ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?

BY-Vijayendra-Protest-in-Shikaripura

ಶಿಕಾರಿಪುರ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭ 50,000 ರೈತರೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ (Gherao) ಹಾಕಲಾಗುವುದು. ಆ ಮೂಲಕ ರೈತ (Farmers) ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶಿಕಾರಿಪುರದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ (Protest) ಪಾಲ್ಗೊಂಡಿದ್ದ ಬಿ.ವೈ.ವಿಜಯೇಂದ್ರ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿಯಲ್ಲಿ ಪಾಲ್ಗೊಂಡು ಗಮನಸೆಳೆದರು. ವಿಜಯೇಂದ್ರ ಏನೇನು ಹೇಳಿದರು? ಪಾಯಿಂಟ್‌ 1: ರೈತರ ಹಿತಕಾಯುವುದಾಗಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು … Read more

ಹೊಲ, ಗದ್ದೆಯಲ್ಲಿ ಕಾಡಾನೆಗಳ ಸಂಚಾರ, ರೈತರಲ್ಲಿ ಅತಂಕ, ಅರಣ್ಯಾಧಿಕಾರಿಗಳ ಗಸ್ತು ಹೆಚ್ಚಳ

wild-elephants-at-Soraba-ulavi-hobli

ಸೊರಬ: ಕಳೆದ ಎರಡು ದಿನಗಳ ಹಿಂದೆ ಸೊರಬ ತಾಲೂಕಿನ ಉಳವಿ ಹೋಬಳಿ (Uluvi Hobli) ಸುತ್ತಮುತ್ತಲಿನ ಗ್ರಾಮಗಳ ಜಮೀನಿನಲ್ಲಿ ಕಾಡಾನೆಗಳು (Wild Elephants) ಲಗ್ಗೆ ಇಟ್ಟಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿವೆ. ಎಲ್ಲೆಲ್ಲಿ ಕಾಡಾನೆ ಲಗ್ಗೆ? ಕಾನಹಳ್ಳಿ, ಕಣ್ಣೂರು ಮತ್ತು ಮೈಸಾವಿ ಗ್ರಾಮಗಳ ಸುತ್ತಮುತ್ತ ಬೆಳೆ ಕಟಾವು ಮಾಡಿದ ರೈತರ ಜಮೀನಿನಲ್ಲಿ (farmland) ಆನೆಗಳು ಸಂಚರಿಸಿರುವ ಬಗ್ಗೆ ಹೆಜ್ಜೆ ಗುರುತು ಹಾಗೂ ಲದ್ದಿ ಕಾಣಿಸಿದೆ. ಅಲ್ಲದೇ ಕೆಲವು ತೋಟದಲ್ಲಿ ಬಾಳೆಗಿಡಗಳನ್ನು ಕಿತ್ತು ತಿಂದು ಹಾನಿ ಮಾಡಿವೆ. ಇದನ್ನೂ ಓದಿ … Read more

ಕೋಣಂದೂರು ಬಳಿ ಡೆತ್‌ ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

KONANDUR-THIRTHAHALLI-NEWS

ಕೋಣಂದೂರು: ಸಮೀಪದ ಹೊಸಕೇರಿ ನಿವಾಸಿ ನಾಗರಾಜ (52) ಡೆತ್ ನೋಟ್ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಟ್ ಫಂಡ್ ವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನ ಮನೆಯ ದಾಖಲೆ ಪತ್ರಗಳನ್ನು ಸಂಬಂಧಿಕರೊಬ್ಬರಿಗೆ ಕೊಟ್ಟು ಜಾಮೀನಿಗೆ ಸಹಿ ಮಾಡಿದ್ದರು.  ಇದನ್ನೂ ಓದಿ » ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿದ ರೈತ ಈ ಕಾರಣಕ್ಕೆ ಚಿಟ್ ಫಂಡ್‌ನವರು ಕಿರುಕುಳ ನೀಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರಾವತಿಯಲ್ಲಿ ಇವತ್ತು ಬ್ರಹ್ಮ ರಥೋತ್ಸವ

