ಬಿಆರ್‌ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

Legends-Cricket-in-Shankaraghatta.

ಶಂಕರಘಟ್ಟ: ಕಳೆದ ವಾರಾಂತ್ಯದಲ್ಲಿ ಮುಕ್ತಾಯಗೊಂಡ ಬಿಆರ್‌ಪಿ ಲೆಜೆಂಡ್ಸ್ ಆಶ್ರಯದಲ್ಲಿ ನಡೆದ ಮೂರು ದಿನಗಳ 40 ವರ್ಷ ಮೇಲ್ಪಟ್ಟವರ ಕ್ರಿಕೆಟ್ (Cricket) ಪಂದ್ಯಾವಳಿಯು 80-90ರ ದಶಕದ ಹಳೆಯ ಸ್ನೇಹಿತರ ಭಾವನಾತ್ಮಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ರಾಜ್ಯದ ನಾನಾ ಭಾಗಗಳಲ್ಲಿ ನೆಲೆಸಿರುವ ಅಂದಿನ ಚಿಣ್ಣರು, ಹುಡುಗಾಟಿಕೆಯ ದಿನಗಳನ್ನು ಮೆಲುಕು ಹಾಕುತ್ತಾ ಕ್ರಿಕೆಟ್ ಆಡುವ ಮೂಲಕ ತಮ್ಮಲ್ಲಿ ಇನ್ನೂ ಕ್ರೀಡಾ ಸ್ಫೂರ್ತಿ ಮತ್ತು ಚೈತನ್ಯದ ಚಿಲುಮೆ ಹಸಿರಾಗಿರುವುದನ್ನು ಸಾಬೀತುಪಡಿಸಿದರು. ಕಳೆದ 4 ವರ್ಷದಿಂದ ಈ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಕುವೆಂಪು ವಿಶ್ವವಿದ್ಯಾಲಯದ ಡಾ. … Read more

ಹೊಳೆಹೊನ್ನೂರಿನಲ್ಲಿ ಹುಚ್ಚು ನಾಯಿ ಭೀತಿ, 11 ಜನರು ಆಸ್ಪತ್ರೆಗೆ

Community-Health-Center-at-Holehonnuru-in-Bhadravathi-taluk

ಹೊಳೆಹೊನ್ನೂರು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 11 ಜನರು ನಾಯಿ ಕಡಿತಕ್ಕೆ (dog bite) ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ – ತೀರ್ಥಹಳ್ಳಿ ವ್ಯಕ್ತಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಕಾರಣವೇನು? ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ನೀಡಿರುವ ಮಾಹಿತಿಯಂತೆ, ಒಟ್ಟು 11 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ದಾಳಿ ಮಾಡಿದ ನಾಯಿಯು ಹುಚ್ಚು ನಾಯಿ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಎಲ್ಲರಿಗೂ ತಕ್ಷಣವೇ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ … Read more

ಅರಬಿಳಚಿ ದುರಂತ, ಭದ್ರಾ ನಾಲೆಯಲ್ಲಿ ಎರಡನೇ ಮೃತದೇಹ ಪತ್ತೆ

Arabilachi-Bhadra-Canal-incident.

ಹೊಳೆಹೊನ್ನೂರು: ಅರಬಿಳಚಿ ಕ್ಯಾಂಪ್‌ನಲ್ಲಿ ನಡೆದ ಭದ್ರಾ ನಾಲೆ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಎರಡನೇ ಮೃತದೇಹ (Second body) ಇಂದು ಪತ್ತೆಯಾಗಿದೆ. ಮೃತ ಮಹಿಳೆಯನ್ನು ನೀಲಾಬಾಯಿ (55) ಎಂದು ಗುರುತಿಸಲಾಗಿದೆ. ಇಂದು ಎಸ್‌ಡಿಆರ್‌ಎಫ್ (SDRF) ತಂಡ ಕಾರ್ಯಾಚರಣೆ ನಡೆಸಿ ಅರಬಿಳಚಿ ಕ್ಯಾಂಪ್ ಸಮೀಪದ ನಾಲೆಯಲ್ಲಿ ನೀಲಾಬಾಯಿ ಅವರ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆದಿದೆ. ಕಳೆದ ಭಾನುವಾರ ಮಧ್ಯಾಹ್ನ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದರು. ಇದನ್ನೂ ಓದಿ – ಮದ್ಯದ ಅಮಲು, ರಸ್ತೆ ಬದಿ ಕಾರಿನಲ್ಲೇ … Read more

