸ್‌

ಗುಜರಿ ವಸ್ತುಗಳಿಂದ ಕೇಂದ್ರದ ಬೊಕ್ಕಸಕ್ಕೆ 2 ಸಾವಿರ ಕೋಟಿ

SUPER-FAST-INDIA-

INDIA NEWS : ನಿರುಪಯುಕ್ತ ವಸ್ತುಗಳನ್ನು ಗುಜರಿಗೆ ಹಾಕುವ ಮೂಲಕ ಕೇಂದ್ರ ಸರ್ಕಾರ 2,364 ಕೋಟಿ ರೂ. (Crore) ಆದಾಯ ಗಳಿಸಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಟ್ವೀಟ್‌ ಮಾಡಿದ್ದಾರೆ. ದೇಶಾದ್ಯಂತ ಕೇಂದ್ರ ಸರ್ಕಾರದ ಕಚೇರಿಗಳು ಸೇರಿದಂತೆ 5.97 ಲಕ್ಷ ಸ್ಥಳಗಳಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಗಿದೆ. ನಿರುಪಯುಕ್ತ ವಸ್ತುಗಳನ್ನು ಗುಜರಿಗೆ ಹಾಕಲಾಗಿದೆ. ಅಕ್ಟೋಬರ್‌ ತಿಂಗಳಲ್ಲಿಯೇ 650 ಕೋಟಿ ರೂ. ಆದಾಯ ಗಳಿಸಲಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ … Read more

ಭಾರತದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ

SUPER-FAST-INDIA-

BUSINESS NEWS : ದೇಶದಲ್ಲಿ ಕೋಟ್ಯಾಧಿಪತಿಗಳ (Crorepati) ಸಂಖ್ಯೆ ಭಾರಿ ಏರಿಕೆಯಾಗಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಕಳೆದ ಮೂರು ವರ್ಷದಲ್ಲಿ ಒಂದು ಲಕ್ಷ ಮಂದಿ ಭಾರತದಲ್ಲಿ ಕೋಟಿ ರೂ. ಆದಾಯ ಘೋಷಿಸಿ ತೆರಿಗೆ ಪಾವತಿಸುತ್ತಿದ್ದಾರೆ. 2013-14ರಲ್ಲಿ 40 ಸಾವಿರ ಮಂದಿ ಕೋಟ್ಯಾಧಿಪತಿಗಳಿದ್ದರು. 2019-20ರಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ 1.20 ಲಕ್ಷಕ್ಕೆ ಏರಿಕೆಯಾಗಿತ್ತು. ಪ್ರಸ್ತುತ 2.20 ಲಕ್ಷ ಮಂದಿ ಒಂದು ಕೋಟಿ ರೂ.ಗಿಂತಲು ಹೆಚ್ಚು ಆದಾಯ ಹೊಂದಿರುವುದಾಗಿ ಘೋಷಿಸಿ ತೆರಿಗೆ ಪಾವತಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ … Read more

ವಾಟ್ಸಪ್‌ ಗ್ರೂಪ್‌ ಅಡ್ಮಿನ್‌ಗಳಿಗೆ ಲೈಸೆನ್ಸ್‌ ಕಡ್ಡಾಯ, ಬೆಚ್ಚಿಬೀಳಿಸಿದ ಜಿಂಬಾಬ್ವೆ ಸರ್ಕಾರದ ಆದೇಶ

Whatsapp-General-Image

WORLD NEWS : ವಾಟ್ಸಪ್‌ ಗ್ರೂಪ್‌ ಅಡ್ಮಿನ್‌ಗಳು (Admin) ಕಡ್ಡಾಯವಾಗಿ ಲೈಸೆನ್ಸ್‌ ಪಡೆಯಬೇಕು ಎಂದು ಜಿಂಬಾಬ್ವೆ ದೇಶ ಆದೇಶಿಸಿದೆ. ಲೈಸೆನ್ಸ್‌ಗೆ 50 ಡಾಲರ್‌ನಿಂದ 2500 ಅಮೆರಿಕನ್‌ ಡಾಲರ್‌ವರೆಗೆ ದರ ನಿಗದಿಪಡಿಸಿದೆ. ಇನ್ನು, ಪ್ರತಿ ವಾಟ್ಸಪ್‌ ಗ್ರೂಪ್‌ಗೆ ಡೇಟಾ ಪ್ರೊಟೆಕ್ಷನ್‌ ಆಫೀಸರ್‌ ನೇಮಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬೆಳವಣಿಗೆ ದೇಶ, ವಿದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದು ವಾಕ್‌ ಸ್ವಾತಂತ್ರ್ಯದ ದಮನಕಾರಿ ನೀತಿ ಎಂದು ಟೀಕೆಗಳು ಕೇಳಿ ಬಂದಿವೆ. ಇದನ್ನೂ … Read more