ಶಬರಿಮಲೈ ಸಮೀಪ ಶಿವಮೊಗ್ಗ, ಭದ್ರಾವತಿ ಮಾಲಾಧಾರಿಗಳಿಂದ ದಿಢೀರ್‌ ಪ್ರತಿಭಟನೆ, ಕಾರಣವೇನು?

ಶಿವಮೊಗ್ಗ: ಭದ್ರಾವತಿ, ಶಿವಮೊಗ್ಗದಿಂದ ಶಬರಿಮಲೈಗೆ (Sabarimala Row) ತೆರಳಿರುವ ಮಾಲಾಧಾರಿಗಳು ದಿಢೀರ್‌ ಪ್ರತಿಭಟನೆ ನಡೆಸಿದರು. ಕೇರಳ ಸರ್ಕಾರ, ಅಲ್ಲಿಯ ಪೊಲೀಸರು ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇರಳದ ಕೊಟ್ಟಾಯಂ ಜಿಲ್ಲೆಯ ಏರುಮೇಲಿ ಎಂಬಲ್ಲಿ ಕರ್ನಾಟಕದ ಮಾಲಾಧಾರಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆಗೆ ಕಾರಣವೇನು? ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಾಹನಗಳನ್ನು ಏರುಮೇಲಿ ಎಂಬಲ್ಲಿ ತಡೆದು ನಿಲ್ಲಿಸಲಾಗುತ್ತಿದೆ. ಅಲ್ಲಿಂದ ಶಬರಿಮಲೈಗೆ 45 ಕಿ.ಮೀ ದೂರವಿದೆ. ಹಾಗಾಗಿ ಏರುಮೇಲಿಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲಾಧಿಕಾರಿಗೆ … Read more

ಭದ್ರಾ ನಾಲೆಗೆ ಹಾರಿ ಗೃಹಿಣಿ ಆತ್ಮಹತ್ಯೆ ಕೇಸ್‌, ಪಾಂಡಿಚೇರಿಯಲ್ಲಿ ಪತಿ ಅರೆಸ್ಟ್‌

Latha-incident-at-Holehonnuru-limits.

ಹೊಳೆಹೊನ್ನೂರು: ಪತ್ನಿ ಸಾವು ಪ್ರಕರಣದಲ್ಲಿ ಆರೋಪಿ ಗುರುರಾಜ್‌ನನ್ನು ಪಾಂಡಿಚೇರಿಯಲ್ಲಿ ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ (Arrest). ನವೆಂಬರ್‌ 25ರಂದು ಪತಿಯ ಮನೆಯವರ ಕಿರುಕುಳ ತಾಳಲಾರದೆ ಡಿ.ಬಿ.ಹಳ್ಳಿಯ ನವವಿವಾಹಿತೆ ಲತಾ, ಹಂಚಿನಸಿದ್ದಾಪುರ ಬಳಿ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನದ ನಂತರ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮದ ಭದ್ರಾ ನಾಲೆಯಲ್ಲಿ ಶವ ಸಿಕ್ಕಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ ಶಿಕಾರಿಪುರದ ಗುರುರಾಜ್‌ನನ್ನು ಲತಾ ವಿವಾಹವಾಗಿದ್ದರು. ಭದ್ರಾವತಿ ತಾಲೂಕಿನ ಡಿ.ಬಿ ಹಳ್ಳಿಯ ಪರಮೇಶ್ವರಪ್ಪ ಮತ್ತು ರುದ್ರಮ್ಮ ದಂಪತಿಯ ಪುತ್ರಿ ಲತಾ … Read more

ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?