BHADRAVATHI-NEWS-UPDATE

ಭದ್ರಾವತಿ: ನಗರದ ಹುತ್ತಾ ಕಾಲೊನಿ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಿ.2ರಂದು ಮಧ್ಯಾಹ್ನ 12.30ಕ್ಕೆ ವೈಭವದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರದಾನ ಹೋಮ, ರಥಶುದ್ದಿ, ಬಲಿಪೂರ್ವಕ ಶ್ರೀ ಸ್ವಾಮಿಯ ರಥೋತ್ಸವ ನಡೆಯಲಿದೆ. ಅಷ್ಟಾವದಾನ ಸೇವೆ, ಮಹಾಪೂಜೆ, ಮಹಾ ಮಂಗಳಾರತಿ ನಡೆಯಲಿದೆ. ರಥೋತ್ಸವ ನಂತರ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ದಾನಿ ಹೆಚ್.ಸಿ.ದಾಸೇಗೌಡರ ಕುಟುಂಬದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಇದನ್ನೂ ಓದಿ » ಭದ್ರಾವತಿ ಸಿಟಿಯ ವಿವಿಧೆಡೆ ಇವತ್ತು ಇಡೀ ದಿನ ವಿದ್ಯುತ್‌ … Read more

ಶಿಕ್ಷಣ ಸಂಸ್ಥೆ ಬಸ್‌ಗೆ ಬೈಕ್‌ ಡಿಕ್ಕಿ, 36 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಅಪಘಾತ?

ACCIDENT-NEWS-GENERAL-IMAGE.

ಶಿಕಾರಿಪುರ: ಶಿಕ್ಷಣ ಸಂಸ್ಥೆಯ ವಾಹನಕ್ಕೆ ಹಿಂಬದಿಯಿಂದ ಬೈಕ್‌ನಲ್ಲಿ ಬಂದು ಗುದ್ದಿದ ಯುವಕ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಇದನ್ನೂ ಓದಿ » ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿದ ರೈತ ಶಿಕಾರಿಪುರ ಪಟ್ಟಣದ ಆಶ್ರಯ ಬಡಾವಣೆ ವಾಸಿ ವಿನಾಯಕ (36) ಮೃತಪಟ್ಟವರು. ಬೈಕಿನ ಹಿಂಬದಿ ಸವಾರ ಮೋಹನ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ರಸ್ತೆಯ ಶಾಹಿ ಗಾರ್ಮೆಂಟ್ಸ್‌ನಲ್ಲಿ ನಿತ್ಯದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಮೃತ ವಿನಾಯಕಗೆ ಗರ್ಭಿಣಿ ಪತ್ನಿ, ತಂದೆ, ತಾಯಿ ಇದ್ದಾರೆ. ಶಿಕಾರಿಪುರ ಪಟ್ಟಣ … Read more

ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿದ ರೈತ

shikaripura-anjanapura-village-board

ಶಿಕಾರಿಪುರ: ಸಾಲದ ಹೊರೆ ತಾಳಲಾರದೆ ಶಿಕಾರಿಪುರ (Shikaripura) ತಾಲೂಕು ಹಿರೇಕೊರಲಹಳ್ಳಿ (Hirekoralahalli) ಗ್ರಾಮದ ವೃದ್ಧ ರೈತ ಪೀಕ್ಲಾ ನಾಯ್ಕ (70) ಅಂಜನಾಪುರ ಜಲಾಶಯದ (Anjanapura Dam) ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಜಮೀನಿಗೆ ಹೋದಾಗ ಸಮೀಪದ ಅಂಜನಾಪುರ ಜಲಾಶಯ ಹಿನ್ನೀರಿಗೆ ಹಾರಿದ್ದಾರೆ ಎಂದು ಆರೋಪಿಸಲಾಗಿದೆ. ಹಾರೋಗೊಪ್ಪ (Harogoppa) ಗ್ರಾಮೀಣ ಬ್ಯಾಂಕ್‌, ಫೈನಾನ್ಸ್‌ನಲ್ಲಿ (Finance) ಸಾಲ ಹಾಗೂ ಕೈಸಾಲವನ್ನು ಮಾಡಿಕೊಂಡಿದ್ದರು ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ಭದ್ರಾವತಿ ಸಿಟಿಯ ವಿವಿಧೆಡೆ ಇವತ್ತು ಇಡೀ ದಿನ ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

power cut mescom ELECTRICITY

ಭದ್ರಾವತಿ: ನಗರದ ಮೆಸ್ಕಾಂ ಉಪವಿಭಾಗದ ಘಟಕ-2 ವ್ಯಾಪ್ತಿಯಲ್ಲಿ ವಿದ್ಯುತ್ (Electricity) ಮಾರ್ಗ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ಡಿ.2ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಭದ್ರಾವತಿಯ (Bhadravathi) ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಟ್‌ಪಟ್ ನಗರ, ಖಲಂದರೀಯ ನಗರ, ಮೊಮಿನ್ ಮೊಹಲ್ಲಾ, ಅನ್ವರ್ ಕಾಲೊನಿ, ಹಳೆ ಸೀಗೇಬಾಗಿ, ಅಮೀರ್ ಜಾನ್ ಕಾಲೊನಿ, ಭದ್ರಾ ಅಕ್ಕಿ ಗಿರಣಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕೆಂದು ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … Read more

ತೀರ್ಥಹಳ್ಳಿಯ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ₹15,000 ದಂಡ, ಕಾರಣವೇನು?

