ಹೊಳೆಹೊನ್ನೂರು ಸುತ್ತಮುತ್ತ ಆಪ್ಟಿಕ್‌ ಫೈಬರ್‌ ಕೇಬಲ್‌ ಕದ್ದೊಯ್ದ ದುಷ್ಕರ್ಮಿಗಳು

Crime-News-General-Image

SHIVAMOGGA LIVE NEWS | 16 MAY 2024 HOLEHONNURU : ವಿವಿಧೆಡೆ ಅಳವಡಿಸಿದ್ದ ಬಿಎಸ್‌ಎನ್‌ಎಲ್‌ನ ಫೈಬರ್‌ ಕೇಬಲ್‌ (Fiber Cable) ಕಳ್ಳತನ ಮಾಡಲಾಗಿದೆ. ಒಟ್ಟು 31,800 ರೂ. ಮೌಲ್ಯದ ಕೇಬಲ್‌ ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಿಎಸ್‌ಎನ್‌ಎಲ್‌ನ ಭದ್ರಾವತಿ ಜೆ.ಇ ಸವಿತಾ ದೂರು ನೀಡಿದ್ದಾರೆ. ಇದನ್ನೂ ಓದಿ – ಮುಂಗಾರು ಮಳೆ ಪ್ರವೇಶದ ದಿನಾಂಕ ಪ್ರಕಟಿಸಿದ ಹವಾಮಾನ ಇಲಾಖೆ, ರೈತರಿಗೆ ನೆಮ್ಮದಿ ಹೊಳೆಹೊನ್ನೂರಿನಿಂದ ಕೈಮರ, ಅರೆಬಿಳಚಿಯಿಂದ ಅರೆಬಿಳಚಿ ಕ್ಯಾಂಪ್‌, ಕೈಮರದಿಂದ ಆನವೇರಿ, ಅರೆಬಿಳಚಿಯಿಂದ ಕೈಮರ, … Read more

ಶಿವಮೊಗ್ಗದ ವಿವಿಧೆಡೆ ಗುಡುಗು ಸಹಿತ ಜೋರು ಮಳೆ, ಸಿಟಿಯಲ್ಲಿ ಕವಿದ ಮೋಡ

Rain-at-Shimoga

SHIVAMOGGA LIVE NEWS | 9 MAY 2024 SHIMOGA : ಜಿಲ್ಲೆಯ ವಿವಿಧೆಡೆ ಸಂಜೆ ವೇಳೆಗೆ ಮಳೆ ಆರಂಭವಾಗಿದೆ. ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತಿದೆ. ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನರು ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ. ಶಿವಮೊಗ್ಗ, ಭದ್ರಾವತಿ ತಾಲೂಕಿನ ಹಲವು ಕಡೆ ಕಳೆದ ಅರ್ಧ ಗಂಟೆಗೂ ಹೆಚ್ಚು ಹೊತ್ತಿನಿಂದ ಮಳೆಯಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಮೋಡ ಕವಿದ ವಾತಾವರಣ ಇದೆ. ಜೋರು ಗಾಳಿ ಬೀಸುತ್ತಿದೆ. ಇದನ್ನೂ ಓದಿ – ATNCCಯಲ್ಲಿ ಮ್ಯಾನೇಜ್‌ಮೆಂಟ್‌ ಫೆಸ್ಟ್‌, ಲೋಗೋ ಬಿಡುಗಡೆ ವೇಳೆ … Read more

