ಭದ್ರಾವತಿ ಅತ್ತಿಗುಂದ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆ, ಅವಿರೋಧ ಆಯ್ಕೆ

BHADRAVATHI-MAP-GRAPHICS

SHIVAMOGGA LIVE NEWS | BHADRAVATHI | 8 ಜೂನ್ 2022 ಭದ್ರಾವತಿ ಅತ್ತಿಗುಂದ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆಯ ಆಯ್ಕೆ ಮಾಡಲಾಗಿದೆ. ಬೇಬಿ ಶಾಲಿನಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರತ್ನಮ್ಮ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಬೇಬಿ ಶಾಲಿನಿ ಅವರು ನೂತನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು, ಉಪಾಧ್ಯಕ್ಷೆಯಾಗಿ ಮೊಸೀನಾ ಬಾನು ಅವರು ಮುಂದುವರೆದಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಅವರು ಚುನಾವಣಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ – ತೀರ್ಥಹಳ್ಳಿಯ ತೇಜಸ್ವಿನಿ … Read more

ಭದ್ರಾವತಿ ಸರ್ ಎಂ.ವಿ ಕಾಲೇಜು ಉಪನ್ಯಾಸಕರಿಗೆ ಚಿನ್ನದ ಪದಕ, ರಾಷ್ಟ್ರಮಟ್ಟಕ್ಕೆ ಆಯ್ಕೆ

Bhadaravathi-Varadaraju-to-National-level

SHIVAMOGGA LIVE NEWS | MEDAL | 4 ಜೂನ್ 2022 ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಸ್ಪರ್ಧೆಯ ವೇಯ್ಟ್ ಲಿಫ್ಟಿಂಗ್’ನಲ್ಲಿ ಭದ್ರಾವತಿಯ ವರದರಾಜು ಅವರು ಗೆಲುವು ಸಾಧಿಸಿದ್ದಾರೆ. ಸರ್ ಎಂ.ವಿ.ಕಾಲೇಜು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ವರದರಾಜು ಅವರು ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ ಗಳಿಸಿದ್ದಾರೆ. ಅವರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ – ಆನವೇರಿಯಲ್ಲಿ ಜಾತ್ರೆ ಹಿನ್ನೆಲೆ, ಮೆಸ್ಕಾಂ ವತಿಯಿಂದ ಜನರಿಗೆ ಎಚ್ಚರಿಕೆ, ಕಾರಣವೇನು? ನಿಮ್ಮೂರು, … Read more

ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸಾವು

Bhadravathi Name Graphics

SHIVAMOGGA LIVE NEWS | ACCIDENT | 2 ಜೂನ್ 2022 ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸವಾರರಿಬ್ಬರು ಮೃತಪಟ್ಟಿದ್ದಾರೆ. ಅತಿ ವೇಗವೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಭದ್ರಾವತಿ ತಾಲೂಕು ಹುಣಸೆಕಟ್ಟೆ ಜಂಕ್ಷನ್ ಸಮೀಪ ಘಟನೆ ಸಂಭವಿಸಿದೆ. ಉತ್ತಮ ಚಕ್ರವರ್ತಿ ಮತ್ತು ಮನೋಜ್ ಮೃತ ದುರ್ದೈವಿಗಳು. ಕಳೆದ ರಾತ್ರಿ ಬೈಕಿನಲ್ಲಿ ಭದ್ರಾವತಿ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಜಂಕ್ಷನ್ ಸರ್ಕಲ್’ನಿಂದ ಭದ್ರಾವತಿ ರಸ್ತೆಯಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ … Read more

ರಾಜ್ಯಸಭೆ, ಎಂಎಲ್’ಸಿ ಟಿಕೆಟ್ ನಿರಾಕರಿಸಿದ ಭದ್ರಾವತಿ ಮೂಲದ ಯುವ ಮುಖಂಡ

Youth-Congress-President-BV-Srinivas

SHIVAMOGGA LIVE NEWS | YOUTH | 30 ಮೇ 2022 ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗದೆ ಹಲವರು ಮುನಿಸಿಕೊಳ್ಳುತ್ತಾರೆ, ಪಕ್ಷವನ್ನೇ ತೊರೆಯುತ್ತಾರೆ. ಆದರೆ ಭದ್ರಾವತಿ ಮೂಲದ ಯುವ ನಾಯಕನೊಬ್ಬ ಎರಡು ಭಾರಿ ಟಿಕೆಟ್ ನಿರಾಕರಿಸಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಎರಡು ಭಾರಿ ಟಿಕೆಟ್ ನಿರಾಕರಿಸಿದ್ದಾರೆ. ಇವರ ನಡೆ ಕಾಂಗ್ರೆಸ್ ಪಕ್ಷದಲ್ಲಿ ಹಲವರ ಹುಬ್ಬೇರುವಂತೆ ಮಾಡಿದೆ. ‘ಈಗ ಕೆಲಸ ಮಾಡುವುದಿದೆ’ ಬಿ.ವಿ.ಶ್ರೀನಿವಾಸ್ ಅವರಿಗೆ ಕರ್ನಾಟಕದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಸೂಚಿಸಿತ್ತು. … Read more