ಮದ್ಯದ ಅಮಲು, ರಸ್ತೆ ಬದಿ ಕಾರಿನಲ್ಲೇ ಮಗುವಿನ ಜೊತೆ ಮಲಗಿದ ತಂದೆ, ಮುಂದೇನಾಯ್ತು?

Person-slept-inside-a-car-with-doors-loaked-and-baby-inside.

ಭದ್ರಾವತಿ: ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಮಗುವಿನೊಂದಿಗೆ ಕಾರಿನಲ್ಲಿ ಮಲಗಿದ್ದ (child locked). ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ, ಮಗುವನ್ನು ಸುರಕ್ಷಿತವಾಗಿ ತಾಯಿಯ ವಶಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ – ಮುಂಬೈಗೆ ತೆರಳಿದ್ದ ಮಹಿಳೆಗೆ ನೆರೆಹೊರೆ ಮನೆಯಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್ ಭದ್ರಾವತಿಯ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಆಗಿದೆ. ಮದ್ಯ ಸೇವಿಸಿದ್ದ ವ್ಯಕ್ತಿ ತನ್ನ ಮಗುವಿನೊಂದಿಗೆ ಕಾರಿನಲ್ಲಿ ಮಲಗಿದ್ದ. ಕಾರಿನ ಬಾಗಿಲುಗಳು ಲಾಕ್‌ ಆಗಿದ್ದವು. ಸಾರ್ವಜನಿಕರ … Read more

ಎಂಪಿಎಂ ನಿವೃತ್ತ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

MPM-former-employee-anjaneya-no-more

ಭದ್ರಾವತಿ: ಎಂಪಿಎಂ ನಿವೃತ್ತ ಕಾರ್ಮಿಕ, ಬೊಮ್ಮನಕಟ್ಟೆಯ ವಾಸಿ ಎಸ್.ಆಂಜನೇಯ (67) ಜೀವನದಲ್ಲಿ ಜುಗುಪ್ಪೆಗೊಂಡು ಮನೆ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (actor) ಇದನ್ನೂ ಓದಿ – ಭದ್ರಾ ಡ್ಯಾಮ್‌: ಜನವರಿ 31ರವರೆಗೆ ನದಿಗೆ ನೀರು, ಕಾರಣವೇನು? ಎಷ್ಟು ಹರಿಸಲಾಗುತ್ತದೆ? ಮೃತರಿಗೆ ಪತ್ನಿ ಶಾರದಮ್ಮ, ಪುತ್ರ, ಪುತ್ರಿ ಇದ್ದಾರೆ. ಕಾಗದ ನಗರದಲ್ಲಿಗುರು ಜ್ಯೋತಿ ಕಲಾ ಸಂಘದ ರಚನೆ ಮಾಡಿಕೊಂಡು ಅನೇಕ ನಾಟಕಗಳನ್ನು ಪ್ರದರ್ಶನ ಮಾಡಿದ್ದ ಆಂಜನೇಯ ಅವರು ರಂಗಭೂಮಿ ಕಲಾವಿದರಾಗಿ, ಕಿರುತೆರೆ, ಚಲನಚಿತ್ರ ನಟರಾಗಿ ಗುರುತಿಸಿಕೊಂಡಿದ್ದರು. ಕಳೆದ ಆರೇಳು … Read more

ಭದ್ರಾ ಡ್ಯಾಮ್‌: ಜನವರಿ 31ರವರೆಗೆ ನದಿಗೆ ನೀರು, ಕಾರಣವೇನು? ಎಷ್ಟು ಹರಿಸಲಾಗುತ್ತದೆ?

