ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಶಿವಮೊಗ್ಗದ ಫೋಟೊಗ್ರಾಫರ್‌ ಸಾವು, ಮೂವರಿಗೆ ಗಾಯ

Car-and-Truck-incident-shimoga-photographer-succumbed.

ಚಳ್ಳಕೆರೆ: ರಸ್ತೆ ಬದಿ ನಿಂತಿದ್ದ ಟಿಪ್ಪರ್‌ ಲಾರಿಗೆ ಹಿಂಬದಿಯಿಂದ ಕಾರು ಡಕ್ಕಿಯಾಗಿ ಶಿವಮೊಗ್ಗದ ಫೋಟೊಗ್ರಾಫರ್‌ ಸಾವನ್ನಪ್ಪಿದ್ದಾರೆ. ಉಳಿದ ಮೂವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಡರಾತ್ರಿ ಘಟನೆ ಸಂಭವಿಸಿದೆ. ಶಿವಮೊಗ್ಗದ ಎಲ್‌ಬಿಎಸ್‌ ನಗರದ ಫೋಟೊಗ್ರಾಫರ್‌ ಅರ್ಜುನ್‌ (37) ಮೃತ ದುರ್ದೈವಿ. ಶರತ್‌, ನವೀನ್‌ ಮತ್ತು ಬಸವರಾಜು ಎಂಬುವವರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು ಘಟನೆ? ಬಳ್ಳಾರಿಯಲ್ಲಿ ಮದುವೆ ಸಮಾರಂಭದ ಫೋಟೊ ಶೂಟ್‌ಗಾಗಿ ನಾಲ್ವರು ಫೋಟೊಗ್ರಾಫರ್‌ಗಳು ತೆರಳುತ್ತಿದ್ದರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಗಿರಿಯಮ್ಮನಹಳ್ಳಿ ಬಳಿ ಹೈವೇ ರಸ್ತೆಯ … Read more

ಮುರ್ಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋದ ಶಿವಮೊಗ್ಗದ ವ್ಯಕ್ತಿ

KARNATAKA-STATE-NEWS-UPDATE

ಭಟ್ಕಳ: ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಶಿವಮೊಗ್ಗ ಜಿಲ್ಲೆಯ ಪ್ರವಾಸಿಗರೊಬ್ಬರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸುಭಾಷ ದೇವೆಂದ್ರಪ್ಪ (45) ಸಾವಿಗೀಡಾದವರು. ಗುರುವಾರ ಸಂಜೆ ಸ್ನೇಹಿತನೊಂದಿಗೆ ಶಿವಮೊಗ್ಗದಿಂದ ಪ್ರವಾಸಕ್ಕೆ ಬಂದಿದ್ದರು. ಶುಕ್ರವಾರ ಮಧ್ಯಾಹ್ನ ಸಮುದ್ರ ಸ್ನಾನಕ್ಕೆ ಇಳಿದಾಗ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಟ್ಯಾಂಕರ್‌ ಡಿಕ್ಕಿ, ಅರಣ್ಯ ಕಾವಲುಗಾರ ಸಾವು, ಎಲ್ಲಿ? ಹೇಗಾಯ್ತು ಘಟನೆ?

ಶಾಲೆ, ಕಾಲೇಜು ರಜೆ ವಿಚಾರ, ಸಿಎಂ ಕಚೇರಿಯಿಂದ ಸ್ಪಷ್ಟನೆ

VIDHANA-SOUDHA-GENERAL-IMAGE.jpg

ಬೆಂಗಳೂರು: ವೃಕ್ಷಮಾತೆ ನಾಡೋಜ ಸಾಲುಮರದ ತಿಮ್ಮಕ್ಕ ನಿಧನದ ಹಿನ್ನೆಲೆ ಶನಿವಾರ ಸರ್ಕಾರಿ ರಜೆ ನೀಡಲಾಗಿದೆ ಎಂಬ ನಕಲಿ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಉಲ್ಲೇಖವಾಗಿದ್ದ ಪರಿಣಾಮ ಗೊಂದಲ ಉಂಟಾಗಿತ್ತು. ಕೊನೆಗೆ ಮುಖ್ಯಮಂತ್ರಿಯವರ ಕಚೇರಿ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದು ಸ್ಪಷ್ಟಪಡಿಸಿದೆ. ಶನಿವಾರ ಎಂದಿನಂತೆ ಶಾಲಾ, ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಕೆಲಸ ಕಾರ್ಯ ನಿರ್ವಹಿಸಲಿವೆ ಎಂದು ಸಿಎಂ ಕಚೇರಿ ತಿಳಿಸಿದೆ. ಇದನ್ನೂ … Read more