ಕೋಳಿ ಫೀಡ್ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಬರ್ಬರ ಸಾವು

Bhadravathi-Chiken-Feed-Accident

SHIVAMOGGA LIVE NEWS | DEATH | 28 ಮೇ 2022 ಕೋಳಿ ಆಹಾರ ತಯಾರಿಸುವ ಯಂತ್ರಕ್ಕೆ ಸಿಲುಕಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಭದ್ರಾವತಿಯ ಲೋಯರ್ ಹುತ್ತಾದಲ್ಲಿರುವ ಫ್ಯಾಕ್ಟರಿಯಲ್ಲಿ ಘಟನೆ ಸಂಭವಿಸಿದೆ. ಭದ್ರಾವತಿಯ ಸೆಂದಿಲ್ ಕುಮಾರ್ (35) ಮೃತ ಕಾರ್ಮಿಕ. ಲೋಯರ್ ಹುತ್ತಾದ ಆರ್.ಎಸ್.ಪ್ಯಾರಾ ಸಿಟಿಕಲ್ ಫ್ಯಾಕ್ಟರಿಯಲ್ಲಿ ಘಟನೆ ಸಂಭವಿಸಿದೆ. ಭೂತನಗುಡಿ ನಿವಾಸಿ ಸೆಂದಿಲ್ ಕುಮಾರ್, ಫೀಡ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿದ್ದಾರೆ. ಹೊಟ್ಟೆಯ ಎಡ ಭಾಗದಲ್ಲಿ ಗಂಭೀರ ಗಾಯವಾಗಿದೆ. ಸ್ಥಳದಲ್ಲೇ ಸೆಂದಿಲ್ ಕುಮಾರ್ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಭದ್ರಾವತಿ … Read more

ಇನ್ಮುಂದೆ ಮಂಡಕ್ಕಿನೂ ದುಬಾರಿ, ಭದ್ರಾವತಿ ಮೀಟಿಂಗ್’ನಲ್ಲಿ ನಿರ್ಧಾರ, ಈಗೆಷ್ಟಾಯ್ತು ದರ?

Mandakki-Price-to-increase-in-Shimoga

SHIVAMOGGA LIVE NEWS | PUFFED RICE | 27 ಮೇ 2022 ಅಗತ್ಯ ವಸ್ತುಗಳ ಬೆಲೆ ದಿನೇ ದಿನೆ ಗಗನಕ್ಕೇರುತ್ತಿದೆ. ಈ ಮದ್ಯೆ ಮಂಡಕ್ಕಿ ದರ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಭದ್ರಾವತಿಯ ಸೀಗೆಬಾಗಿಯಲ್ಲಿ ನಡೆದ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಮತ್ತು ಮಾರಾಟ, ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಎಷ್ಟಾಯ್ತು ಮಂಡಕ್ಕಿ ದರ? ಭತ್ತದ ಬೆಲೆ ಹೆಚ್ಚಳವಾಗಿದೆ. ವಿದ್ಯುತ್ ದರವು ದುಬಾರಿಯಾಗಿದೆ. ಕಾರ್ಮಿಕರ ಕೂಲಿ, ಕಚ್ಚಾ ವಸ್ತುಗಳ ಬೆಲೆಯು ಏರಿಕೆಯಾಗಿದೆ. ಇಂತಹ … Read more