Shimoga-SP-Nikhil-B-visited-holehonnuru

ಹೊಳೆಹೊನ್ನೂರು: ಕೌಟುಂಬಿಕ ಕಲಹದ (family dispute) ಹಿನ್ನೆಲೆ ಪತಿಯೇ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಹೊಳೆಹೊನ್ನೂರಿನ ಬೊಮ್ಮನ ಕಟ್ಟೆ ಪಂಡರಹಳ್ಳಿ ಕ್ಯಾಂಪ್‌ನಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ರಸ್ತೆ ಬದಿ ನವಜಾತ ಗಂಡು ಶಿಶು, ವಾರಸುದಾರರ ಪತ್ತೆಗೆ ಮನವಿ ಚಂದನಾ ಬಾಯಿ (23) ಕೊಲೆಯಾದ ದುರ್ದೈವಿ. ಕಳೆದ ರಾತ್ರಿ ಪತಿ ಗೋಪಿ ಜೊತೆಗೆ ಜಗಳವಾಗಿತ್ತು. ಈ ಸಂದರ್ಭ ಆತ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ … Read more

ರಸ್ತೆ ಬದಿ ನವಜಾತ ಗಂಡು ಶಿಶು, ವಾರಸುದಾರರ ಪತ್ತೆಗೆ ಮನವಿ

Unknown-Baby-found-near-holehonnuru

ಶಿವಮೊಗ್ಗ: ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಗೇಟ್ ಹತ್ತಿರ ರಸ್ತೆ ಬದಿ ಅನಾಮಧೇಯ ಗಂಡು ಮಗು (baby boy) ಪತ್ತೆಯಾಗಿತ್ತು. ಹೊಳೆಹೊನ್ನೂರು ಠಾಣಾಧಿಕಾರಿ ಮಗುವನ್ನು ರಕ್ಷಿಸಿ ಡಿಸೆಂಬರ್ 16ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಿದ್ದಾರೆ. ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಟಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲೆಗಳ ಜತೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಆಲೊಳ, ಶಿವಮೊಗ್ಗ ಇವರ ಕಚೇರಿಗೆ ಖುದ್ದಾಗಿ ಅಥವಾ ದೂ. 08182-295511 ಸಂಪರ್ಕಿಸುವಂತೆ … Read more

ಶಂಕರಘಟದಲ್ಲಿ ಬಸ್ಸಿನ ಟೈರ್‌ ಸ್ಫೋಟ, ಬೈಕ್‌ ಸವಾರ ಸಾವು, ಹೇಗಾಯ್ತು ಘಟನೆ?

SHANKARAGHATTA BDVT NEWS 1

ಭದ್ರಾವತಿ: ಖಾಸಗಿ ಬಸ್ಸಿನ ಟೈರ್ ಸ್ಫೋಟಗೊಂಡು (Tire Burst) ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಕಣಗಲಸರ ಗ್ರಾಮದ ನಿವಾಸಿ ಬೀರು (42) ಮೃತಪಟ್ಟವರು. ಅದೇ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಲಕ್ಷ್ಮಿ ಎಂಬುವವರಿಗೆ ಗಾಯವಾಗಿದೆ. ಬೀರು ಅವರು ಲಕ್ಷ್ಮಿ ಅವರನ್ನು ಬೈಕ್‌ನಲ್ಲಿ ಕುರಿಸಿಕೊಂಡು ಆಸ್ಪತ್ರೆಗೆ ಹೋಗಿ ವಾಪಸ್ ಬರುತ್ತಿದ್ದರು. ಶಂಕರಘಟ್ಟ ಗ್ರಾಮದ ಅಂಗಾಳ ಪರಮೇಶ್ವರಿ ದೇವಸ್ಥಾನದ ಬಳಿ ಸಂಚರಿಸುತ್ತಿದ್ದಾಗ, ಎದುರುಗಡೆಯಿಂದ ಬಂದ ಖಾಸಗಿ ಬಸ್ ಇವರ ಬೈಕನ್ನು ದಾಟಿದ ತಕ್ಷಣ ಅದರ ಟೈರ್ ಸ್ಫೋಟಗೊಂಡಿದೆ. … Read more

ಭದ್ರಾವತಿ ಪೊಲೀಸರ ಕಾರ್ಯಾಚರಣೆ, ಕೆಲವೇ ಗಂಟೆಯಲ್ಲಿ ಹರಿಹರದ ವ್ಯಕ್ತಿ ಅರೆಸ್ಟ್‌, ಆಗಿದ್ದೇನು?