ಎಂಪಿಎಂ ನೆಡುತೋಪಿನಲ್ಲಿ ಶಬ್ದ, ದೌಡಾಯಿಸಿದ ಅರಣ್ಯ ಅಧಿಕಾರಿಗಳು, 14 ಮಹಿಳೆಯರ ವಿರುದ್ಧ ಕೇಸ್

Holehonnuru-Police-Station-Bhadravathi-jpg

SHIVAMOGGA LIVE NEWS | 1 MAY 2024 BHADRAVATHI : ದಾನವಾಡಿಯಲ್ಲಿ ಎಂಪಿಎಂಗೆ ಗುತ್ತಿಗೆ ನೀಡಿರುವ ನೀಲಗಿರಿ ನೆಡುತೋಪಿನಲ್ಲಿ ಮರ ಕಡಿದ ಆರೋಪದ ಹಿನ್ನೆಲೆ 14 ಮಹಿಳೆಯರ ವಿರುದ್ಧ ಭದ್ರಾವತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಏ.26ರಂದು ಮರ ಕಡಿಯುತ್ತಿರುವ ಶಬ್ದ ಕೇಳಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಮಹಿಳೆಯರು ಅಕ್ರಮವಾಗಿ ಮರ ಕಡಿಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.   ಮಹಿಳೆಯರು ಮರ ಕಡಿತಲೆ ಮಾಡಿದ್ದರಿಂದ ಸರ್ಕಾರಕ್ಕೆ 50 ಸಾವಿರ ರೂ. ನಷ್ಟವಾಗಿದೆ … Read more

ಕಲ್ಯಾಣ ಮಂಟಪದಲ್ಲಿ ಗುರಾಯಿಸಿದ್ದಕ್ಕೆ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ, ಬಿಯರ್‌ ಬಾಟಲಿಯಿಂದ ಚುಚ್ಚಿ ಗಾಯ

crime name image

SHIVAMOGGA LIVE NEWS | 30 APRIL 2024 BHADRAVATHI : ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭದ ವೇಳೆ ಗುರಾಯಿಸಿದ ಎಂಬ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭ ಮುಗಿಸಿ ಮನೆಗೆ ತೆರಳುವಾಗ ದಾಳಿ ನಡೆಸಲಾಗಿದೆ.  ಸಮಾರಂಭದಲ್ಲಿ ಯತಿನ್‌ ಬೋಸ್ಲೆ ಮತ್ತು ಸುಹಾಸ್‌ ಎಂಬುವವರು ಗುರಾಯಿಸಿದ್ದಾರೆ ಎಂದು ಆರೋಪಿಸಿ ನಾಲ್ವರ ಗುಂಪು, ರಸ್ತೆಯಲ್ಲಿ ಇಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದೆ. ಬಿಯರ್‌ … Read more

ಬೆಳ್ಳಂಬೆಳಗ್ಗೆ ಕಸ ಬಿಸಾಡಲು ಮನೆಯಿಂದ ಹೊರ ಬಂದ ಮಹಿಳೆ ಸಾವು, ಹೆದ್ದಾರಿ ಮೇಲಿತ್ತು ಮೃತದೇಹ, ಆಗಿದ್ದೇನು?

200123 Police Jeep With Light jpg

SHIVAMOGGA LIVE NEWS | 30 APRIL 2024 BHADRAVATHI : ಬೆಳಗಿನ ಜಾವ ಕಸ ಬಿಸಾಡಲು ತೆರಳಿದ್ದ ಮಹಿಳೆಗೆ ಭದ್ರಾವತಿ – ಚನ್ನಗಿರಿ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭದ್ರಾವತಿಯ ಶ್ರೀರಾಮನಗರದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಪದ್ಮಮ್ಮ (53) ಮೃತ ದುರ್ದೈವಿ. ಬೆಳಗ್ಗೆ 5.50ಕ್ಕೆ ಪದ್ಮಮ್ಮ ಮನೆ ಕಸ ಗುಡಿಸಿ, ಚಾನಲ್‌ ಬಳಿ ಬಿಸಾಡಿ ಬರಲು ತೆರಳಿದ್ದರು. ರಾಜ್ಯ ಹೆದ್ದಾರಿ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು … Read more

ಭದ್ರಾವತಿ, ಸಾಗರದಲ್ಲಿ ರೂಟ್‌ ಮಾರ್ಚ್‌, ಎಲ್ಲೆಲ್ಲಿ ನಡೆಯಿತು ಪಥ ಸಂಚಲನ?

