ಭದ್ರಾವತಿಯ ಯುವಕನಿಗೆ 3 ವರ್ಷ ಜೈಲು, 2.88 ಲಕ್ಷ ರೂ. ದಂಡ, ಕಾರಣವೇನು?

Shimoga District Court

SHIVAMOGGA LIVE | 28 JUNE 2023 SHIMOGA : ಹನ್ನೊಂದು ವರ್ಷದ ಬಾಲಕಿಗೆ ಲೈಂಗಿಕ ಕಿರಿಕುಳ ನೀಡಿದ ವ್ಯಕ್ತಿಗೆ ನ್ಯಾಯಾಲಯವು 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ (Imprisonment) ಮತ್ತು 2.80 ಲಕ್ಷ ರೂ. ದಂಡ ವಿಧಿಸಿದೆ. 2019ರಲ್ಲಿ ಭದ್ರಾವತಿಯಲ್ಲಿ 23 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿ ದೂರು ನೀಡಿದ್ದಳು. ಭದ್ರಾವತಿ ಓಲ್ಡ್‌ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿ ಎನ್‌.ನಂಜಪ್ಪ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ … Read more

ಶಿವಮೊಗ್ಗ – ಭದ್ರಾವತಿ ಟ್ರ್ಯಾಕ್ಸ್‌ ಉದ್ಯಮಕ್ಕೆ ‘ಗ್ಯಾರಂಟಿʼ ಸಂಕಷ್ಟ, ಏನದು? ಎಷ್ಟಿವೆ ಟ್ರ್ಯಾಕ್ಸ್‌? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

Shimoga-Bhadravathi-Trax-Taxi

SHIVAMOGGA LIVE | 7 JUNE 2023 SHIMOGA : ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಜೂ.11ರಂದು ಈ ಗ್ಯಾರಂಟಿ ಯೋಜನೆ ಜಾರಿಯಾಗುತ್ತಿದೆ. ಇದರಿಂದ ಶಿವಮೊಗ್ಗ – ಭದ್ರಾವತಿ ನಡುವೆ ಸಂಚರಿಸುತ್ತಿರುವ ಟ್ರ್ಯಾಕ್ಸ್‌ಗಳಿಗೆ (Trax) ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ಈಗಾಗಲೆ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮ ಮತ್ತಷ್ಟು ‘ಶಕ್ತಿ’ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಶಿವಮೊಗ್ಗ – ಭದ್ರಾವತಿ ಮಾರ್ಗದಲ್ಲಿ ಸರ್ಕಾರಿ ಬಸ್ಸುಗಳು ಬಿಟ್ಟರೆ ಟ್ರ್ಯಾಕ್ಸ್‌ಗಳೆ (Trax) ಪ್ರಮುಖ ಸಾರ್ವಜನಿಕ … Read more

ಭದ್ರಾವತಿ ಹೊಸ ಸಿದ್ದಾಪುರದಲ್ಲಿ ಮತ್ತೊಮ್ಮೆ ಸರಣಿ ಕಳ್ಳತನ, ಮೂರು ಮನೆ ಬೀಗ ಒಡೆದು ಖದೀಮರು

House-Theft-at-Bhadravathi-Hosa-Siddapura-layout.

SHIVAMOGGA LIVE | 31 MAY 2023 BHADRAVATHI : ಹೊಸ ಸಿದ್ದಾಪುರ ಬಡಾವಣೆಯಲ್ಲಿ ಮತ್ತೊಮ್ಮೆ ಸರಣಿ ಕಳ್ಳತನವಾಗಿದೆ (Serial Theft). ಮೂರು ಮನೆಗಳ ಬೀಗ ಒಡೆದಿರುವ ಕಳ್ಳರು ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ. ಹೊಸ ಸಿದ್ದಾಪುರ ಬಡಾವಣೆಯ ಮೂರನೇ ತಿರುವಿನಲ್ಲಿರುವ ದೇವರಾಜ್‌ ಎಂಬುವವರ ಮನೆಯಲ್ಲಿ 50 ಗ್ರಾಂ ಬಂಗಾರ, ಶಾರದಮ್ಮ ಎಂಬುವವರ ಮೆನಯಲ್ಲಿ 10 ಸಾವಿರ ರೂ. ನಗದು, 8ನೇ ತಿರುವಿನಲ್ಲಿರುವ ಮಣಿ ಎಂಬುವವರ ಮನೆಯಲ್ಲಿ 15 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿ … Read more

ಮಗಳ ಹುಟ್ಟುಹಬ್ಬಕ್ಕೆ ಆಹ್ವಾನ ಪತ್ರಿಕೆ ಬದಲು ಸುತ್ತೋಲೆ ಹೊರಡಿಸಿದ ಕುಲಪತಿ, ಏನಿದು ಪ್ರಕರಣ?