Bhadra-Dam-General-Image

ಶಿವಮೊಗ್ಗ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ನಡೆಯಲಿದೆ. ಈ ಹಿನ್ನೆಲೆ ಭದ್ರಾ ಜಲಾಶಯದಿಂದ (Bhadra Dam) ನೀರು ಹರಿಸಲಾಗುತ್ತಿದೆ. ಭದ್ರಾ ಜಲಾಶಯದಿಂದ ನದಿಗೆ ಜನವರಿ 20 ರಿಂದ ಜನವರಿ 30ರವರೆಗೆ ಪ್ರತಿ ದಿನ 500 ಕ್ಯೂಸೆಕ್‌ನಂತೆ ನೀರು ಹರಿಸಲಾಗುತ್ತದೆ. ಜನವರಿ 31 ರಂದು 300 ಕ್ಯೂಸೆಕ್‌ ನೀರು ಹರಿಸಲು ನಿರ್ಧರಿಸಲಾಗಿದೆ. ಒಟ್ಟು 0.50 ಟಿ.ಎಂ.ಸಿ ನೀರು ಬಿಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ, ಭದ್ರಾ ಯೋಜನಾ ವೃತ್ತದ … Read more

ಡಿಸಿಸಿ ಬ್ಯಾಂಕಿಗೆ ನುಗ್ಗಿದ ಜಿಂಕೆ ರಕ್ಷಣೆ, ಆಗಿದ್ದೇನು?

Deer Enters DCC Bank in Shankaraghatta

ಶಂಕರಘಟ್ಟ: ಡಿಸಿಸಿ ಬ್ಯಾಂಕ್‌ಗೆ (Bank Branch) ನುಗ್ಗಿದ ಜಿಂಕೆಯನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಭದ್ರಾವತಿ ತಾಲೂಕು ಶಂಕರಘಟ್ಟದಲ್ಲಿರುವ ಡಿಸಿಸಿ ಬ್ಯಾಂಕ್‌ ಶಾಖೆಗೆ ಜಿಂಕೆ ನುಗ್ಗಿದೆ. ಗಾಬರಿಯಲ್ಲಿ ಗಾಜಿಗೆ ಗುದ್ದಿಕೊಂಡು ಕುಸಿದು ಬಿದ್ದಿತ್ತು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಿಂಕೆಯ ರಕ್ಷಣೆ ಮಾಡಿದ್ದಾರೆ. ಬಳಿಕ ಅದನ್ನು ಸಮೀಪದ ಅರಣ್ಯಕ್ಕೆ ಕೊಂಡೊಯ್ದು ಬಿಡುಗಡೆ ಮಾಡಿದ್ದಾರೆ. ಬೆನ್ನಟ್ಟಿ ಬಂದ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಂಕೆ ಕುವೆಂಪು ವಿಶ್ವವಿದ್ಯಾಲಯದ … Read more

ಭದ್ರಾ ನಾಲೆಯಲ್ಲಿ ಒಬ್ಬರ ಮೃತದೇಹ ಪತ್ತೆ, ನಾಪತ್ತೆಯಾದ ಮೂವರಿಗೆ ಶೋಧ

Arahatolalu-family-search-at-Bhadra-canal

ಹೊಳೆಹೊನ್ನೂರು: ಅರಬಿಳಚಿ ಕ್ಯಾಂಪ್ ಬಳಿ ಬಟ್ಟೆ ತೊಳೆಯಲು ಹೋಗಿ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ನಾಲ್ವರಲ್ಲಿ ಓರ್ವ ಯುವಕನ ಮೃತದೇಹ ಇಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ರವಿಕುಮಾರ್ (22) ಎಂದು ಗುರುತಿಸಲಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ (Eshwar Malpe) ಅವರು ನಾಲೆಯ ನೀರಿನಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ನಾಲೆಯಲ್ಲಿ ನೀರುಪಾಲಾಗಿದ್ದ ನಾಲ್ವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿತ್ತು. ಸದ್ಯ ರವಿಕುಮಾರ್ ಶವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಉಳಿದ ಮೂವರಾದ ನೀಲಾಬಾಯಿ, ಅವರ ಮಗಳು ಶ್ವೇತಾ ಮತ್ತು ಅಳಿಯ ಪರಶುರಾಮ್‌ ಪತ್ತೆಗಾಗಿ … Read more