route-march-by-itbp-police-in-bhadravathi-and-sagara

SHIVAMOGGA LIVE NEWS | 29 APRIL 2024 ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಪೊಲೀಸ ಇಲಾಖೆ ಮತ್ತು ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಸಿಬ್ಬಂದಿ ಪಥ ಸಂಚಲನ ನಡೆಸಿದರು. ಭದ್ರಾವತಿ : ಡಿವೈಎಸ್‌ಪಿ ನಾಗರಾಜ್‌ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಮತ್ತು ಐಟಿಬಿಪಿ ಸಿಬ್ಬಂದಿ ರೂಟ್‌ ಮಾರ್ಚ್‌ ಮಾಡಿದರು. ಗಾಂಧಿ ವೃತ್ತದಿಂದ ಆರಂಭವಾದ ಪಥ ಸಂಚಲನ ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಹೊಳೆಹೊನ್ನೂರು ವೃತ್ತ, ಅನ್ವರ್ ಕಾಲೋನಿ, ಸಂತೆ … Read more

ಮಾರಶೆಟ್ಟಿಹಳ್ಳಿಗೆ ನೂತನ ಅಧ್ಯಕ್ಷ, ಅವಿರೋಧ ಆಯ್ಕೆ

marashettyhalli-grama-panchayat-news-president-kiran-more

SHIVAMOGGA LIVE NEWS | 29 APRIL 2024 HOLEHONNURU : ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಿರಣ್ ರಾವ್ ಮೋರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 14 ಜನ ಸದಸ್ಯ ಬಲದ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರ ಚುನಾವಣೆಯಲ್ಲಿ, ಎಲ್ಲಾ ಸದಸರು ಒಟ್ಟಾಗ ಮುಂದಿನ ಅವಧಿಗೆ ನೂತನ ಅಧ್ಯಕ್ಷರನ್ನಾಗಿ ಕಿರಣ್ ರಾವ್ ಮೋರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಉಪಾಧ್ಯಕ್ಷೆ ನಿರ್ಮಲ, ಮಾಜಿ ಅಧ್ಯಕ್ಷೆ ಲಲಿತಮ್ಮ, ಸದಸ್ಯರಾದ ಮುದ್ದಿರಪ್ಪಾ ಶಾಲಿನಿ, ಗಾಯತ್ರಿ, ಒಬಳಮ್ಮ, ಮಂಜುಳ, ಹನುಮಂತ, ಬಸವರಾಜಪ್ಪ, … Read more

ರಾತ್ರಿ ವಾಕಿಂಗ್‌ ತೆರಳಿದ್ದವರನ್ನು ಅಡ್ಡಗಟ್ಟಿದರು, ಬಿಯರ್‌ ಬಾಟಲಿಯಿಂದ ತಲೆಗೆ ಹೊಡೆದರು, ಇಬ್ಬರು ಆಸ್ಪತ್ರೆಗೆ ದಾಖಲು

crime name image

SHIVAMOGGA LIVE NEWS | 28 APRIL 2024 BHADRAVATHI : ರಾತ್ರಿ ಊಟದ ಮುಗಿಸಿ ವಾಕಿಂಗ್‌ ತೆರಳಿದ್ದವರ ಮೇಲೆ ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ. ಭದ್ರಾವತಿ ನಗರದ ಹೊಸಮನೆ ಬಡಾವಣೆಯ ಶಿವಣ್ಣ ಸಾಮಿಲ್‌ ಬಳಿ ಘಟನೆ ಸಂಭವಿಸಿದೆ. ಕುಲದೀಪ್‌ ಮತ್ತು ನಂದನ್‌ ಎಂಬುವವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಕುಲದೀಪ್‌ ಮತ್ತು ನಂದನ್‌ ಊಟ ಮುಗಿಸಿ ರಾತ್ರಿ ವಾಕಿಂಗ್‌ ತೆರಳಿದ್ದರು. ಈ ವೇಳೆ ಮೂವರು ಯುವಕರು ಇವರನ್ನು ಅಡ್ಡಗಟ್ಟಿ ಮೊಬೈಲ್‌ ಕೊಡುವಂತೆ ಬೆದರಿಸಿದ್ದಾರೆ. ನಿರಾಕರಿಸಿದಾಗ ಇಬ್ಬರ … Read more