Shivamogga-Court-Balaraja-Urs-Road

ಶಿವಮೊಗ್ಗ: ಕೆಲಸಕ್ಕೆ ಹೋಗಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಪೆಟ್ರೋಲ್ (Petrol) ಹಾಕಿ ಸುಟ್ಟು ಕೊಲ್ಲಲು ಪ್ರಯತ್ನಿಸಿದ್ದ ಅಪರಾಧಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ (Jail) ಹಾಗೂ ₹15,000 ದಂಡ ವಿಧಿಸಿದೆ. ದಂಡ (Fine) ಕಟ್ಟಲು ವಿಫಲವಾದಲ್ಲಿ ಎರಡು ವರ್ಷ ಸಾದಾ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ.  ತೀರ್ಥಹಳ್ಳಿ ತಾಲ್ಲೂಕಿನ ಮೂವಳ್ಳಿ ಗ್ರಾಮದ ಆಲ್ಬರ್ಟ್ (45) ಶಿಕ್ಷೆಗೊಳಗಾದ ವ್ಯಕ್ತಿ. ಈತ ತನ್ನ ಪತ್ನಿ ಸುಧಾ ಮೇಲೆ ಹಲ್ಲೆ ನಡೆಸಿ … Read more

ಶಿವಮೊಗ್ಗ ಜಿಲ್ಲೆಯ ಮಹಿಳೆಗೆ KFD ಪಾಸಿಟಿವ್‌, ಸರ್ವೇಕ್ಷಣಾಧಿಕಾರಿ ಏನಂದ್ರು? ಚಿಕಿತ್ಸೆಗೆ ಏನೆಲ್ಲ ವ್ಯವಸ್ಥೆಯಾಗಿದೆ?

MONKEY-FEVER-KFD-IN-SHIMOGA

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮತ್ತೆ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (ಮಂಗಳನ ಕಾಯಿಲೆ) ಆತಂಕ ಶುರುವಾಗಿದೆ. ಮಹಿಳೆಯೊಬ್ಬರಿಗೆ KFD ಪಾಸಿಟಿವ್‌ ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸನಗರದ ಮಹಿಳೆಗೆ ಕೆಎಫ್‌ಡಿ ಕೆಎಫ್‌ಡಿ ಪತ್ತೆಗೆ ಪರೀಕ್ಷೆಗಳನ್ನು (TESTING) ನಡೆಸುತ್ತಿದ್ದಾಗ ಹೊಸನಗರದ 54 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಕೂಡಲೆ ಮಹಿಳೆಗೆ ಚಿಕಿತ್ಸೆ (TREATMENT) ಆರಂಭಿಸಲಾಗಿದೆ. ಸದ್ಯ ಅವರು ಗುಣಮುಖರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷದ ಎಷ್ಟಾಗಿತ್ತು ಪ್ರಕರಣ? ಸಾಮಾನ್ಯವಾಗಿ ಮಂಗನಕಾಯಿಲೆ ನವೆಂಬರ್‌ನಿಂದ ಜನವರಿವರೆಗೆ ಹರಡುತ್ತದೆ. ಕಳೆದ ವರ್ಷ ಕೆಎಫ್‌ಡಿಗೆ … Read more

VISLನಲ್ಲಿ ದಿಢೀರ್‌ ನಡೆಯಿತು ಎರಡನೇ ಮೀಟಿಂಗ್‌, ಕುಮಾರಸ್ವಾಮಿ ನೀಡಿದ ಭರವಸೆ ಏನು?

291125-Central-Minister-HD-Kumaraswamy-visit-VISL

ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL) ಪುನಶ್ಚೇತನ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy), ಬಳಿಕ ಕಾರ್ಖಾನೆಯ ವಿವಿಧ ಘಟಕಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಒಂದೇ ಭೇಟಿಯಲ್ಲಿ ಎರಡು ಸಭೆ ವಿಐಎಸ್‌ಎಲ್‌ ವಸತಿ ಗೃಹದಲ್ಲಿ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮೊದಲ ಹಂತದ ಸಭೆ ನಡೆಸಿದರು. ಈ ಸಭೆಯಲ್ಲಿ ಕಾರ್ಖಾನೆಯ ಪ್ರಸ್ತುತ ಸ್ಥಿತಿ, ಪುನಶ್ಚೇತನದ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ … Read more