Harihara-person-arrested-at-Bhadravathi

ಭದ್ರಾವತಿ: ಮನೆ ಮುಂದೆ ಕೆಲಸ ಮಾಡುತ್ತಿದ್ದ ಗೃಹಿಣಿಗೆ ಚಾಕು ತೋರಿಸಿ ಬೆದರಿಸಿ, ಮಾಂಗಲ್ಯ ಸರ ದೋಚಿದ್ದ (chain snatcher) ಆರೋಪಿಯನ್ನು ಭದ್ರಾವತಿ ನ್ಯೂ ಟೌನ್ ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ಭದ್ರಾವತಿಯ ಜೇಡಿಕಟ್ಟೆ ನಿವಾಸಿ ಭಾಗ್ಯ ಅವರು ಮನೆಯ ಬಾಗಿಲು ತೊಳೆಯಲು ನೀರು ತೆಗೆದುಕೊಳ್ಳಲು ಹೋಗಿದ್ದರು. ದುಷ್ಕರ್ಮಿಯೊಬ್ಬರ ಚಾಕು ಹಿಡಿದು ಬಂದು ಭಾಗ್ಯ ಅವರಿಗೆ ಜೀವ ಬೆದರಿಕೆ ಹಾಕಿದ್ದ. ₹1.50 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಕೆಲವೇ ಗಂಟೆ ಅರೆಸ್ಟ್‌ … Read more

₹1.20 ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ?

Crime-News-General-Image

ಭದ್ರಾವತಿ: ವೀರಾಪುರ ಗ್ರಾಮದ ಬಳಿ ಅಡಿಕೆ (Areca Nut) ಸುಲಿಯುವ‌ ಶೆಡ್‌ನಲ್ಲಿ ಅಡಿಕೆ ಕಳ್ಳತನವಾಗಿದೆ. ಶ್ರೀರಾಮನಗರ ನಿವಾಸಿ ಬೈರೆಗೌಡ ಬೇರೆಯವರ ತೋಟವನ್ನು ಪಡೆದು ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದರು. ವೀರಾಪುರ ಗ್ರಾಮದ ಪೆಟ್ರೋಲ್ ಬಂಕ್ ಪಕ್ಕದ ಶೆಡ್‌ನಲ್ಲಿ ಅಡಿಕೆ ಸಂಗ್ರಹಿಸಿಟ್ಟಿದ್ದರು. ಜನವರಿ 1ರ 25 ಚೀಲ ಸುಲಿದ ಹಸಿ ಅಡಿಕೆಯನ್ನು ಶೆಡ್‌ನಲ್ಲಿ ಇಟ್ಟು ಮನೆಗೆ ಹೋಗಿದ್ದರು. ಜನವರಿ 2ರ ಬೆಳಗ್ಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಶೆಡ್‌ನಲ್ಲಿದ್ದ 25 ಚೀಲಗಳ ಪೈಕಿ ಸುಮಾರು ₹1,20,000 … Read more

ಐದು ಮಂದಿಗೆ 10 ವರ್ಷದ ಜೈಲು, ₹50,000 ದಂಡ, ಏನಿದು ಪ್ರಕರಣ?

Judgement-court

ಶಿವಮೊಗ್ಗ: ಭದ್ರಾವತಿಯ ಗೊಂದಿ ಕೈಮರದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆ ಐದು ಜನರಿಗೆ ಭದ್ರಾವತಿಯ ನ್ಯಾಯಾಲಯ 10 ವರ್ಷ ಜೈಲು (Jail) ಶಿಕ್ಷೆ, ₹50,000 ದಂಡ ವಿಧಿಸಿ ಆದೇಶಿಸಿದೆ. ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ಮಹತ್ವದ ಪ್ರಕಟಣೆ, 15 ದಿನದ ಗಡುವು, ತಪ್ಪಿದಲ್ಲಿ ಕಾನೂನು ಕ್ರಮ ಗ್ಯಾರಂಟಿ 2019ರ ಫೆಬ್ರವರಿಯಲ್ಲಿ ಮಾರಕಾಸ್ತ್ರ, ಖಾರದ ಪುಡಿ ಹಿಡಿದುಕೊಂಡು ವಾಹನಗಳ ದರೋಡೆಗೆ ಯತ್ನಿಸಿದ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ … Read more

ಮಧುಮಿತಾಳ ಮೆಸೇಜ್‌ಗೆ ಭದ್ರಾವತಿ ವ್ಯಕ್ತಿ ಕಳೆದುಕೊಂಡು 6 ಲಕ್ಷ ರುಪಾಯಿ, ಏನಿದು ಪ್ರಕರಣ?

