ಮಹಾರಾಷ್ಟ್ರದಿಂದ ಬಂದವರಿಗೆ ರಾತ್ರೋರಾತ್ರಿ ಕ್ವಾರಂಟೈನ್‌ಗೆ ಯತ್ನ, ಭದ್ರಾವತಿ ಜಂಕ್ಷನ್‌ನಲ್ಲಿ ಸ್ಥಳೀಯರ ಆಕ್ರೋಶ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 23 ಮೇ 2020 ಮಹಾರಾಷ್ಟ್ರದಿಂದ ಬಂದವರ ಹಾಸ್ಟೆಲ್ ಕ್ವಾರಂಟೈನ್‍ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಭದ್ರಾವತಿ ತಾಲೂಕು ಜಂಕ್ಷನ್‍ನಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿಗಾಗಲಿ, ಗ್ರಾಮಸ್ಥರಿಗಾಗಲಿ ತಿಳಿಸದೆ ಏಕಾಏಕಿ ಕ್ವಾರಂಟೈನ್ ಮಾಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರದಿಂದ ಬಂದಿರುವ 18 ಮಂದಿಯನ್ನು ಇಲ್ಲಿನ ಸರ್ಕಾರಿ ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲು ಕರೆತರಲಾಗಿತ್ತು. ಗ್ರಾಮಸ್ಥರಿಗೆ ತಿಳಿಸದೆಯೆ ಏಕಾಏಕಿ ಬಂದು ಕ್ವಾರಂಟೈನ್ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಭದ್ರಾವತಿ ಗ್ರಾಮಾಂತರ ಠಾಣೆ … Read more