ಶಿವಮೊಗ್ಗದ ಒಂದು ರೈಲ್ವೆ ನಿಲ್ದಾಣ ಸೇರಿ ರಾಜ್ಯದ ನಾಲ್ಕು ನಿಲ್ದಾಣಗಳಿಗೆ ಸಂತರ ಹೆಸರು

Railway-Track-in-Shimoga-station

ಬೆಂಗಳೂರು: ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯ ಸೂರಗೊಂಡನಕೊಪ್ಪ ರೈಲ್ವೆ ನಿಲ್ದಾಣಗಳಿಗೆ ಹೊಸ ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ಪತ್ರ ಬರೆದಿದ್ದಾರೆ. ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ರೈಲು ನಿಲ್ದಾಣ, ಬೆಳಗಾವಿ ನಿಲ್ದಾಣಕ್ಕೆ ಶ್ರೀ ಬಸವ ಮಹಾಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಶ್ರೀ ಚನ್ನಬಸವ ಪಟ್ಟದ್ದೇವರು ಮತ್ತು ಸೂರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಪ್ರಸ್ತಾಪಿಸಿದ್ದಾರೆ. ಸರ್ಕಾರ ಈ ನಿಲ್ದಾಣಗಳಿಗೆ ಸಂತರ … Read more

ಜಾತಿ ಸಮೀಕ್ಷೆ: ಸಮೀಕ್ಷಾದಾರರಿಗೆ ಗೌರವಧನ ಪಾವತಿಗೆ ಅನುದಾನ ಬಿಡುಗಡೆ, ಯಾರಿಗೆ ಎಷ್ಟೆಷ್ಟು ಅನುದಾನ ಸಿಗಲಿದೆ?

VIDHANA-SOUDHA-GENERAL-IMAGE.jpg

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಸಮೀಕ್ಷಾದಾರರಿಗೆ (Census) ಗೌರವಧನ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ₹127.73 ಕೋಟಿ ಅನುದಾನವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿದೆ. ಯಾರಿಗೆ ಎಷ್ಟೆಷ್ಟು ಅನುದಾನ? ಪ್ರತಿ ಸಮೀಕ್ಷಾದಾರರಿಗೆ ₹5000 ನಿಗದಿತ ಮೊತ್ತ. ಜೊತೆಗೆ ಪ್ರತಿ ಮನೆ ಸಮೀಕ್ಷೆಗೆ ಇಂತಿಷ್ಟು ಎಂದು ನಿಗದಿಪಡಿಸಲಾಗಿದೆ. ಒಂದೆರಡು ಸದಸ್ಯರಿರುವ ಮನೆಗಳ ಸಮೀಕ್ಷೆಗೆ ತಲಾ ₹50,  ಮೂರು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಮನೆಗಳ ಸಮೀಕ್ಷೆಗೆ ತಲಾ ₹100 ಪಾವತಿಸುವಂತೆ ತಿಳಿಸಲಾಗಿದೆ. ಮೇಲ್ವಿಚಾರಕರಿಗೆ ನಿಗದಿತ ಮೊತ್ತ ₹10,000 … Read more

ರಾಜ್ಯದಲ್ಲಿ ಮತ್ತಷ್ಟು ತೀವ್ರವಾಗಲಿದೆ ಚಳಿ, ಹವಾಮಾನ ಇಲಾಖೆ ಎಚ್ಚರಿಕೆ ಏನು?

Mist-During-Winter-Near-Mandagadde

ಬೆಂಗಳೂರು: ರಾಜ್ಯದಲ್ಲಿ ಚಳಿಯ (Cold) ತೀವ್ರತೆ ಹೆಚ್ಚಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ 4 ರಿಂದ 6 ಡಿಗ್ರಿ ಸೆಲ್ಸಿಯಸ್‌ ಕುಸಿತವಾಗಿದೆ. ಇದರಿಂದ ಮಧ್ಯರಾತ್ರಿ ಮತ್ತು ಮುಂಜಾನೆ ಥಂಡಿ ಅನುಭವವಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಮುಂಜಾನೆ ದಟ್ಟ ಮಂಜು ಆವರಿಸುತ್ತಿದೆ. ತಂಪಾದ ಗಾಳಿ ಬೀಸುತ್ತಿರುವ ಹಿನ್ನೆಲೆ ಹಗಲಿನಲ್ಲೂ ಚಳಿಯ ಅನುಭವಾಗುತ್ತಿದೆ. ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಈ ತೀವ್ರತೆ ಚಳಿ ಶುರುವಾಗಬೇಕಿತ್ತು. ಈ ಬಾರಿ ವಾಡಿಕೆಗಿಂತ ಮೊದಲೇ ಚಳಿ ಶುರುವಾಗಿದ್ದು, ದಿನೇದಿನೆ ತೀವ್ರತೆ ಹೆಚ್ಚುತ್ತಿದೆ. … Read more

ವಾಹನ ಸವಾರರಿಗೆ ಗುಡ್‌ ನ್ಯೂಸ್‌, ಮತ್ತೆ ದಂಡದ ಮೊತ್ತದಲ್ಲಿ ಶೇ.50ರಷ್ಟು ಡಿಸ್ಕೌಂಟ್‌, ಯಾರಿಗೆಲ್ಲ ಅನ್ವಯ?

Traffic-police-in-Shimoga-city.

ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಕಟ್ಟಬೇಕಿದ್ದ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ (Discount) ನೀಡಿದೆ. ಆದರೆ ಇದಕ್ಕೆ ಷರತ್ತ ವಿಧಿಸಿದೆ. ಆಗಸ್ಟ್‌ 23ರಿಂದ ಸೆಪ್ಟೆಂಬರ್‌ 12ರವರೆಗೆ ರಿಯಾಯತಿ ದರದಲ್ಲಿ ದಂಡ ಪಾವತಿಸಬಹುದಾಗಿದೆ ಎಂದು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶ ಆದೇಶದಲ್ಲಿ ತಿಳಿಸಿದ್ದಾರೆ. ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಷರತ್ತು ವಿಧಿಸಲಾಗಿದೆ. ಇದನ್ನೂ ಓದಿ » ಇಂಟರ್‌ಸಿಟಿ ರೈಲಿನಲ್ಲಿ … Read more

ವಿಧಾನ ಪರಿಷತ್‌ಗೆ ನಾಲ್ವರ ನಾಮನಿರ್ದೇಶನ, ರಾಜ್ಯಪಾಲರಿಗೆ ಪಟ್ಟಿ ರವಾನಿಸಿದ ಸರ್ಕಾರ, ಯಾರೆಲ್ಲರ ಹೆಸರಿದೆ?

VIDHANA-SOUDHA-GENERAL-IMAGE.jpg

ಬೆಂಗಳೂರು: ವಿಧಾನ ಪರಿಷತ್‌ನ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನಗೊಳ್ಳುವವರ (Nominate) ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ರಾಜ್ಯಪಾಲರ ಅನುಮೋದನೆಗಾಗಿ ರಾಜಭವನಕ್ಕೆ ಕಳುಹಿಸಲಾಗಿದೆ. ಆರತಿ ಕೃಷ್ಣ, ರಮೇಶ್‌ ಬಾಬು, ದಿನೇಶ್‌ ಅಮೀನ್‌ಮಟ್ಟು ಮತ್ತು ಡಿ.ಜಿ. ಸಾಗರ್‌ ಅವರ ಹೆಸರನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌, ಪ್ರಕಾಶ್‌ ಕೆ. ರಾಥೋಡ್‌, ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಸಿ.ಪಿ.ಯೋಗೇಶ್ವರ್‌ ಅವರಿಂದ ತೆರವಾದ ಸ್ಥಾನಕ್ಕೆ ಈಗ ನಾಲ್ವರ ಹೆಸರನ್ನು ಶಿಫಾರಸು ಮಾಡಲಾಗಿದೆ. ನಾಮನಿರ್ದೇಶಿತ ಸದಸ್ಯರ ಪರಿಚಯ ಆರತಿ ಕೃಷ್ಣ ಅವರು ಅನಿವಾಸಿ … Read more

ಕೋವಿಡ್‌ಗೆ ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಬಲಿ, ಸೋಂಕಿತರ ಸಂಖ್ಯೆ ಹೆಚ್ಚಳ, ಎಷ್ಟಿವೆ ಸಕ್ರಿಯ ಪ್ರಕರಣ?

Corona-In-Shimoga-Sample-Test-Covid.

ಬೆಂಗಳೂರು: ದಾವಣಗೆರೆಯಲ್ಲಿ ಕೋವಿಡ್ (Covid) ಸೋಂಕಿನಿಂದ 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇವರು ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರೊಂದಿಗೆ, ಪ್ರಸಕ್ತ ವರ್ಷ ರಾಜ್ಯದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 796 ಜನರಲ್ಲಿ ಸೋಂಕು ದೃಢಪಟ್ಟಿದೆ. ಗುರುವಾರ 644 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 66 ಹೊಸ ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ ರಾಜ್ಯದಲ್ಲಿ 451 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಅವರಲ್ಲಿ 446 ಜನರು ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ … Read more

ಮತ್ತೊಬ್ಬ ನಕ್ಸಲ್‌ ಶರಣಾಗತಿ, ಇವತ್ತು ಕೋಟೆಹೊಂಡ ರವಿ ಮುಖ್ಯವಾಹಿನಿಗೆ

naxal-kotehonda-ravi-surrenders-at-sringeri

SHIVAMOGGA LIVE NEWS, 1 FEBRUARY 2025 ಶೃಂಗೇರಿ : ನಕ್ಸಲ್‌ ಚಳವಳಿಯಲ್ಲಿ (Naxal) ಸಕ್ರಿಯವಾಗಿದ್ದ ಕೋಟೆಹೊಂಡ ರವಿ ಅಲಿಯಾಸ್‌ ರವೀಂದ್ರ ನೆಮ್ಮಾರ್‌ ಕಳೆದ ರಾತ್ರಿ ಶೃಂಗೇರಿಯಲ್ಲಿ ಶರಣಾಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತದ ಎದುರು ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೆ ಆರು ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಾಣಾಗಿದ್ದರು. ಆದರೆ ಕೋಟೆಹೊಂಡ ರವಿ ಮಾತ್ರ ಭೂಗತವಾಗಿದ್ದರು. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಕಳೆದ ರಾತ್ರಿ ಶೃಂಗೇರಿಯ ಅರಣ್ಯ ಐಬಿಯಲ್ಲಿ ಕೋಟೆಹೊಂಡ … Read more