ಇನ್ನೂ ಪತ್ತೆಯಾಗದ ಸುಳಿವು, ನಾಲ್ವರಿಗಾಗಿ ಭದ್ರಾ ನಾಲೆಯಲ್ಲಿ ಶೋಧ ಕಾರ್ಯ ಬಿರುಸು, ಈತನಕ ಏನೇನಾಯ್ತು?

Arahatolalu-family-search-at-Bhadra-canal

ಹೊಳೆಹೊನ್ನೂರು: ಭದ್ರಾ ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದು (missing family) ಅವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಎರಡನೇ ದಿನದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ರಬರ್‌ ಬೋಟ್‌ಗಳ ಮೂಲಕ ನಾಲೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಅರಬಿಳಚಿ ಗ್ರಾಮದ ನೀಲಾಬಾಯಿ(50), ಮಗ ರವಿಕುಮಾರ್(23), ಮಗಳು ಶ್ವೇತಾ(24) ಮತ್ತು ಅಳಿಯ ಶಿಕಾರಿಪುರ ತಾಲೂಕು ಬೆಂಡೆಕಟ್ಟೆ ಗ್ರಾಮದ ಪರಶುರಾಮ(28) ನಾಪತ್ತೆಯಾಗಿದ್ದಾರೆ. ಅರಬಿಳಚಿಯ ಮಾರಿಹಬ್ಬಕ್ಕೆಂದು ಬಂದಿದ್ದ ಮಗಳು ಮತ್ತು ಅಳಿಯನೊಂದಿಗೆ ಅತ್ತೆ ನೀಲಾಬಾಯಿ, ಮಗ ರವಿಕುಮಾರ್‌ನನ್ನು ಕರೆದುಕೊಂಡು ಬಟ್ಟೆ ತೊಳೆಯಲು … Read more

BREAKING NEWS – ಭದ್ರಾ ಎಡದಂಡೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ

Arabilachi-village-bhadra-canal-incident

ಹೊಳೆಹೊನ್ನೂರು: ಭದ್ರಾ ಎಡದಂಡೆ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು (family members) ನಾಪತ್ತೆಯಾಗಿದ್ದಾರೆ. ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಭದ್ರಾವತಿ ತಾಲೂಕು ಅರಬಿಳಚಿ ಕ್ಯಾಂಪ್‌ನಲ್ಲಿ ಘಟನೆ ಸಂಭವಿಸಿದೆ. ನೀಲಾಬಾಯಿ, ಅವರ ಮಗ ರವಿಕುಮಾರ್‌, ಮಗಳು ಶ್ವೇತಾ, ಅಳಿಯ ಪರಶುರಾಮ್‌ ನಾಪತ್ತೆಯಾಗಿದ್ದಾರೆ. ಹೇಗಾಯ್ತು ಘಟನೆ? ಭದ್ರಾ ಎಡದಂಡೆ ನಾಲೆಯಲ್ಲಿ ಬಟ್ಟೆ ಒಗೆಲು ಬಂದಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಾಲೆಗೆ ಜಾರಿ ಒಬ್ಬರ ರಕ್ಷಣೆಗೆ ಮತ್ತೊಬ್ಬರು ಅವರ ಹಿಂದೆ ಇನ್ನೊಬ್ಬರು ಎಂಬಂತೆ ನಾಲೆಗೆ ಇಳಿದಿರುವ ಸಾಧ್ಯತೆ ಇದೆ … Read more