ಭದ್ರಾವತಿ ಪೊಲೀಸರ ದಾಳಿ, 9 ನಾಡ ಬಂದೂಕು ವಶಕ್ಕೆ, ಒಬ್ಬ ಅರೆಸ್ಟ್

Bhadravathi-Police-Seize-guns-at-Shankaraghatta

SHIVAMOGGA LIVE NEWS | GUN | 26 ಮೇ 2022 ಪರವಾನಗಿ ಇಲ್ಲದೆ ಬಂದೂಕು ರಿಪೇರಿ ಮಾಡುತ್ತಿದ್ದ ಆರೋಪ ಸಂಬಂಧ ಪೊಲೀಸರು ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ 9 ನಾಡ ಬಂದೂಕುಗಳನ್ನು (GUN) ವಶಕ್ಕೆ ಪಡೆದಿದ್ದಾರೆ. ಪಾಲಾಕ್ಷಪ್ಪ (47) ಬಂಧಿತ. ಭದ್ರಾವತಿ ತಾಲೂಕು ಶಂಕರಘಟ್ಟ ಗ್ರಾಮದ ಮನೆಯಲ್ಲಿ ಪಾಲಾಕ್ಷಪ್ಪ ನಾಡ ಬಂದೂಕುಗಳ ರಿಪೇರಿ ಮಾಡುತ್ತಿದ್ದ. ಖಚಿತ ಮಾಹಿತಿ ಹಿನ್ನೆಲೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪಾಲಾಕ್ಷಪ್ಪನ … Read more

ಶಿವಮೊಗ್ಗದ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ, ಯಾವ್ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು?

Bhadra-Dam-General-Images

SHIVAMOGGA LIVE NEWS | DAM LEVEL | 20 ಮೇ 2022 ಭಾರಿ ಮಳೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ತುಂಗಾ ಜಲಾಶಯ ಭರ್ತಿ ಆಗಿರುವುದರಿಂದ ಇಲ್ಲಿ ಹೊರ ಹರಿವು ಕೂಡ ದಾಖಲಾಗಿದೆ. ಯಾವ್ಯಾವ ಜಲಾಶಯದಲ್ಲಿ ಎಷ್ಟಿದೆ ನೀರು? ಲಿಂಗನಮಕ್ಕಿ ಜಲಾಶಯಕ್ಕೆ 11,125 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಪ್ರಸ್ತುತ 1763.65 ಅಡಿಯಷ್ಟು ನೀರಿದೆ. ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯ … Read more

ನಡುರಾತ್ರಿ ಮನೆಯೊಳಗೆ ನುಗ್ಗಿದ ಅಪರಿಚಿತ, ಯಜಮಾನನ ಮುಖಕ್ಕೆ ಬ್ಲೇಡ್’ನಿಂದ ಇರಿದ

theft case general image

SHIVAMOGGA LIVE NEWS | BLADE | 17 ಮೇ 2022 ಮನೆಯೊಳಗೆ ಮಲಗಿದ್ದ ವ್ಯಕ್ತಿಯೊಬ್ಬರ ಕೆನ್ನೆ, ಹಣೆ, ಕುತ್ತಿಗೆಗೆ ಅಪರಿಚಿತನೊಬ್ಬ ಬ್ಲೇಡ್’ನಿಂದ (BLADE) ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಭದ್ರಾವತಿ (BHADRAVATHI) ತಾಲೂಕು ರಾಮನಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಯಲವಟ್ಟಿ ಗ್ರಾಮದ ಕುಮಾರನಾಯ್ಕ ಗಾಯಾಳು ಹೇಗಾಯ್ತು ಘಟನೆ? ಯಲವಟ್ಟಿಯ ಕುಮಾರನಾಯ್ಕ ರಾಮನಕೊಪ್ಪದಲ್ಲಿರುವ ತನ್ನ ಹೆಂಡತಿ ಮನೆಯಲ್ಲಿ ವಾಸವಿದ್ದ. ಭಾನುವಾರ ರಾತ್ರಿ 1.30ರ ಹೊತ್ತಿಗೆ ಅಪರಿಚಿತನೊಬ್ಬ ಮನೆಯೊಳಗೆ ಪ್ರವೇಶ ಮಾಡಿದ್ದಾನೆ. … Read more

ಭದ್ರಾವತಿಯಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ವೈಭವದ ಬ್ರಹ್ಮರಥೋತ್ಸವ

Bhadravathi-Lakshmi-Narasimha-Swamy-Ratotsava

SHIVAMOGGA LIVE NEWS | TEMPLE | 17 ಮೇ 2022 ಭದ್ರಾವತಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು, ರಥೋತ್ಸವವನ್ನು ಕಣ್ತುಂಬಿಕೊಂಡರು. ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಸೋಮವಾರ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಎದುರು ಹೂವಿನಿಂದ ಅಲಂಕರಿಸಿದ ರಥದಲ್ಲಿ ಭೂದೇವಿ ಶ್ರೀದೇವಿ ಸಹಿತನಾದ ಶ್ರೀನಿವಾಸಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ – ಶಿವಮೊಗ್ಗ … Read more