ಎಮ್ಮೆಹಟ್ಟಿ ಬಳಿ ಆಯತಪ್ಪಿ ರಸ್ತೆ ಪಕ್ಕದ ಕಾಲುವೆಗೆ ಬಿದ್ದ ಸವಾರ, ಶಿವಮೊಗ್ಗದಲ್ಲಿ ಸಾವು

ACCIDENT-NEWS-GENERAL-IMAGE.

SHIVAMOGGA LIVE NEWS | 26 APRIL 2024 HOLEHONNURU : ಬೈಕಿನಿಂದ ಆಯತಪ್ಪಿ ರಸ್ತೆ ಪಕ್ಕದ ಕಾಲುವೆಗೆ ಬಿದ್ದು ಸವಾರ ಮೃತಪಟ್ಟಿದ್ದಾನೆ. ದಾಸರಕಲ್ಲಹಳ್ಳಿ ಗ್ರಾಮದ ಬಿ.ನೀಲೇಶ್ (25) ಮೃತರು. ಎಮ್ಮೆಹಟ್ಟಿ – ಹೊಳೆಹೊನ್ನೂರು ನಡುವೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾಂಕ್ರಿಟ್ ಕೆಲಸಕ್ಕೆ ದಾಸರಕಲ್ಲಹಳ್ಳಿಯ ಮನೆಯಿಂದ ಶಿವಮೊಗ್ಗಕ್ಕೆ ಬೈಕಿನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಎದುರು ಬಂದ ವಾಹನಕ್ಕೆ ದಾರಿ ಬಿಡಲು ರಸ್ತೆ ಅಂಚಿಗೆ ಬೈಕ್ ಚಲಾಯಿಸಿದ್ದಾರೆ. ಆಗ ಆಯತಪ್ಪಿ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾಲುವೆಗೆ … Read more

ಹೊಳೆಹೊನ್ನೂರು ಬಳಿ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್‌, ಸವಾರ ಸಾವು

Holehonnuru-Police-Station-Bhadravathi-jpg

SHIVAMOGGA LIVE NEWS | 24 APRIL 2024 HOLEHONNURU : ಬೈಕ್ ಸವಾರರೊಬ್ಬರು ಆಯತಪ್ಪಿ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾನೆ. ದಾಸರಕಲ್ಲಹಳ್ಳಿಯ ನೀಲಪ್ಪ (32) ಮೃತ ಬೈಕ್‌ ಸವಾರ. ಬೆಳಿಗ್ಗೆ 10 ಗಂಟೆಗೆ ದಾಸರಕಲ್ಲಹಳ್ಳಿಯಿಂದ ಹೊಳೆಹೊನ್ನೂರಿಗೆ ಹೋಗುತ್ತಿದ್ದಾಗ ಹೊಳೆಹೊನ್ನೂರು ಪಟ್ಟಣ ಸಮೀಪ ಬೈಕ್ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದ್ದಾರೆ. ತಕ್ಷಣವೆ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಅಸುನೀಗಿದ್ದಾರೆ.  ಇದನ್ನೂ ಓದಿ – ಶಿವಮೊಗ್ಗದಲ್ಲಿ ನಡುರಾತ್ರಿ ಬ್ಯಾಂಕ್‌ಗೆ ನುಗ್ಗಿದ ಕಳ್ಳರು, ಸ್ಟ್ರಾಂಗ್‌ ರೂಂ ಲಾಕ್‌ ತೆಗೆಯಲು … Read more