VC-Prof-Veerabhadrappa-circular-about-daughter-Birthday

SHIVAMOGGA LIVE | 28 MAY 2023 SHIMOGA : ಪ್ರಮುಖ ಸೂಚನೆಗಳನ್ನು ಸಿಬ್ಬಂದಿಗೆ ನೀಡಲು ವಿವಿಧ ಇಲಾಖೆ, ಸರ್ಕಾರಿ ಸಂಸ್ಥೆಗಳಲ್ಲಿ ಪ್ರತಿದಿನ ಒಂದಿಲ್ಲೊಂದು ಸುತ್ತೋಲೆ (Circular) ಹೊರಡಿಸಲಾಗುತ್ತದೆ. ಅದರೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ತಮ್ಮ ಮಗಳ ಹುಟ್ಟಹಬ್ಬದ ಔತಣಕೂಟಕ್ಕೆ ಸುತ್ತೋಲೆ ಹೊರಡಿಸಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ. ಪ್ರೊ. ಬಿ.ಪಿ.ವೀರಭದ್ರಪ್ಪ ಅವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ವಿವಿಯ ಅಧ್ಯಾಪಕರು, ಅಧ್ಯಾಪಕೇತರ ನೌಕರರು, ಅತಿಥಿ ಉಪನ್ಯಾಸಕರು, ಏಜೆನ್ಸಿ ನೌಕರರನ್ನು ಆಹ್ವಾನಿಸಿದ್ದಾರೆ. ಇದಕ್ಕಾಗಿ ಆಮಂತ್ರಣ ಪತ್ರಿಕೆ ಬದಲು ಸುತ್ತೋಲೆ … Read more

ಹೈಕಮಾಂಡ್‌ ವಿರುದ್ಧ ಭದ್ರಾವತಿ ಕೈ ಕಾರ್ಯಕರ್ತರು ಗರಂ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಪೋಸ್ಟ್, ಕಾರಣವೇನು?

BK-Sangameshwara-In-Shimoga-Protest-March.

SHIVAMOGGA LIVE | 28 MAY 2023 BHADRAVATHI : ಶಾಸಕ ಬಿ.ಕೆ.ಸಂಗಮೇಶ್ವರ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅವರ ಬೆಂಬಲಿಗರು ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಆಕ್ರೋಶ ಹೊರ ಹಾಕಿದ್ದಾರೆ. ಹೈ ಕಮಾಂಡ್‌ ವಿರುದ್ಧ ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ. ಬಿ.ಕೆ.ಸಂಗಮೇಶ್ವರ ಅವರು ಭದ್ರಾವತಿಯಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ. ಈ ಹಿಂದೆ ಅವರು ಸಚಿವರಾಗುವ ಅವಕಾಶ ಕೈ ತಪ್ಪಿತ್ತು. ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು, ಸಂಗಮೇಶ್ವರ್‌ ಅವರಿಗೆ … Read more

ಬೈಪಾಸ್‌ ರಸ್ತೆಯಲ್ಲಿ ಹಿಟ್‌ ಅಂಡ್‌ ರನ್‌ ಅಪಘಾತ, ತಪ್ಪಿದ ಭಾರಿ ಅನಾಹುತ, ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

Hit-and-Run-at-Bhadravathi-Bypass-Dash-Cam-photo-grab

SHIVAMOGGA LIVE | 27 MAY 2023 BHADRAVATHI : ಓವರ್‌ ಟೇಕ್‌ ಸಂದರ್ಭ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಬೈಕ್‌ ಸವಾರರಿಬ್ಬರು ಪಾರಾಗಿದ್ದಾರೆ. ಈ ಹಿಟ್‌ ಅಂಡ್‌ ರನ್‌ ಅಪಘಾತದ ದೃಶ್ಯವು ಮತ್ತೊಂದು ಕಾರಿನ ಡ್ಯಾಶ್‌ ಬೋರ್ಡ್‌ ಕ್ಯಾಮರಾದಲ್ಲಿ (dash cam) ಸೆರೆಯಾಗಿದೆ. ಹೇಗಾಯ್ತು ಘಟನೆ? ಕೃಷ್ಣ ಮೂರ್ತಿ ಮತ್ತು ಸಂತೋಷ್‌ ಎಂಬುವವರು ಶಿವಮೊಗ್ಗದಿಂದ ತರೀಕೆರೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಭದ್ರಾವತಿ ಬೈಪಾಸ್‌ ರಸ್ತೆಯ ಸಿದ್ಧಾಪುರದ ಬಳಿ ಓಮ್ನಿ ಕಾರನ್ನು ಬೈಕ್‌ ಓವರ್‌ಟೇಕ್‌ ಮಾಡುತ್ತಿತ್ತು. ಇದೇ … Read more

ಭದ್ರಾ ನಾಲೆಯಲ್ಲಿ ಮುಂದುವರೆದ ಸರ್ಚ್‌ ಆಪರೇಷನ್‌, ಇಬ್ಬರ ಮೃತದೇಹ ಪತ್ತೆ, ಹೇಗಾಯ್ತು ಘಟನೆ?