Online-Fraud-Case-image

ಶಿವಮೊಗ್ಗ: ಟೆಲಿಗ್ರಾಂ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಭದ್ರಾವತಿಯ (Bhadravathi)ವ್ಯಕ್ತಿಯೊಬ್ಬರು ಟೆಲಿಗ್ರಾಂನಲ್ಲಿ ಜಾಹೀರಾತು ನೋಡಿ ಲಿಂಕ್ ಕ್ಲಿಕ್ ಮಾಡಿ ಮೋಸ ಹೋಗಿದ್ದಾರೆ. ಹೇಗಾಯ್ತು ಮೋಸ? ಟೆಲಿಗ್ರಾಂನಲ್ಲಿ ಲಿಂಕ್‌ ಕ್ಲಿಕ್‌ ಮಾಡಿದಾಗ, ಮಧುಮಿತಾ ಎಂಬ ಹೆಸರಿನ ಗ್ರೂಪ್ ಅಡ್ಮಿನ್ ಇವರನ್ನು ಸಂಪರ್ಕಿಸಿದ್ದಾರೆ. ತಾವು ಟಾಟಾ ಕಂಪನಿಯ ಪ್ರತಿನಿಧಿಗಳು ಎಂದು ತಿಳಿಸಿದ್ದಾರೆ. ಫ್ಯಾಷನ್ ಡಿಸೈನಿಂಗ್ ಉತ್ಪನ್ನಗಳನ್ನು ಖರೀದಿಸಿ ಟಾಸ್ಕ್ ಪೂರ್ಣಗೊಳಿಸಿದರೆ ಹೆಚ್ಚಿನ ಲಾಭ ನೀಡುವುದಾಗಿ … Read more

ತೋಟದ ಮನೆಯ ನಾಯಿ ಕಾಣೆಯಾಗಿದೆ ಅಂತಾ CCTV ಚೆಕ್‌ ಮಾಡಿದಾಗ ಕಾದಿತ್ತು ಆಘಾತ

Leopard-found-at-Bhadravathi

ಭದ್ರಾವತಿ: ಹಿರಿಯೂರು ಗ್ರಾಮದ ಪತ್ರಕರ್ತ ಸುರೇಶ್ ಅವರ ಶಿವಾನಿ ಮಕ್ರೂಮ್ ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆಯು (leopard) ಕೊಂದುಹಾಕಿದೆ. ಶನಿವಾರ ರಾತ್ರಿ ತೋಟದ ಮನೆಯಲ್ಲಿ ಕಾವಲುಗಾರ ಸೇರಿದಂತೆ ಯಾರೂ ಇರಲಿಲ್ಲ. ತೋಟದಲ್ಲಿದ್ದವರು ನಾಯಿಯನ್ನು ಕಟ್ಟಿ ಹಾಕಿ ಹೋಗಿದ್ದರು. ಭಾನುವಾರ ಬಂದಾಗ ನಾಯಿ ಕಾಣೆಯಾಗಿತ್ತು. ಅನುಮಾನ ಗೊಂಡು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ಎರಡು ಮೂರು ಬಾರಿ ಓಡಾಡಿದೆ. ನಂತರ ಬೊಗಳುತ್ತಿದ್ದ ನಾಯಿಯ ಹೊಟ್ಟೆ ಬಗೆದು ಕೊಂದು ಹೊತ್ತೊಯ್ದಿದೆ. ಬುಧವಾರ ಆ ಸ್ಥಳದಲ್ಲಿ ಬೋನ್ ಇಡುವುದಾಗಿ … Read more