Three-Drowned-in-Bhadra-Canal-in-Lakkavalli-in-Chikkamagaluru

SHIVAMOGGA LIVE NEWS | 23 MAY 2023 LAKKAVALLI : ಭದ್ರಾ ನಾಲೆಯಲ್ಲಿ (Bhadra Canal) ನೀರು ಪಾಲಾಗಿದ್ದ ಮೂವರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಯುವತಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮನೆ ಮಕ್ಕಳನ್ನು ಕಳೆದುಕೊಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕ ಆವರಿಸಿದೆ. ಲಕ್ಕವಳ್ಳಿ ಸಮೀಪ ಭದ್ರಾ ಬಲದಂಡೆ ನಾಲೆಯಲ್ಲಿ (Bhadra Canal) ಭಾನುವಾರ ಸಂಜೆ ನಂಜನಗೂಡಿನ ಶಾಮವೇಣಿ (16), ಶಿವಮೊಗ್ಗದ ಸೋಮಿನಕೊಪ್ಪದ ಅನನ್ಯಾ (16) ಮತ್ತು ಲಕ್ಕವಳ್ಳಿಯ … Read more

ಭದ್ರಾವತಿಯ ಮಹಿಳೆಗೆ 10 ತಿಂಗಳು ಜೈಲು, ಕಾರಣವಾಯ್ತು ಸಾಮಾಜಿಕ ಜಾಲತಾಣದ ಪೋಸ್ಟ್‌, ಏನಿದು ಪ್ರಕರಣ?

200123 Police Jeep With Light jpg

SHIVAMOGGA LIVE NEWS | 20 MAY 2023 SHIMOGA : ಫೋಟೊಗಳ ಮೇಲೆ ಅಶ್ಲೀಲವಾಗಿ ಬರೆದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಸ್ಟ್‌ ಮಾಡಿದ್ದ ಮಹಿಳೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಭದ್ರಾವತಿಯ ಮಹಿಳೆಗೆ ಶಿಕ್ಷೆ ಹಳೆ ದ್ವೇಷದ ಹಿನ್ನೆಲೆ ಭದ್ರಾವತಿಯ 30 ವರ್ಷದ ಮಹಿಳೆಯೊಬ್ಬಳು 6 ವರ್ಷದ ಬಾಲಕಿ, ಆಕೆಯ ಕಟುಂಬದ ಫೋಟೊಗಳ ಮೇಲೆ ಅಶ್ಲೀಲವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್‌ ಪ್ರಕಟಿಸಿದ್ದಳು. ಈ ಸಂಬಂಧ ಬಾಲಕಿಯ ತಾಯಿ ಭದ್ರಾವತಿಯ … Read more

ಭದ್ರಾವತಿಯ ಪ್ರಮುಖ ಬೀದಿಗಳಲ್ಲಿ ದಿಂಡಿ ಉತ್ಸವದ ವೈಭವದ ಮೆರವಣಿಗೆ, ಮೂರು ದಿನದ ಉತ್ಸವ ಹೇಗಿತ್ತು?

Bhavasara-Kshatirya-Samaja-Bhadravathi-Dindi-Utsava

SHIVAMOGGA LIVE NEWS | 19 MAY 2023 BHADRAVATHI : ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ದಿಂಡಿ ಉತ್ಸವ ಅಂಗವಾಗಿ ಭದ್ರಾವತಿ ಪಟ್ಟಣದಲ್ಲಿ ರಾಜಬೀದಿ ಮೆರವಣಿಗೆ (Procession) ನಡೆಯಿತು. ಸಮಾಜದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀ ಕೃಷ್ಣ ರುಕ್ಮಿಣಿಯರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕಾರದ ವಾಹನದಲ್ಲಿ ಇರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರಣಿಗೆ ನಡೆಸಲಾಯಿತು. ವಾದ್ಯ ತಂಡಗಳೊಂದಿಗೆ ದೇವರ ನಾಮ ಜಪಿಸುತ್ತ ಭಕ್ತರು ಹೆಜ್ಜೆ ಹಾಕಿದರು. ನಂತರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಸಲಾಯಿತು. WATCH VIDEO … Read more

ಬಿಳಕಿ ಕ್ರಾಸ್‌ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್‌ ಸವಾರ ಬಲಿ

ACCIDENT-NEWS-GENERAL-IMAGE.

SHIVAMOGGA LIVE NEWS | 15 MAY 2023 SHIMOGA : ಸ್ಕೂಟಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ಮಧ್ಯೆ ಅಪಘಾತ ಸಂಭವಿಸಿ ಒಬ್ಬರು ಸಾವನ್ನಪ್ಪಿದ್ದಾರೆ. ಸ್ಕೂಟಿ (Scooty) ಸವಾರ ಗಿರೀಶ್‌ ಮೃತ ವ್ಯಕ್ತಿ. ಇದನ್ನೂ ಓದಿ – ಶಿವಮೊಗ್ಗದ ಸ್ನೇಕ್‌ ಕಿರಣ್‌ ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌, ಶಿವಮೊಗ್ಗ ಕಡೆಗೆ ಬರುತ್ತಿದ್ದ ಸ್ಕೂಟಿಗೆ (Scooty) ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಗಿರೀಶ್‌ ಮೃತಪಟ್ಟಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. WATCH VIDEO